Advertisement

2 ವರ್ಷದ ಬಳಿಕ ವಿಂಡೀಸ್‌ನ ಏಕದಿನಕ್ಕೆ ಗೇಲ್‌ ಆಯ್ಕೆ

07:40 AM Sep 13, 2017 | |

ಬೆಲ್ಫಾಸ್ಟ್‌ (ವೆಸ್ಟ್‌ ಇಂಡೀಸ್‌): ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿಗೆ ವೆಸ್ಟ್‌ ಇಂಡೀಸ್‌ ತಂಡಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಮರಳಿದ್ದಾರೆ.

Advertisement

2015ರ ವಿಶ್ವಕಪ್‌ ನಂತರ ಗೇಲ್‌ ವಿಂಡೀಸ್‌ನ ಏಕದಿನ ತಂಡದಲ್ಲಿ ಮೊದಲಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 
ವೆಸ್ಟ್‌ ಇಂಡೀಸ್‌ನಲ್ಲಿ ಆಟಗಾರರು ಮತ್ತು ಕ್ರಿಕೆಟ್‌ ಮಂಡಳಿ ನಡುವೆ ಬಿಕ್ಕಟ್ಟು ಇದೆ. ಇದರಿಂದಾಗಿ ತಾರಾ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ 2019ರ ವಿಶ್ವಕಪ್‌ ಉದ್ದೇಶದಿಂದ ಈಗ ತಂಡಕ್ಕೆ ತಾರಾ ಆಟಗಾರರ ಅನಿವಾರ್ಯತೆ ಇದೆ. ಇದೇ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಗೇಲ್‌ ಅವರನ್ನು ಪರಿಗಣಿಸಲಾಗಿದೆ. ವಿಂಡೀಸ್‌ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿದ್ದು, ಸೆ.19ರಂದು ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಮರ್ಲಾನ್‌ ಸ್ಯಾಮ್ಯುಯೆಲ್ಸ್‌ 2015ರ ವಿಶ್ವಕಪ್‌ ನಂತರ ಕಳೆದ ವರ್ಷ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next