Advertisement
416 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಶ್ರೀಲಂಕಾದ ಮೇಲೆ ಕಿವೀಸ್ ಫಾಲೋಆನ್ ಹೇರಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಸಂಘಟಿಸಿತಾದರೂ ಇನ್ನಿಂಗ್ಸ್ ಸೋಲಿನ ಸಂಕಟದಿಂದ ಪಾರಾಗಲು ಸಾಧ್ಯವಾಗಲಿಲ್ಲ. 358ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-4 ವಿಕೆಟಿಗೆ 580 ಡಿಕ್ಲೇರ್. ಶ್ರೀಲಂಕಾ-164 ಮತ್ತು 358 (ಧನಂಜಯ 98, ಚಂಡಿಮಾಲ್ 62, ಕರುಣಾರತ್ನೆ 51, ಮೆಂಡಿಸ್ 50, ಸೌಥಿ 51ಕ್ಕೆ 3, ಟಿಕ್ನರ್ 84ಕ್ಕೆ 3, ಮೈಕಲ್ ಬ್ರೇಸ್‌ವೆಲ್ 100ಕ್ಕೆ 2).
ಪಂದ್ಯಶ್ರೇಷ್ಠ: ಹೆನ್ರಿ ನಿಕೋಲ್ಸ್. ಸರಣಿಶ್ರೇಷ್ಠ: ಕೇನ್ ವಿಲಿಯಮ್ಸನ್.
“ಟೆಸ್ಟ್ ನಾಯಕತ್ವ ಸಾಕು’ನ್ಯೂಜಿಲ್ಯಾಂಡ್ ಎದುರಿನ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ಕಳೆದುಕೊಂಡ ಬಳಿಕ ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿಮುತ್ ಕರುಣಾರತ್ನೆ ಈ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಐರ್ಲೆಂಡ್ ವಿರುದ್ಧ ತವರಲ್ಲಿ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿ ಮುಗಿದೊಡನೆ ನಾಯಕತ್ವ ಬಿಡುವುದಾಗಿ ಹೇಳಿದರು. 2019ರಲ್ಲಿ ಕರುಣಾರತ್ನೆ ಶ್ರೀಲಂಕಾ ಟೆಸ್ಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಒಟ್ಟು 26 ಟೆಸ್ಟ್ ಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 10 ಜಯ, 10 ಸೋಲು, 6 ಡ್ರಾ ಇವರ ಸಾಧನೆ. ನಾಯಕನಾಗಿ ಆಯ್ಕೆಯಾದ ಮೊದಲ ಸರಣಿಯಲ್ಲೇ ದಕ್ಷಿಣ ಆಫ್ರಿಕಾವನ್ನು ಅವರದೇ ನೆಲದಲ್ಲಿ 2-0 ಅಂತರದಿಂದ ಮಣಿಸಿದ್ದು ಇವರ ಅಮೋಘ ಸಾಧನೆಯಾಗಿದೆ.