ಕೋಲ್ಕತಾ:ಪಶ್ಚಿಮಬಂಗಾಳದ 34 ವಿಧಾನಸಭಾ ಕ್ಷೇತ್ರದ ಚುನಾವಣೆಯ 8ನೇ ಹಾಗೂ ಅಂತಿಮ ಹಂತದ ಮತದಾನ ಗುರುವಾರ(ಏಪ್ರಿಲ್ 29) ಬೆಳಗ್ಗೆ ಆರಂಭಗೊಂಡಿದ್ದು, 283 ಅಭ್ಯರ್ಥಿಗಳ ಭವಿಷ್ಯವನ್ನು 84 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.
ಇದನ್ನೂ ಓದಿ:ಸಂತಸ ಮೂಡಿಸಿದ ಲಾಕ್ ಡೌನ್: 22 ವರ್ಷಗಳ ನಂತರ ಮನೆಗೆ ಮಗ ಬಂದ!
ಹಿಂದಿನ ಏಳು ಹಂತದ ಚುನಾವಣೆಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಇಂದು ಕೂಡಾ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಏಪ್ರಿಲ್ 10ರಂದು ನಡೆದ ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬೆಹರ್ ನಲ್ಲಿ ಭದ್ರತಾಪಡೆಯ ಗುಂಡಿನ ದಾಳಿಗೆ ಐದು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಮಾಲ್ಡಾದ 6, ಮುರ್ಷಿದಾಬಾದ್‌ನ 11, ಕೋಲ್ಕತ್ತಾ ಉತ್ತರದ 7, ಬಿಭುìಮ್‌ನ 11 ಕ್ಷೇತ್ರ ಸೇರಿ ಒಟ್ಟು 35 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಚುನಾವಣಾ ಆಯೋಗ ಜಾಗೃತಿ ಮೂಡಿಸಿದೆ. ಮೇ 2ರಂದು ಒಟ್ಟು 8 ಹಂತದ ಚುನಾವಣಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.