ನವ ದೆಹಲಿ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ನಂತರ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸ್ವಪನ್ ದಾಸ್ ಗುಪ್ತಾ ರಾಜಿನಾಮೆ ನೀಡಿದ್ದಾರೆ.
ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಸ್ವಪನ್ ದಾಸ್ ಗುಪ್ತಾ ಕಳುಹಿಸಿಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೂಗ್ಲಿ ಜಿಲ್ಲೆಯ ತಾರಕೇಶ್ವರ ವಿಧಾನಸಭಾ ಸ್ಥಾನದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಕೆಲವೇ ನಿಮಿಷಗಳಲ್ಲಿ, ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್ ನವರ ‘ಸಿಂಡಿಕೇಟ್ ರಾಜ್’ ಅನ್ನು ಕೊನೆಗೊಳಿಸಲು ತಮ್ಮ ಪಕ್ಷ ಬಯಸಿದೆ ಎಂದು ದಾಸ್‌ಗುಪ್ತಾ ಹೇಳಿದ್ದಾರೆ.
ರಾಜ್ಯದಲ್ಲಿರುವ ಪರಿಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಹಿಂಸಾಚಾರ, ಸುಲಿಗೆ…. ನಾವು ಅದನ್ನು ಕೊನೆಗೊಳಿಸಲು ಬಯಸುತ್ತೇವೆ. ಬಂಗಾಳದ ಜನರು ಶಾಂತಿಯಿಂದ ಬದುಕಲು ಬಿಜೆಪಿಯನ್ನು ಆಯ್ಕೆ ಮಾಡುತ್ತಾರೆ” ರಾಜ್ಯದಲ್ಲಿ ‘ಉದ್ಯೋಗಾವಕಾಶಗಳು ಇಲ್ಲದಂತಾಗಿದೆ’ ಮತ್ತು ಪ್ರತಿಭಾವಂತ ಯುವಕರು ಉದ್ಯೋಗವನ್ನು ಅರಸುತ್ತಿದ್ದಾರೆ ಎಂದು ದಾಸ್ ಗುಪ್ತಾ ಹೇಳಿದ್ದಾರೆ.
ಓದಿ :ಆಸ್ಕರ್ 2021 : ಅಂತಿಮ ಸುತ್ತಿಗೆ ಆಯ್ಕೆಗೊಂಡ ಸಿನೆಮಾ ನಟ, ನಟಿಯರ ಪಟ್ಟಿ
ಸ್ವಪನ್ ದಾಸ್ ಗುಪ್ತಾ ಅವರು ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ. ಸಂವಿಧಾನದ 10 ನೇ ವೇಳಾಪಟ್ಟಿಯ ಪ್ರಕಾರ, ರಾಜ್ಯ ಸಭೆಯಲ್ಲಿ ಪ್ರಮಾಣ ವಚನ ಸ್ವಿಕರಿಸಿದ 6 ತಿಂಗಳುಗಳೊಳಗೆ ಯಾವುದಾದರೂ ರಾಜಕಿಯ ಪಕ್ಷಕ್ಕೆ ಸೇರಿದರೇ, ಅವರು ರಾಜ್ಯ ಸಭಾ ಸದಸ್ಯ ಸ್ಥಾನಕ್ಕೆ ಅನರ್ಹರಾಗುತ್ತಾರೆ. ಅವರು ಏಪ್ರಿಲ್ 26 2016 ರಂದು ಪ್ರಮಾಣ ವಚನವನ್ನು ಸ್ವಿಕರಿಸಿದ್ದರು. ಬಿಜೆಪಿ ಸೇರಲು, ಅವರನ್ನು ರಾಜ್ಯ ಸಭಾ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ನ ಸಂಸದೆ ಮಹುವಾ ಮೊಹಿತ್ರಾ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದರು.
ರಾಜ್ಯ ಸಭಾ ವೆಬ್ ಸೈಟ್, ಸ್ವಪನ್ ದಾಸ್ ಗುಪ್ತಾ ಅವರ ನಾಮ ನಿರ್ದೇಶನಗೊಂಡಿದ್ದಾರೆ ಎಂದು ಹೇಳಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿಯಾಗಿ ಅವರು ನಾಮ ನಿರ್ದೆಶನವನ್ನು ಸಲ್ಲಿಸಿದ್ದು ಹೌದಾದಲ್ಲಿ ಸಂವಿಧಾನದ 10 ನೇ ವೇಳಾಪಟ್ಟಿಯ ಪ್ರಕಾರ, ರಾಜ್ಯ ಸಭಾ ಸದಸ್ಯ ಸ್ಥಾನಕ್ಕೆ ಅವರು ರಾಜಿನಾಮೆ ನೀಡಬೇಕು ಎಂದು ಅವರು ಬರೆದುಕೊಂಡಿದ್ದರು.
ಓದಿ : ‘ಬ್ಲ್ಯಾಕ್ ಮೇಲ್ ಸಂಪುಟ’ ‘ಕಾಂಗ್ರೆಸ್ ಹಗೆತನ’: ಮತ್ತೆ ಕಾಂಗ್ರೆಸ್- ಬಿಜೆಪಿ ಟ್ವೀಟ್ ವಾರ್