Advertisement
ಮಲ್ಪೆ ಮೀನು ವ್ಯಾಪಾರ ಸಮುಚ್ಚಯವನ್ನು ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ಮೀನು ಮಾರುಕಟ್ಟೆಯನ್ನು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ, ಪವರ್‌ಹೌಸನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಪಾರ್ಕಿಂಗ್ ವ್ಯವಸ್ಥೆಯನ್ನು ಶಾಸಕ ಯಶ್‌ಪಾಲ್ ಎ. ಸುವರ್ಣ, ನೀರು ಶುದ್ಧೀಕರಣ ಘಟಕವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಂದಿನಿ ಪಾರ್ಲರನ್ನು ಮಾಜಿ ಶಾಸಕ ಕೆ. ರಘುಪತಿ ಭಟ್, ಮೀನು ಹರಾಜು ಪ್ರಾಂಗಣವನ್ನು ಹೈದರಾಬಾದ್ ನ್ಯಾಶನಲ್ ಫಿಶರೀಸ್ ಡೆವಲಪ್‌ಮೆಂಟ್ ಬೋರ್ಡ್‌ನ ಸಿಇಒ ಡಾ| ಎಲ್. ನರಸಿಂಹಮೂರ್ತಿ ಎ.ಆರ್.ಎಸ್., ಆಡಳಿತ ಕಚೇರಿಯನ್ನು ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕಚೇರಿಯನ್ನು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮೀನಿನ ಸ್ಟಾಲನ್ನು ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಲಿಫ್ಟ್ ಸೌಲಭ್ಯವನ್ನು ಬ್ಯಾಂಕ್ ಆಫ್ ಬರೋಡದ ರೀಜನಲ್ ಮ್ಯಾನೇಜರ್ ಸನಾತನ್ ಸಾತ್ವ, ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರವನ್ನು ಉಡುಪಿ ಕಾಂಚನ ಹ್ಯುಂಡೈಯ ಎಂಡಿ ಪ್ರಸಾದ್‌ರಾಜ್ ಕಾಂಚನ್ ಉದ್ಘಾಟಿಸುವರು.
Related Articles
Advertisement
ದೇಶದಲ್ಲಿಯೇ ಪ್ರಥಮ ಬಾರಿ ಎಂಬಂತೆ ಖಾಸಗಿ ಪಾಲುದಾರಿಕೆಯಲ್ಲಿ ಮಲ್ಪೆಯಲ್ಲಿ ಆಧುನಿಕ ಸುಸಜ್ಜಿತ ರಖಂ ಮೀನು ಮಾರುಕಟ್ಟೆ ನಿರ್ಮಾಣಗೊಂಡು ಜನರ ಸೇವೆಗೆ ಸಜ್ಜುಗೊಂಡಿದೆ. ವಿಶಾಲ ಪಾರ್ಕಿಂಗ್ ಮೀನು ಸಾಗಾಟಕ್ಕೆ / ಗ್ರಾಹಕರಿಗೆ ಪ್ರತ್ಯೇಕ ಲಿಫ್ಟ್, ಹರಾಜು ಪ್ರಾಂಗಣ, ಶೈತ್ಯಾಗಾರ ಘಟಕ, ವ್ಯಾಪಾರಸ್ಥರಿಗೆ ಪ್ರತ್ಯೇಕ ಕಚೇರಿ ಕೊಠಡಿ, ಸುಸಜ್ಜಿತ ಸ್ನಾನಗೃಹ, ಶೌಚಾಲಯ ಇತ್ಯಾದಿ ಸೌಲಭ್ಯಗಳಿವೆ. ವಾರಾಂತ್ಯದಲ್ಲಿ ಮತ್ಸ್ಯ ಖಾದ್ಯ ಮೇಳ ನಡೆಯಲಿದೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.