Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ನಿಕೋಲಾಸ್ ಪೂರಣ್ ಮತ್ತು ರೋಮನ್ ಪೊವೆಲ್ ಅವರ ತಾಳ್ಮೆಯ ಆಟದಿಂದಾಗಿ 6 ವಿಕೆಟಿಗೆ 149 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಆರಂಭಿಕರಾದ ಬ್ರ್ಯಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ ಎಚ್ಚರಿಕೆಯಿಂದ ಆಡಿ ಮೊದಲ ವಿಕೆಟಿಗೆ 29 ರನ್ ಪೇರಿಸಿದರು. ಈ ಜೋಡಿ ಮುರಿದ ಬಳಿಕ ತಂಡ ಇನ್ನೆರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಮೇಯರ್ ಮತ್ತು ಜಾನ್ಸನ್ ಚಾರ್ಲ್ಸ್ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲರಾದರು.
Related Articles
Advertisement
ರೊಮಾರಿಯೋ ಶೆಫರ್ಡ್ ಎಸೆದ ಕೊನೆಯ ಓವರ್ ನಲ್ಲಿ ಗೆಲ್ಲಲು 10 ರನ್ ಅಗತ್ಯವಿತ್ತು. ಭಾರತ 2 ವಿಕೆಟ್ ಕಳೆದುಕೊಂಡಿತು, 5 ರನ್ ಮಾತ್ರ ಗಳಿಸಲು ಶಕ್ತವಾಯಿತು. ಯುಜುವೇಂದ್ರ ಚಾಹಲ್ 1 ರನ್ ಗಳಿಸಿ ಔಟಾಗದೆ ಉಳಿದರು, ಕೊನೆಯ ಎಸೆತದಲ್ಲಿ 6 ರನ್ ಅಗತ್ಯವಿತ್ತು , ಆದರೆ ಮುಖೇಶ್ ಕುಮಾರ್ ಅವರಿಗೆ ಕೊನೆಯ ಎಸೆತದಲ್ಲಿ ಗೆಲುವು ತಂದು ಕೊಡುವುದು ಅಸಾಧ್ಯವಾಯಿತು.
ವಿಂಡೀಸ್ ಪರ ಬಿಗಿ ದಾಳಿ ನಡೆಸಿದ ಒಬೆಡ್ ಮೆಕಾಯ್, ಜೇಸನ್ ಹೋಲ್ಡರ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 2 ವಿಕೆಟ್, ಅಕೇಲ್ ಹೊಸೈನ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಜೇಸನ್ ಹೋಲ್ಡರ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್ 6 ವಿಕೆಟಿಗೆ 149 (ಬ್ರ್ಯಾಂಡನ್ ಕಿಂಗ್ 28, ನಿಕೋಲಾಸ್ ಪೂರಣ್ 41, ರೋಮನ್ ಪೊವೆಲ್ 48, ಯಜುವೇಂದ್ರ ಚಹಲ್ 24ಕ್ಕೆ 2, ಅರ್ಷದೀಪ್ ಸಿಂಗ್ 31ಕ್ಕೆ 2).ಭಾರತ :9 ವಿಕೆಟಿಗೆ 145 (20 ಓವರ್)