ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ಆರೋಗ್ಯ ಮಂತ್ರ ಸೇವಾ ಯೋಜನೆ ಅಂಗವಾಗಿ 6.05 ಲಕ್ಷ ರೂ. ಮೌಲ್ಯದ ಡಯಾಲಿಸಿಸ್ ಯಂತ್ರವನ್ನು ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಮಂಗಳವಾರ ಹಸ್ತಾಂತರಿಸಲಾಯಿತು.
ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ವೆನ್ಲಾಕ್‌ಗೆ ಸೌಲಭ್ಯ ನೀಡುವಲ್ಲಿ ಸರಕಾರದ ಜತೆ ಸಂಘ-ಸಂಸ್ಥೆಗಳು ಕೈಜೋಡಿಸುತ್ತಿವೆ. ವೆನ್ಲಾಕ್‌ನಲ್ಲಿರುವ ಡಯಾಲಿಸಿಸ್ ಕೇಂದ್ರ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆಸ್ಪತ್ರೆಯಲ್ಲಿ ಒಟ್ಟು 19 ಡಯಾಲಿಸಿಸ್ ಯಂತ್ರಗಳಿವೆ. ಯುವವಾಹಿನಿಯ ಕೊಡುಗೆ ಸ್ತುತ್ಯರ್ಹ ಎಂದರು.
ಶಾಸಕ ಡಾ| ವೈ. ಭರತ್ ಶೆಟ್ಟಿ, ಮಾಜಿ ಶಾಸಕ ಕೆ. ವಸಂತ ಬಂಗೇರ, ವೆನ್ಲಾಕ್ ಡಿಎಂಒ ಡಾ| ಸದಾಶಿವ ಶಾನುಭೋಗ್, ಆರ್‌ಎಂಒ ಡಾ| ಸುಧಾಕರ, ಮೂತ್ರ ರೋಗ ತಜ್ಞ ಡಾ| ಸದಾನಂದ ಪೂಜಾರಿ, ಎಸ್ಕಾಗ್ ಸಂಜೀವಿನಿ ಲಿಮಿಟೆಡ್ ಆಡಳಿತಾಧಿಕಾರಿ ಹೃತ್ವಿಕ್, ಇಂಡಸ್‌ಕೇರ್ ಇಕ್ವಿಪ್‌ಮೆಂಟ್ಸ್‌ನ ಮಾಲಕ ಶ್ರೀನಿವಾಸ್ ಕೂಳೂರು, ಯುವ ವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡು³ ಉಪಸ್ಥಿತರಿದ್ದರು.
ಇದನ್ನೂ ಓದಿ:ನಾನು ಭಂಡತನ ಪ್ರದರ್ಶನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ: ರೇಣುಕಾಚಾರ್ಯ
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ. ಸ್ವಾಗತಿಸಿ, ಭಾಸ್ಕರ ಕೋಟ್ಯಾನ್ ಕೂಳೂರು ವಂದಿಸಿದರು. ದಿನೇಶ್ ರಾಯಿ ನಿರ್ವಹಿಸಿದರು.