Advertisement

ಕೋವಿಡ್ 19: ಜುಲೈ1ರವರೆಗೆ ಲಾಕ್ ಡೌನ್ ವಿಸ್ತರಣೆ: ಮಮತಾ ಬ್ಯಾನರ್ಜಿ ಘೋಷಣೆ

04:47 PM Jun 14, 2021 | Team Udayavani |

ಕೋಲ್ಕತಾ: ಕೋವಿಡ್ 19 ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ(ಜೂನ್ 14) ಜುಲೈ 1ರವರೆಗೆ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದು, ಈ ಸಂದರ್ಭದಲ್ಲಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುವುದು ಎಂದು ಹೇಳಿದೆ.

Advertisement

ಇದನ್ನೂ ಓದಿ:ಪಾಕಿಸ್ತಾನದ ಹೆಸರಿಲ್ಲದೇ‌ ಬಿಜೆಪಿ ರಾಜಕಾರಣವೇ ಇಲ್ಲ: ಬಿ.ಕೆ.ಹರಿಪ್ರಸಾದ್ ಆರೋಪ

ನೂತನ ಮಾರ್ಗಸೂಚಿ ಪ್ರಕಾರ, ಜೂನ್ 16ರಿಂದ ಎಲ್ಲಾ ಸರ್ಕಾರಿ ಕಚೇರಿಗಳು ಶೇ.25ರಷ್ಟು ಸಿಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆಯಾ ಇಲಾಖೆಯ ಮುಖ್ಯಸ್ಥರು ಕೆಲಸದ ಸಮಯದ ಹಂಚಿಕೆ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ. ಸಂಚಾರಕ್ಕೆ ಇ-ಪಾಸ್ ಅಗತ್ಯವಿದೆ ಎಂದು ವಿವರಿಸಿದೆ. ಪಾರ್ಕ್ಸ್ ಗಳು ಬೆಳಗ್ಗೆ 6ಗಂಟೆಯಿಂದ 9ಗಂಟೆವರೆಗೆ ತೆರೆಯಲಾಗುವುದು.

ಯಾರು ಕೋವಿಡ್ 19 ಲಸಿಕೆಯನ್ನು ತೆಗೆದುಕೊಂಡಿದ್ದಾರೋ ಅಂತಹ ವ್ಯಕ್ತಿಗಳಿಗೆ ಮಾತ್ರ ಪಾರ್ಕ್ ಒಳಗೆ ಹೋಗಲು ಅನುಮತಿ ನೀಡಲಾಗುವುದು ಎಂದು ವರದಿ ವಿವರಿಸಿದೆ.

ಎಲ್ಲಾ ಮಾರುಕಟ್ಟೆ, ಬಜಾರ್ ಗಳು ಬೆಳಗ್ಗೆ 7ಗಂಟೆಯಿಂದ 11ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಇನ್ನಿತರ ಸಣ್ಣ ಅಂಗಡಿಗಳು 11ರಿಂದ ಸಂಜೆ 6ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next