Advertisement
ಶುಕ್ರವಾರ ರಾತ್ರಿ ಇಲ್ಲಿ ನಡೆದ ಪಂದ್ಯವನ್ನು ಕೆರಿಬಿಯನ್ ಪಡೆ 7 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 6 ವಿಕೆಟಿಗೆ 155 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ 17 ಓವರ್‌ಗಳಲ್ಲಿ ಮೂರೇ ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಿತು. ಇಲ್ಲೇ ನಡೆದ ಮೊದಲ ಪಂದ್ಯದಲ್ಲಿ ವಿಂಡೀಸ್ 25 ರನ್ನುಗಳಿಂದ ಜಯಿಸಿತ್ತು.ವಿಂಡೀಸಿನ ಬಿಗ್ ಹಿಟ್ಟರ್ ಆ್ಯಂಡ್ರೆ ರಸೆಲ್ ಕೇವಲ 14 ಎಸೆತಗಳಿಂದ ಅಜೇಯ 40 ರನ್ ಬಾರಿಸಿ ಲಂಕಾ ಬೌಲಿಂಗನ್ನು ಪುಡಿಗಟ್ಟಿದರು. ಇದರಲ್ಲಿ 6 ಭರ್ಜರಿ ಸಿಕ್ಸರ್ ಸೇರಿತ್ತು. ಆರಂಭಕಾರ ಬ್ರ್ಯಾಂಡನ್ ಕಿಂಗ್ 21 ಎಸೆತಗಳಿಂದ 43 ರನ್ (6 ಬೌಂಡರಿ, 2 ಸಿಕ್ಸರ್), ಶಿಮ್ರನ್ ಹೆಟ್‌ಮೈರ್ 42 ಎಸೆತಗಳಿಂದ ಅಜೇಯ 43 ರನ್ ಹೊಡೆದರು.