ಮುಂಬಯಿ : ವೆಸ್ಟ್‌ಇಂಡೀಸ್‌ನ ನಾಯಕ ಕೈರನ್ ಪೋಲಾರ್ಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ನಿವೃತ್ತಿ ಪ್ರಕಟಿಸಿದರು. ಆದರೆ ಅವರು ಖಾಸಗಿ ಟಿ20 ಮತ್ತು ಟಿ10 ಲೀಗ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
2007ರಲ್ಲಿ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದಿದ್ದ 34ರ ಹರೆಯದ ಪೋಲಾರ್ಡ್ ಭಾರತ ಪರವೇ ತನ್ನ ಕೊನೆಯ ಸರಣಿ ಆಡಿದ್ದರು. ಭಾರತವು ಅವರ ಪಾಲಿಗೆ ಎರಡನೇ ಮನೆ ಇದ್ದಂತೆ. ಯಾಕೆಂದರೆ ಅವರು ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.
ಹಾಯ್ ಎಲ್ಲರಿಗೂ… ಬಹಳಷ್ಟು ಎಚ್ಚರಿಕೆಯಿಂದ ಚರ್ಚಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. 10ರ ಬಾಲಕನಿದ್ದಾಗ ವೆಸ್ಟ್‌ಇಂಡೀಸ್ ಪರ ಕ್ರಿಕೆಟ್ ಆಡುವ ಕನಸು ಕಂಡಿದ್ದೆ. ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸುಮಾರು 15 ವರ್ಷ ವೆಸ್ಟ್‌ಇಂಡೀಸ್ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಬರೆದಿದ್ದಾರೆ. ಅವರು ವಿಂಡೀಸ್ ಪರ 123 ಏಕದಿನ ಪಂದ್ಯಗಳನ್ನಾಡಿದ್ದು 2706 ರನ್ ಗಳಿಸಿದ್ದಾರೆ ಮತ್ತು 55 ವಿಕೆಟ್ ಉರುಳಿಸಿದ್ದಾರೆ. 101 ಟಿ20 ಪಂದ್ಯಗಳನ್ನಾಡಿರುವ ಅವರು 1569 ರನ್ ಹಾಗೂ 44 ವಿಕೆಟ್ ಹಾರಿಸಿದ್ದಾರೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ: ಮದುವೆಯಲ್ಲಿ ಜೊತೆಗಿದ್ದು ಸಾವಿನಲ್ಲೂ ಒಂದಾದ ಸ್ನೇಹಿತರು
ಟಿ20 ಪಂದ್ಯವೊಂದರಲ್ಲಿ ಅವರು ಅಖೀಲ ದನಂಜಯ ಅವರ ಬೌಲಿಂಗ್‌ನಲ್ಲಿ ಆರು ಸಿಕ್ಸರ್ ಸಿಡಿಸಿರುವುದು ಅವರ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿಯಾಗಿದೆ. ಈ ಮೊದಲು ಹರ್ಶಲ್ ಗಿಬ್ಸ್ ಮತ್ತು ಯುವರಾಜ್ ಸಿಂಗ್ ಅವರು ಓವರೊಂದರ ಆರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಸಾಧನೆ ಮಾಡಿದ್ದರು. ಅವರು 2012ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್‌ಇಂಡೀಸ್ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ಟೆಸ್ಟ್ ಕ್ರಿಕೆಟ್ ಆಡಿಯೇ ಇಲ್ಲ..