ಇಂಡೀಸ್‌ನಲ್ಲೂ ಇವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಇವರಲ್ಲೊಬ್ಬರು, ತಂಡದ ವಿಕೆಟ್ ಕೀಪರ್ ಜೋಶುವ ಡ ಸಿಲ್ವ ಅವರ ತಾಯಿ. ದ್ವಿತೀಯ ದಿನದಾಟದ ಬಳಿಕ ಕೊಹ್ಲಿಯನ್ನು ಭೇಟಿಯಾದ ಅವರು ತಬ್ಬಿಕೊಂಡು ಆನಂದಬಾಷ್ಪ ಸುರಿಸಿದರು. ಅವರ ಬಹುದಿನದ ಕನಸೊಂದು ನನಸಾಗಿತ್ತು.
“ನಾನು ಕೊಹ್ಲಿ ಆಟವನ್ನು ನೋಡಲು ಸ್ಟೇಡಿಯಂಗೆ ಬರಲಿದ್ದೇನೆ ಎಂದು ಅಮ್ಮ ಹೇಳಿದಾಗ ನನಗೆ ನಂಬಲಾಗಲಿಲ್ಲ’ ಎಂದು ಜೋಶುವ ಹೇಳಿದ್ದರು.
“ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗರಲ್ಲೊಬ್ಬರು. ಅವರು ಸೆಂಚುರಿ ಹೊಡೆದಾಗ ನಾನು ಎದ್ದು ನಿಂತು ಚಪ್ಪಾಳೆ ತಟ್ಟಿದೆ. ಇದು, ನಮ್ಮ ನಾಡಿನಲ್ಲಿ ಸೆಂಚುರಿ ಹೊಡೆದುದಕ್ಕಾಗಿ ಅವರಿಗೆ ನಾನು ಸಲ್ಲಿಸಿದ ಗೌರವ. ನನ್ನ ಪಾಲಿಗೆ ಇದೊಂದು ಅತ್ಯಂತ ಖುಷಿಯ, ಅಷ್ಟೇ ಭಾವುಕ ಕ್ಷಣವಾಗಿತ್ತು’ ಎಂಬುದಾಗಿ ಜೋಶುವ ತಾಯಿ ಹೇಳಿದರು.
“ನಾನು ಕೇವಲ ಕೊಹ್ಲಿ ಆಟ ನೋಡ ಲೆಂದೇ ಬರುವುದು ಎಂದು ಜೋಶುವನಲ್ಲಿ ಹೇಳಿದ್ದೆ. ನಾವಿಬ್ಬರೂ ಕೊಹ್ಲಿ ಅವರ ದೊಡ್ಡ ಅಭಿಮಾನಿಗಳು. ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರು. ಅವರು ನಮ್ಮ ನಾಡಿನಲ್ಲಿ ಆಡುತ್ತಿರುವುದೇ ಒಂದು ಹೆಮ್ಮೆ. ನನ್ನ ಮಗ ಕೊಹ್ಲಿ ಆಡುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವುದು ನಿಜಕ್ಕೂ ಸೌಭಾಗ್ಯ’ ಎಂದು ಜೋಶುವ ಅವರ ತಾಯಿ ಭಾವುಕರಾಗಿ ನುಡಿದರು.