Advertisement

ವಿಂಡೀಸ್‌ ಕ್ರಿಕೆಟಿಗರೆಲ್ಲರ ಕೋವಿಡ್ ಫ‌ಲಿತಾಂಶ ನೆಗೆಟಿವ್

07:33 AM May 31, 2021 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಅಣಿಯಾಗುತ್ತಿರುವ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರ ಕೋವಿಡ್‌ ಫ‌ಲಿತಾಂಶವೆಲ್ಲ ನೆಗೆಟಿವ್‌ ಬಂದಿದೆ. ಇದರಿಂದ ತಂಡ ಪೂರ್ಣ ಪ್ರಮಾಣದ ಅಭ್ಯಾಸಕ್ಕೆ ಇಳಿದಿದೆ.

Advertisement

ಮೇ 22ರಂದು ವೇಗಿ ಮಾಕ್ವಿನೊ ಮಿಂಡ್ಲೆ ಅವರ ಫ‌ಲಿತಾಂಶ ಪಾಸಿಟಿವ್‌ ಬಂದುದರಿಂದ ಅಭ್ಯಾಸವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಿಂಡ್ಲೆ ಅವರ ಫ‌ಲಿತಾಂಶವೂ ನೆಗೆಟಿವ್‌ ಬಂದಿದೆ. ಆದರೆ ಅವರು ತಂಡವನ್ನು ಸೇರಿಕೊಳ್ಳಬೇಕಾದರೆ ಇನ್ನೂ ಒಂದು ನೆಗೆಟಿವ್‌ ಫ‌ಲಿತಾಂಶ ಬರಬೇಕಿದೆ.

ಇದನ್ನೂ ಓದಿ:ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ : ಚಿನ್ನ ಗೆದ್ದ ಪೂಜಾ ರಾಣಿ

ಸರಣಿಯ ಎರಡೂ ಟೆಸ್ಟ್‌ ಗಳು ಸೇಂಟ್‌ ಲೂಸಿಯಾದಲ್ಲೇ ನಡೆಯಲಿವೆ. ಜೂ. 10ರಂದು ಮೊದಲ ಟೆಸ್ಟ್‌ ಆರಂಭವಾಗಲಿದೆ. ಬಳಿಕ ಗ್ರೆನಡಾದಲ್ಲಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next