Advertisement

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತ ಎಣಿಕೆ ಆರಂಭ

09:25 AM Jul 11, 2023 | Team Udayavani |

ಕೋಲ್ಕತ್ತಾ: ಹಿಂಸಾಚಾರ, ಗಲಭೆ, ಸಾವು ನೋವಿನ ನಡುವೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

Advertisement

ಮತ ಎಣಿಕೆ ಕೇಂದ್ರದ ಸುತ್ತ ಗಲಭೆಗಳು ನಡೆಯದಂತೆ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಒಟ್ಟು ಮೂರು ಹಂತದಲ್ಲಿ ನಡೆದ ಚುನಾವಣೆ ಕೊನೆಗೂ ಕೊನೆಯ ಹಂತಕ್ಕೆ ಬಂದು ತಲುಪಿದೆ ಇಂದಿನ ಫಲಿತಾಂಶದಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು ಸಾಕಷ್ಟು ಭಿಗಿ ಭದ್ರತೆ ಒದಗಿಸಲಾಗಿದೆ ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆದರೂ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವಂತೆಯೂ ಸೂಚಿಸಲಾಗಿದೆ.

ಕಳೆದ ತಿಂಗಳ ಆರಂಭದಲ್ಲಿ ಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಿಸಿದಾಗಿನಿಂದ ರಾಜ್ಯಾದ್ಯಂತ ರಾಜಕೀಯ ಘರ್ಷಣೆಯಲ್ಲಿ 33 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಟ್ಟು ಮೂರು ಹಂತದ ಪಂಚಾಯಿತಿ ಚುನಾವಣೆಗೆ 61 ಸಾವಿರಕ್ಕೂ ಅಧಿಕ ಬೂತ್‌ಗಳಲ್ಲಿ ಜುಲೈ 8ರಂದು ಮತದಾನ ನಡೆದಿದ್ದು, ಶೇ.80.71ರಷ್ಟು ಮತದಾನವಾಗಿದೆ.

ಹಲವೆಡೆ ಮತಪೆಟ್ಟಿಗೆಗಳನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಕೆರೆಗೆ ಎಸೆದು ಹಿಂಸಾಚಾರ ನಡೆಸಲಾಯಿತು. ಮತದಾನದ ದಿನದಂದು ಹಿಂಸಾಚಾರದ ಪ್ರಮಾಣ ಎಷ್ಟಿತ್ತೆಂದರೆ ಸುಮಾರು 696 ಬೂತ್‌ಗಳಲ್ಲಿ ಮರುಮತದಾನ ಮಾಡಬೇಕಾದ ಸ್ಥಿತಿಯೂ ನಿರ್ಮಾಣವಾಯಿತು.

Advertisement

ಇದನ್ನೂ ಓದಿ: ಗಾಜಿಯಾಬಾದ್‌: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, 5 ಮಂದಿ ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next