Advertisement

ಶಿವ ದೇವಾಲಯಗಳಿಗೆ ಗಂಗಾಜಲ ವಿತರಣೆ

01:24 PM Feb 25, 2017 | |

ಹರಪನಹಳ್ಳಿ: ಮಹಾ ಶಿವರಾತ್ರಿ ಅಂಗವಾಗಿ ಮುಜರಾಯಿ ಇಲಾಖೆ ವತಿಯಿಂದ ಪವಿತ್ರ ಗಂಗಾ ಜಲವನ್ನು ತಾಲೂಕಿನ ಎಲ್ಲಾ ಶಿವ ದೇವಾಲಯಗಳಿಗೂ ಶುಕ್ರವಾರ ವಿತರಿಸಲಾಯಿತು.

Advertisement

ಪಟ್ಟಣದ ಹಳೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಕೆ.ಗುರುಬಸವರಾಜ್‌ ಅವರು ಕೂಲಹಳ್ಳಿ ಗ್ರಾಮದ ಪೋತರಾಜ್‌ ಹಾಗೂ ಆಂಜನೇಯ ದೇವಸ್ಥಾನಗಳ ಅರ್ಚಕರಿಗೆ ಗಂಗಾಜಲ ನೀಡುವ ಮೂಲಕ ವಿತರಣೆಗೆ ಚಾಲನೆ ನೀಡಿದರು. ಒಟ್ಟು 10 ಲೀಟರ್‌ನ ನಾಲ್ಕು ಕ್ಯಾನ್‌ಗಳು ಜಲ ಬಂದಿದ್ದು, ನಾಲ್ಕು ಹೋಬಳಿಗೂ ತಲಾ 10 ಲೀಟರ್‌ನಂತೆ ಗಂಗಾಜಲವನ್ನು ಹಂಚಲಾಯಿತು. 

ತಾಲೂಕಿನಲ್ಲಿ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಮಹಾ ಶಿವರಾತ್ರಿಯನ್ನು ಜನರು ಆಚರಿಸಿದ್ದು, ಪಟ್ಟಣದ ಗೋಕರ್ಣೇಶ್ವರ ದೇವಾಲಯ, ನಗರೇಶ್ವರ, ಎಸ್‌ಬಿಎಂ ಬಳಿಯಿರುವ ಗಣೇಶ ದೇವಸ್ಥಾನದ ಶಿವ ದೇವಾಲಯ, ಬೆಸ್ಕಾಂ ಕಚೇರಿ ಬಳಿ ಹೀಗೆ ವಿವಿಧೆಡೆ ಶಿವ  ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಬಾಗಳಿಯ ಐತಿಹಾಸಿಕ ಕಲ್ಲೇಶ್ವರ ದೇವಾಲಯದಲ್ಲಿ ಬೇರೆ ಬೇರೆ  ಗ್ರಾಮಗಳ ಭಕ್ತರು ಆಗಮಿಸಿ ಅಭಿಷೇಕ ಮಾಡಿಸಿದರು. ಪಟ್ಟಣದ ಐತಿಹಾಸಿಕ ಗೋಕರ್ಣೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕೈಗೊಂಡಿದ್ದು, ಸುಣ್ಣ, ಬಣ್ಣ, ಸ್ವತ್ಛತೆ, ಭಕ್ತರನ್ನು ಸೆಳೆಯಿತು. ಗಂಗಾಜಲ ವಿತರಣಾ ಸಂದರ್ಭದಲ್ಲಿ ಕಂದಾಯ ಅಧಿಧಿಕಾರಿಗಳಾದ ಅರವಿಂದ, ಶಿವಮೂರ್ತೆಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next