Advertisement

4ನೇ ಹಂತದ ಮತದಾನಕ್ಕೆ ಪಶ್ಚಿಮ ಬಂಗಾಲ ಸಜ್ಜು

12:57 AM Apr 09, 2021 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ವಿಧಾನಸಭೆಯ ನಾಲ್ಕನೇ ಹಂತದ ಮತದಾನ ಎ.10ರಂದು ನಡೆಯಲಿದೆ. ಅದಕ್ಕಾಗಿ ಬಹಿರಂಗ ಪ್ರಚಾರ ಗುರು ವಾರ ಮುಕ್ತಾಯವಾಗಿದೆ. ಹೌರಾ, ದಕ್ಷಿಣ 24 ಪರಗಣ, ಹೂಗ್ಲಿಯ ಕೆಲವು ಕ್ಷೇತ್ರಗಳು ಆಲಿದೌರ್‌ಪುರ್‌, ಕೂಚ್‌ಬೆಹಾರ್‌ ಜಿಲ್ಲೆಗಳ ಒಟ್ಟು 44 ಕ್ಷೇತ್ರಗಳಿಗೆ ಹಕ್ಕು ಚಲಾವಣೆ ನಡೆಯಲಿದೆ. ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ, ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ, ಅರಣ್ಯ ಸಚಿವ ಸೋವನ್‌ ಚಟರ್ಜಿ ಪತ್ನಿ ರತ್ನಾ ಚಟರ್ಜಿ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.

Advertisement

ಪ್ರಚಾರದ ಕೊನೆಯ ದಿನವಾಗಿರುವ ಗುರುವಾರ ಹೂಗ್ಲಿ ಮತ್ತು ಹೌರಾ ಜಿಲ್ಲೆಗಳಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌  ಪ್ರಚಾರ ನಡೆಸಿದರು. ಪಶ್ಚಿಮ ಬಂಗಾಲದಲ್ಲಿ ನಿರೀಕ್ಷೆ ಮಾಡಿದ್ದ ಪರಿವರ್ತನೆ ಕಂಡು ಬಂದಿಲ್ಲ ಎಂದು ದೂರಿದ್ದಾರೆ. ಟಿಎಂಸಿ ಸರಕಾರದ ಅವಧಿಯಲ್ಲಿ ಪಶ್ಚಿಮ ಬಂಗಾಲದಲ್ಲಿ ಸುರಕ್ಷತೆಯೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಟಿಎಂಸಿ ಗೂಂಡಾ ಗಳನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಘೋಷಿಸಿದರು. ತಾಯಿ, ಮಾತೃಭೂಮಿ ಮತ್ತು ಜನರು ಎಂದು ಮಮತಾ ಬ್ಯಾನರ್ಜಿ ವಾಗ್ಧಾನ ಮಾಡಿ ದ್ದೇ  ನಾಯಿತು ಎಂದು ಪ್ರಶ್ನಿಸಿದ್ದಾರೆ ಉ.ಪ್ರ. ಸಿಎಂ. ಮೇಕ್ಲಿಗಂಜ್‌, ಕೂಚ್‌ಬೆಹಾರ್‌ಗಳಲ್ಲಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರೋಡ್‌ ಶೋ ನಡೆಸಿದರು.

ಎಷ್ಟು ದೂರು ದಾಖಲಾಗಿದೆ: ಹೂಗ್ಲಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ “ನಂದಿ ಗ್ರಾಮದ ಮುಸ್ಲಿಮರನ್ನು ಪಾಕಿಸ್ಥಾನಿ ಗಳು ಎಂದು ಕರೆದವರ ವಿರುದ್ಧ ಎಷ್ಟು ಕೇಸು ದಾಖಲಾಗಿದೆ. ಅವರಿಗೇನು ನಾಚಿಕೆ ಇಲ್ಲವೇ? ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಕ್ಖ್, ಬುಡಕಟ್ಟು ಜನಾಂಗದವರ ಜತೆಗೆ ಇದ್ದೇನೆ’ ಎಂದರು. ಒಂದಲ್ಲ ಹತ್ತು ಕಾರಣ ಕೇಳಿ ನೋಟಿಸ್‌ ಜಾರಿಯಾದರೂ ತಮಗೆ ಲಕ್ಷ್ಯವೇ ಅಲ್ಲ ಎಂದು ಸಾರಿದ್ದಾರೆ.  ಕೇಂದ್ರದ ಅರೆಸೇನಾ ಪಡೆಗಳು ಗ್ರಾಮಗಳಿಗೆ ಬಂದು ಜನರಿಗೆ ಬೆದರಿಕೆ ಒಡ್ಡಬಹುದು. ಅವರು ಗೃಹ ಸಚಿವ ಅಮಿತ್‌ ಶಾ ಆಣತಿಯಂತೆ ಈ ರೀತಿ ನಡೆಯುತ್ತಿದ್ದಾರೆ ಎಂದು ದೂರಿದ್ದಾರೆ.

16 ಬಂಧನ: ಪಶ್ಚಿಮ ಬಂಗಾಲ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಕಾರಿನ ಮೇಲೆ ಕಚ್ಚಾ ಬಾಂಬ್‌ ಎಸೆದ ಘಟನೆ ನಡೆದಿದೆ. ಇದರಿಂದಾಗಿ ತಮಗೆ ಗಾಯ ಗಳಾಗಿವೆ ಎಂದು ಅವರು ಹೇಳಿಕೊಂಡಿ ದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next