ಜಾರ್ಜ್‌ಟೌನ್: ಕೋಲ್ಕತಾದ ಐತಿಹಾಸಿಕ “ಈಡನ್ ಗಾರ್ಡನ್ಸ್’ನಲ್ಲಿ ನಡೆದ 2016ರ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಿಂಚಿದ ಆಟಗಾರನೆಂದರೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕಾರ್ಲೋಸ್ ಬ್ರಾತ್‌ವೇಟ್.
ಈ ಪಂದ್ಯದ ಸವಿನೆನಪಿಗಾಗಿ ಅವರು ತಮ್ಮ ಮಗಳಿಗೆ “ಈಡನ್ ರೋಸ್ ಬ್ರಾತ್‌ವೇಟ್’ ಎಂದು ನಾಮಕರಣ ಮಾಡಿದ್ದಾರೆ.
“ಕೋಲ್ಕತಾದ ಈಡನ್ ಗಾರ್ಡನ್ಸ್ ನಮ್ಮನ್ನು ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ ಕ್ರೀಡಾಂಗಣ. ಈ ಹೆಸರು ಸದಾ ನೆನಪಿನಲ್ಲಿ ಉಳಿಯುವ ಸಲುವಾಗಿ ಮಗಳಿಗೆ ಈಡನ್ ರೋಸ್ ಬ್ರಾತ್‌ವೇಟ್ ಎಂದು ನಾಮಕರಣ ಮಾಡಿರುವೆ’ ಎಂದು ಬ್ರಾತ್‌ವೇಟ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ನಿಕಟ ಕಾದಾಟದಲ್ಲಿ ಗೆದ್ದ ಯುಪಿ ಯೋಧಾ
ಬೆನ್ ಸ್ಟೋಕ್ಸ್ ಎಸೆದ ಈ ಪಂದ್ಯದ ಅಂತಿಮ ಓವರ್‌ನ ಮೊದಲ 4 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಬ್ರಾತ್‌ವೇಟ್ ವೆಸ್ಟ್ ಇಂಡೀಸನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು.