Advertisement

West Indies ಟಿ20 ತಂಡ: ಎರಡು ವರ್ಷ ಬಳಿಕ ರಸೆಲ್‌ ಆಗಮನ

10:50 PM Dec 10, 2023 | Team Udayavani |

ಬ್ರಿಜ್‌ಟೌನ್‌: ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಎರಡು ವರ್ಷಗಳ ಬಳಿಕ ವೆಸ್ಟ್‌ ಇಂಡೀಸ್‌ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಸರಣಿಗಾಗಿ ಪ್ರಕಟಿಸ ಲಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ರಸೆಲ್‌ 2021ರ ಟಿ20 ವಿಶ್ವಕಪ್‌ ಬಳಿಕ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ಆಲ್‌ರೌಂಡರ್‌ ಶಫೇìನ್‌ ರುದರ್‌ಫೋರ್ಡ್‌ ಕೂಡ 2020ರ ಬಳಿಕ ಟಿ20 ತಂಡಕ್ಕೆ ಮರಳಿದ್ದಾರೆ.

ಶನಿವಾರವಷ್ಟೇ ಏಕದಿನಕ್ಕೆ ಪದಾರ್ಪಣೆ ಮಾಡಿದ ವೇಗಿ ಮ್ಯಾಥ್ಯೂ ಫೋರ್ಡ್‌ ಈ ತಂಡದ ಹೊಸ ಮುಖ. ಆಗಸ್ಟ್‌ನಲ್ಲಿ ಭಾರತದೆದುರಿನ ಸರಣಿ ವೇಳೆ ಗಾಯಾಳಾಗಿದ್ದ ಗುಡಕೇಶ್‌ ಮೋಟಿ ಕೂಡ ಆಯ್ಕೆಯಾಗಿದ್ದಾರೆ.

3 ಪಂದ್ಯಗಳನ್ನು ಬ್ರಿಜ್‌ಟೌನ್‌ (ಡಿ. 12) ಮತ್ತು ಸೇಂಟ್‌ ಜಾನ್ಸ್‌ನಲ್ಲಿ (ಡಿ. 14 ಮತ್ತು 16) ಆಡಲಾಗುವುದು.
ವೆಸ್ಟ್‌ ಇಂಡೀಸ್‌ ತಂಡ: ರೋವ¾ನ್‌ ಪೊವೆಲ್‌ (ನಾಯಕ), ಶೈ ಹೋಪ್‌ (ಉಪನಾಯಕ), ರೋಸ್ಟನ್‌ ಚೇಸ್‌, ಮ್ಯಾಥ್ಯೂ ಫೋರ್ಡ್‌, ಶಿಮ್ರನ್‌ ಹೆಟ್‌ಮೈರ್‌, ಜೇಸನ್‌ ಹೋಲ್ಡರ್‌, ಅಖೀಲ್‌ ಹುಸೇನ್‌, ಅಲ್ಜಾರಿ ಜೋಸೆಫ್, ಬ್ರಾÂಂಡನ್‌ ಕಿಂಗ್‌, ಕೈಲ್‌ ಮೇಯರ್, ಗುಡಕೇಶ್‌ ಮೋಟಿ, ನಿಕೋಲಸ್‌ ಪೂರಣ್‌, ಆ್ಯಂಡ್ರೆ ರಸೆಲ್‌, ಶಫೇìನ್‌ ರುದರ್‌ಫೋರ್ಡ್‌, ರೊಮಾರಿಯೊ ಶೆಫ‌ರ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next