Advertisement

ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಕಟ್ಟಿದ ವಿಂಡೀಸ್: 3 ವರ್ಷದ ಬಳಿಕ ತಂಡ ಸೇರಿದ ರೋಚ್

02:43 PM Jan 27, 2022 | Team Udayavani |

ಕಿಂಗ್ ಸ್ಟನ್: ಮುಂದಿನ ತಿಂಗಳ ಮೊದಲ ವಾರದಿಂದ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಿಸಿದೆ. ಹಿರಿಯ ವೇಗದ ಬೌಲರ್ ಕೇಮರ್ ರೋಚ್ ಅವರು ಸುಮಾರು ಮೂರು ವರ್ಷಗಳ ಬಳಿಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

Advertisement

2019ರ ಆಗಸ್ಟ್ ನಲ್ಲಿ ಭಾರತದ ವಿರುದ್ಧ ಆಡಿದ ಬಳಿಕ ಕೇಮರ್ ರೋಚ್ ಅವರು ಯಾವುದೇ ಸೀಮಿತ ಓವರ್ ಪಂದ್ಯಾಟ, ಲಿಸ್ಟ್ ಎ ಪಂದ್ಯ, ಅಥವಾ ಟಿ20 ಪಂದ್ಯವಾಡಿಲ್ಲ. ಆದರೆ ಭಾರತದಂತಹ ಬಲಿಷ್ಠ ತಂಡದ ಆರಂಭಿಕ ವಿಕೆಟ್ ಪಡೆಯಲು ಕೇಮರ್ ರೋಚ್ ರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ವಿಂಡೀಸ್ ಆಯ್ಕೆ ಸಮಿತಿ ಮುಖ್ಯಸ್ಥ ಡೆಸ್ಮಂಡ್ ಹೇಯ್ನ್ಸ್ ಹೇಳಿದ್ದಾರೆ.

ರೋಚ್ ಅವರೊಂದಿಗೆ ಬ್ಯಾಟರ್ ಗಳಾದ ಬ್ರಾಂಡನ್ ಕಿಂಗ್ ಮತ್ತು ಬೋನರ್ ತಂಡಕ್ಕೆ ಮರಳಿದ್ದಾರೆ. ಫ್ಯಾಬಿಯನ್ ಅಲೆನ್ ಕೂಡಾ ತಂಡಕ್ಕೆ ಸೇರ್ಪಡೆಯಾಗಿದ್ದು, ರೋಸ್ಟನ್ ಚೇಸ್ ಮತ್ತು ಜಸ್ಟಿನ್ ಗ್ರೀವ್ಸ್ ರನ್ನು ಕೈಬಿಡಲಾಗಿದೆ.

ಇದನ್ನೂ ಓದಿ:ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಮೂರು ಪಂದ್ಯಗಳ ಏಕದಿನ ಸರಣಿ ಫೆ.6ರಂದು ಆರಂಭವಾಗಲಿದೆ. ಫೆ.9 ಮತ್ತು 11ರಂದು ಉಳಿದ ಪಂದ್ಯಗಳು ನಡೆಯಲಿದ್ದು, ಎಲ್ಲಾ ಪಂದ್ಯಗಳು ಅಹಮದಾಬಾದ್ ನಲ್ಲಿ ನಡೆಯಲಿದೆ.

Advertisement

ವೆಸ್ಟ್ ಇಂಡೀಸ್ ಏಕದಿನ ತಂಡ: ಕೀರನ್ ಪೊಲಾರ್ಡ್ (ನಾ), ಫ್ಯಾಬಿಯನ್ ಅಲೆನ್, ಎನ್‌ಕ್ರುಮಾ ಬೊನರ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೈಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಫರ್ಡ್, ಒಡೆನ್ ಸ್ಮಿತ್, ಹೇಡನ್ ವಾಲ್ಷ್ ಜೂ.

Advertisement

Udayavani is now on Telegram. Click here to join our channel and stay updated with the latest news.

Next