ಆತ್ಮೀಯ ಸ್ನೇಹಿತನೇ, ನಿನ್ನ ಪತ್ರ ಕೈ ಸೇರಿತು.ನಾನಿಲ್ಲಿ ತುಂಬಾ ಚೆನ್ನಾಗಿರುವೆ.ನಿನ್ನ ಹಾರೈಕೆಯೇ ಇರಬೇಕು; ನನಗೆ ಕೆಲಸ ಸಿಕ್ಕಿತು. ಮನೆಯ ಕಷ್ಟಗಳೆಲ್ಲ ತಕ್ಕಮಟ್ಟಿಗೆ ಕಳೆದು, ಅಪ್ಪ-ಅಮ್ಮನೊಂದಿಗೆ ಖುಷಿಯಾಗಿದ್ದೇನೆ. ನಿನ್ನಿಂದ ಯಾವುದೇ ತಪ್ಪುಗಳಾಗಿಲ್ಲ.
ಅದಕ್ಕಾಗಿ ನೀನು ಕ್ಷಮೆ ಕೇಳುವ ಅಗತ್ಯವೂ ಇಲ್ಲ. ವಯೋಸಹಜ ಭಾವನೆಗಳು ಮೂಡುವುದು ಸಹಜ.ಆದರೆ, ಭವಿಷ್ಯ ಮುಖ್ಯ. ನಿನ್ನ ಮನಸ್ಸನ್ನು ಅರಿತಿದ್ದ ನಾನು ಸೂಕ್ಷ್ಮ ವಾಗಿ ನಿನ್ನಿಂದ ಹಿಂದೆ ಸರಿಯಬೇಕಾಯಿತು. ನಿಜ ಹೇಳಬೇಕೆಂದರೆ ನೀನು ತುಂಬಾ ತುಂಬಾ ಒಳ್ಳೆಯ ಸ್ನೇಹಿತ. ನನ್ನೆಲ್ಲ ನೋವು-ನಲಿವುಗಳನ್ನು ನಿನಗೆ ಹೇಳುತ್ತಿದ್ದೆ.
ನೀನು ಕೂಡ ನನಗೆ ಬಹಳಷ್ಟು ಸಹಾಯ ಮಾಡಿದ್ದೀಯ. ನಿನ್ನನ್ನು ಎಂದಿಗೂ ಮರೆಯಲಾರೆ. ನಿನಗಾದ ತಳಮಳ ನನಗೂ ಆಗಿದ್ದು ನಿಜ. ಆದರೆ ಭವಿಷ್ಯ ನಮ್ಮ ಮುಂದಿತ್ತು. ನಿನ್ನಂಥ ಒಳ್ಳೆಯ ಸ್ನೇಹಿತನನ್ನು ನಾನೆಂದೂ ಕಳೆದುಕೊಳ್ಳಲಾರೆ. ನಾವಿಬ್ಬರೂ ದೂರವಿದ್ದೇ, ನೆಮ್ಮದಿಯಾಗಿ ಬಾಳ್ಳೋಣ.
ನಿನ್ನ ಆತ್ಮೀಯ ಸ್ನೇಹಿತೆ
ರಾಧಾ
* ವೆಂಕಟೇಶ್ ಚಗಿ