ಗಯಾನ: ವೆಸ್ಟ್ ಇಂಡೀಸ್‌ನ ಏಕದಿನ ಮತ್ತು ಟಿ20 ತಂಡಗಳಿಗೆ ನೂತನ ನಾಯಕರ ನೇಮಕವಾಗಿದೆ. ಶಾಯ್ ಹೋಪ್ ಮತ್ತು ರೋವ್ಮನ್ ಪೊವೆಲ್ ಅವರನ್ನು ಕ್ರಮವಾಗಿ ಏಕದಿನ ಮತ್ತು ಟಿ20 ತಂಡಕ್ಕೆ ನಾಯಕರಾಗಿ ನೇಮಿಸಲಾಗಿದೆ.
ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡವು ಮೊದಲ ಸುತ್ತಿನಿಂದಲೇ ಹೊರಬಿದ್ದ ನಂತರ ಸೀಮಿತ ಓವರ್‌ಗಳ ನಾಯಕನ ಸ್ಥಾನಕ್ಕೆ ನಿಕೋಲಸ್ ಪೂರನ್ ರಾಜೀನಾಮೆ ನೀಡಿದ್ದರು.
ಮಾರ್ಚ್ 16 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಏಕದಿನ ಮತ್ತು ಟಿ20 ಸರಣಿಯಲ್ಲಿ ಹೋಪ್ ಮತ್ತು ಪೊವೆಲ್ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಹೋಪ್ ಅವರನ್ನು 2019 ರಲ್ಲಿ ವೆಸ್ಟ್ ಇಂಡೀಸ್ ಏಕದಿನ ತಂಡದ ಉಪ ನಾಯಕರಾಗಿ ನೇಮಿಸಲಾಗಿತ್ತು. ಜೂನ್ 2022 ರಲ್ಲಿ ಉಪನಾಯಕರಾಗಿ ಮರು-ನೇಮಕವಾಗಿದ್ದರು. 104 ಏಕದಿನ ಪಂದ್ಯವಾಡಿರುವ ಹೋಪ್ 48.08 ಸರಾಸರಿಯಲ್ಲಿ 4308 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರದ ಲಾತೂರ್ ನಲ್ಲಿ ನಿಗೂಢ ಶಬ್ಧ; ಭೀತಿಯಲ್ಲೇ ರಾತ್ರಿ ಕಳೆದ ಗ್ರಾಮಸ್ಥರು!
ರೋಮ್ನನ್ ಪೊವೆಲ್ ಕಳೆದ ವರ್ಷ ಕೆರಿಬಿಯನ್ ಪ್ರೀಮಿಯರ್ ಲೀಗ್ ಅನ್ನು ಗೆದ್ದ ಜಮೈಕಾ ತಲ್ಲವಾಸ್‌ನ ನಾಯಕರಾಗಿದ್ದರು. ಅವರು ನವೆಂಬರ್ ನಲ್ಲಿ ಸಿಜಿ ಯುನೈಟೆಡ್ ಸೂಪರ್ 50 ಕಪ್ ನಲ್ಲಿ ಜಮೈಕಾ ಸ್ಕಾರ್ಪಿಯನ್ಸ್ ತಂಡವನ್ನು ಮುನ್ನಡೆಸಿದರು. ಪೊವೆಲ್ ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದಾರೆ.