Advertisement

West Indies: ಕಿವೀಸ್‌ಗೆ ಕಾದಿದೆ ವಿಂಡೀಸ್‌ ಟೆಸ್ಟ್‌

11:20 PM Jun 12, 2024 | Team Udayavani |

ಟರೂಬ: ಅಫ್ಘಾನಿಸ್ಥಾನ ವಿರುದ್ಧ 75ಕ್ಕೆ ಕುಸಿದು ಆಘಾತಕಾರಿ ಸೋಲುಂಡ ನ್ಯೂಜಿಲ್ಯಾಂಡ್‌ಗೆ ಗುರುವಾರ ವೆಸ್ಟ್‌ ಇಂಡೀಸ್‌ ಟೆಸ್ಟ್‌ ಕಾದಿದೆ. ಟರೂಬದಲ್ಲಿ ಈ ಪಂದ್ಯ ನಡೆಯಲಿದ್ದು, ಬೇಗನೇ ನಿರ್ಗಮಿಸುವ ಸಂಕಟದಿಂದ ಪಾರಾಗಬೇಕಾದರೆ ಕೇನ್‌ ವಿಲಿಯಮ್ಸನ್‌ ಪಡೆ ಇಲ್ಲಿ ಗೆಲ್ಲುವುದು ಅನಿವಾರ್ಯ.

Advertisement

“ಸಿ’ ವಿಭಾಗದಲ್ಲಿ ಅಫ್ಘಾನಿಸ್ಥಾನ ಮತ್ತು ವೆಸ್ಟ್‌ ಇಂಡೀಸ್‌ ಆಡಿದ ಎರಡೂ ಪಂದ್ಯ ಗಳನ್ನು ಗೆದ್ದು ಮುಂದಿನ ಸುತ್ತಿಗೇರುವ ನೆಚ್ಚಿನ ತಂಡಗಳಾಗಿ ಗೋಚರಿಸುತ್ತಿವೆ. 5.225ರಷ್ಟು ಉತ್ಕೃಷ್ಟ ರನ್‌ರೇಟ್‌ ಹೊಂದಿರುವ ಕಾರಣ ಅಫ್ಘಾನ್‌ ಅಗ್ರಸ್ಥಾನ ಅಲಂಕರಿಸಿದೆ. ಈ ಕೂಟ ದಲ್ಲಿ ಐದಕ್ಕಿಂತ ಹೆಚ್ಚಿನ ರನ್‌ರೇಟ್‌ ಹೊಂದಿರುವ ಮತ್ತೂಂದು ತಂಡವಿಲ್ಲ. ವಿಂಡೀಸ್‌ ರನ್‌ರೇಟ್‌ 3.574.

ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿರುವ ನ್ಯೂಜಿಲ್ಯಾಂಡ್‌ನ‌ದ್ದು ಈ ಬಾರಿ ಆಘಾತಕಾರಿ ಆರಂಭ. ಆದರೆ ಟಿ20 ಸ್ಪೆಷಲಿಸ್ಟ್‌ ಗಳನ್ನು ಹೊಂದಿರುವ ಅದಿನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಮೂರನ್ನೂ ಗೆದ್ದರೆ ಸೂಪರ್‌-8 ಟಿಕೆಟ್‌ ಸಿಗಲಿದೆ. ಆದರೆ ಆತಂಕಕ್ಕೆ ಕಾರಣವಾಗಿರುವುದು, ಅಫ್ಘಾನ್‌ ವಿರುದ್ಧ ಆಡಿದ ರೀತಿ.

ಅಫ್ಘಾನ್‌ ವಿರುದ್ಧ ನ್ಯೂಜಿಲ್ಯಾಂಡ್‌ನ‌
ಬ್ಯಾಟಿಂಗ್‌ ಮಾತ್ರವಲ್ಲ, ಫೀಲ್ಡಿಂಗ್‌ ಕೂಡ ಕಳಪೆ ಆಗಿತ್ತು. ಸ್ಟಂಪಿಂಗ್‌, ರನೌಟ್‌ ಅವಕಾಶಗಳನ್ನೂ ವ್ಯರ್ಥಗೊಳಿ ಸಿತ್ತು. ಗುರ್ಬಜ್‌-ಜದ್ರಾನ್‌ ಆರಂಭಿಕ ವಿಕೆಟಿಗೆ 103 ರನ್‌ ಪೇರಿಸಿ ಮೆರೆದಿದ್ದರು.

ವಿಂಡೀಸ್‌ಗೂ ದೊಡ್ಡ ಪಂದ್ಯ
ವೆಸ್ಟ್‌ ಇಂಡೀಸ್‌ ಈವರೆಗೆ ಎದುರಿಸಿದ್ದು ಪಪುವಾ ನ್ಯೂ ಗಿನಿಯ (ಪಿಎನ್‌ಜಿ) ಮತ್ತು ಉಗಾಂಡದಂಥ ಸಾಮಾನ್ಯ ತಂಡಗಳನ್ನು ಮಾತ್ರ. ಪಿಎನ್‌ಜಿ ವಿರುದ್ಧ ಸಾಕಷ್ಟು ಪರದಾಟ ನಡೆಸಿ ಜಯಿಸಿತ್ತು. ಆದರೆ ಉಗಾಂಡ ವಿರುದ್ಧ 134 ರನ್ನುಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಉಗಾಂಡವನ್ನು 39 ರನ್ನಿಗೆ ಉದುರಿಸಿದ ವಿಂಡೀಸ್‌ಗೆ ಮೊದಲ ಸಲ ಕಠಿನ ಸವಾಲು ಎದುರಾಗಿದೆ ಎನ್ನಬಹುದು. ಗೆದ್ದರೆ ಪೊವೆಲ್‌ ಪಡೆ ಮುಂದಿನ ಸುತ್ತು ಪ್ರವೇಶಿಸಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್‌ ಲಯಕ್ಕೆ ಮರಳಿದರೆ ಸ್ಪರ್ಧೆ ತೀವ್ರಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next