Advertisement
ಇನ್ನೊಂದೆಡೆ ವೆಸ್ಟ್ ಇಂಡೀಸ್ ಪಾಲಿಗೆ ಇದು ಗೆಲ್ಲಲು ಉಳಿದಿರುವ ಅಂತಿಮ ಅವಕಾಶ. ಟೆಸ್ಟ್ ಸರಣಿಯನ್ನು 0-2 ಅಂತರದಿಂದ, ಏಕದಿನ ಸರಣಿಯನ್ನು 1-3 ಅಂತರದಿಂದ ಕಳೆದುಕೊಂಡ ಕೆರಿಬಿಯನ್ ತಂಡ ಕೊನೆಯ ಪ್ರಯತ್ನದಲ್ಲೊಂದು ಗೆಲುವು ಸಾಧಿಸಿ ಭಾರತ ಪ್ರವಾಸಕ್ಕೆ ಮಂಗಳ ಹಾಡೀತೇ ಎಂಬುದೊಂದು ಕುತೂಹಲ.
Related Articles
ವೆಸ್ಟ್ ಇಂಡೀಸ್ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಾಣುತ್ತ ಬಂದಿದೆ. ಸ್ಫೋಟಕ ಓಪನರ್‌ಗಳಾದ ಕ್ರಿಸ್ ಗೇಲ್, ಎವಿನ್ ಲೆವಿಸ್ ಅನುಪಸ್ಥಿತಿಯಲ್ಲಿ ಭರ್ಜರಿ ಆರಂಭ ಕಾಣಲು ಸಾಧ್ಯವಾಗುತ್ತಿಲ್ಲ. ಶಿಮ್ರನ್ ಹೆಟ್‌ಮೈರ್, ಶೈ ಹೋಪ್ ಅವರ ಬ್ಯಾಟಿಂಗ್ ಅಬ್ಬರ ಮಂಕಾದಂತಿದೆ. ಕೈರನ್ ಪೊಲಾರ್ಡ್, ಡ್ಯಾರನ್ ಬ್ರಾವೊ, ದಿನೇಶ್ ರಾಮಧಿನ್ ಇನ್ನೂ ಲಯ ಕಂಡುಕೊಂಡಿಲ್ಲ.
Advertisement
ಇದು ಬ್ಯಾಟಿಂಗ್ ಸಂಕಟದ ಕತೆಯಾದರೆ, ಬೌಲಿಂಗ್ ವಿಭಾಗದ ಸಮಸ್ಯೆ ಗಂಭೀರ ಮಟ್ಟದಲ್ಲೇ ಇದೆ. ಒಶಾನೆ ಥಾಮಸ್ ತಮ್ಮ ಪೇಸ್ ದಾಳಿ ಮೂಲಕ ಗಮನ ಸೆಳೆದರೂ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲವೇ ಸಿಗುತ್ತಿಲ್ಲ. ಒಟ್ಟಾರೆ, ಟಿ20 ಜೋಶ್ ಮೂಡಿಸುವಲ್ಲಿ ಕೆರಿಬಿಯನ್ನರು ಸಂಪೂರ್ಣ ವಿಫಲರಾಗಿದ್ದಾರೆ.
ಬ್ಯಾಟ್ಸ್‌ಮನ್‌ಗಳ ಮೆರೆದಾಟ?ಇತ್ತೀಚಿನ ಪಂದ್ಯಗಳನ್ನು ಗಮನಿಸಿದಾಗ ಚೆನ್ನೈ ಟ್ರ್ಯಾಕ್ ನಿಧಾನ ಗತಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದ್ದು ಕಂಡುಬರುತ್ತದೆ. ಆದರೆ ಇದು ಟಿ20 ಕಾದಾಟ ಆಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ಮೆರೆಯುವ ಸಾಧ್ಯತೆ ಇದೆ. ಅಂದಹಾಗೆ, ಚೆನ್ನೈಯನ್ನು ಎರಡನೇ ಮನೆಯನ್ನಾಗಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರ ಗೈರು ಇಲ್ಲಿನ ಅಭಿಮಾನಿಗಳನ್ನು ಕಾಡದಿರದು! 6 ವರ್ಷಗಳ ಬಳಿಕ ಚೆನ್ನೈ ಪಂದ್ಯ
ಇದು ಚೆನ್ನೈಯಲ್ಲಿ ನಡೆಯುತ್ತಿರುವ ಕೇವಲ 2ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ. 6 ವರ್ಷಗಳ ಸುದೀರ್ಘ ಅವಧಿಯ ಬಳಿಕ ಆಡಲಾಗುತ್ತಿರುವ ಮೊದಲ ಮುಖಾಮುಖೀಯು ಹೌದು.ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ 2012ರ ಸೆ. 11ರಂದು ಮೊದಲ ಟಿ20 ಪಂದ್ಯ ಏರ್ಪಟ್ಟಿತ್ತು. ಪ್ರವಾಸಿ ನ್ಯೂಜಿಲ್ಯಾಂಡ್ ಸರಣಿಯ ದ್ವಿತೀಯ ಪಂದ್ಯವನ್ನು ಇಲ್ಲಿ ಆಡಿ ಒಂದು ರನ್ನಿನ ರೋಮಾಂಚಕ ಜಯ ಸಾಧಿಸಿತ್ತು. ಇದರೊಂದಿಗೆ 2 ಪಂದ್ಯಗಳ ಸರಣಿ 1-0 ಅಂತರದಿಂದ ಕಿವೀಸ್ ಪಾಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್, ಬ್ರೆಂಡನ್ ಮೆಕಲಮ್ ಅವರ 91 ರನ್ ಸಾಹಸದಿಂದ 5 ವಿಕೆಟಿಗೆ 167 ರನ್ ಪೇರಿಸಿತ್ತು. ಜವಾಬಿತ್ತ ಭಾರತ 4 ವಿಕೆಟಿಗೆ 166 ರನ್ ಗಳಿಸಿ ಸೋತಿತು. ವಿರಾಟ್ ಕೊಹ್ಲಿ 70, ಯುವರಾಜ್ ಸಿಂಗ್ 34 ರನ್ ಗಳಿಸಿ ಗಮನ ಸೆಳೆದರು. ಯುವಿ ಅಂತಿಮ ಓವರಿನಲ್ಲಿ ಔಟಾದುದು ಪಂದ್ಯದ ತಿರುವಿಗೆ ಕಾರಣವಾಯಿತು. ಧೋನಿ 22, ರೋಹಿತ್ ಶರ್ಮ 4 ರನ್ ಮಾಡಿ ಅಜೇಯರಾಗಿ ಉಳಿದಿದ್ದರು. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಯಜುವೇಂದ್ರ ಚಾಹಲ್. ವೆಸ್ಟ್ ಇಂಡೀಸ್: ಶೈ ಹೋಪ್, ನಿಕೋಲಸ್ ಪೂರಣ್, ಶಿಮ್ರನ್ ಹೆಟ್‌ಮೈರ್, ಡ್ಯಾರನ್ ಬ್ರಾವೊ, ಕೈರನ್ ಪೊಲಾರ್ಡ್, ಕಾರ್ಲೋಸ್ ಬ್ರಾತ್‌ವೇಟ್ (ನಾಯಕ), ರೋವ್‌ಮನ್ ಪೊವೆಲ್, ಕೀಮೊ ಪೌಲ್, ಫ್ಯಾಬಿಯನ್ ಅಲೆನ್, ಖಾರಿ ಪಿಯರೆ, ಒಶಾನೆ ಥಾಮಸ್.
ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್