Advertisement

ವೈಚಾರಿಕತೆಯಲ್ಲಿ ಗಮನ ಸೆಳೆದಿದ್ದು ಕಲ್ಯಾಣ

02:55 PM Dec 03, 2018 | Team Udayavani |

ಬಸವಕಲ್ಯಾಣ: ಗತ ವೈಭವ ಎನ್ನುವ ವಿಷಯ ಬಂದಾಗ ಎಲ್ಲರೂ ಹಂಪಿ ಕಡೆ ನೋಡುತ್ತಾರೆ. ಆದರೆ ವೈಚಾರಿಕ, ಧಾರ್ಮಿಕ ವಿಷಯ ಬಂದಾಗ ವಿಶ್ವವೇ ಕಲ್ಯಾಣದ ಕಡೆ ನೋಡುತ್ತದೆ ಎಂದು ಗದುಗಿನ ಸಾಹಿತಿ ಸಿದ್ಧು ಯಾಪಲಪರವಿ ಹೇಳಿದರು.

Advertisement

ಜಗದ್ಗುರು ಅಲ್ಲಮ ಪ್ರಭುದೇವರ ಶೂನ್ಯ ಪೀಠ ಅನುಭವ ಮಂಟಪದಲ್ಲಿ ಹುಲಸೂರಿನ ಬಸವ ಕೇಂದ್ರ, ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದಿಂದ ಹಮ್ಮಿಕೊಳ್ಳಲಾಗಿದ್ದ ಶರಣ ಸಂಸ್ಕೃತಿ ಹಾಗೂ ವಚನ ರಥೋತ್ಸವ ಕಾರ್ಯಕ್ರಮದಲ್ಲಿ ರವಿವಾರ ನಡೆದ “ಸಾಹಿತ್ಯ ಮತ್ತು ಜೀವನ ಪ್ರೀತಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕೆಂದರೆ ಮನುಕುಲದ ವಿಚಾರ ಧಾರೆಗಳನ್ನು ಇಟ್ಟುಕೊಂಡು ಹೊಸ ಪರಂಪರೆ ಬರೆದಿರುವ ಭೂಮಿ ಇದಾಗಿದೆ ಎಂದು ಬಣ್ಣಿಸಿದರು. ವಿಶ್ವಗುರು ಬಸವಣ್ಣನವರು ಹಾಗೂ ಶರಣರು ರಚಿಸಿರುವ
ವಚನ ಸಾಹಿತ್ಯ ಎಲ್ಲಕ್ಕಿಂತ ಶ್ರೇಷ್ಠ ಸಾಹಿತ್ಯವಾಗಿದೆ. ಇದರಲ್ಲಿ ನೆಮ್ಮದಿ, ಪ್ರೀತಿ ಹಾಗೂ ದಾಸೋಹ ಎನ್ನುವ ಪರಿಕಲ್ಪನೆಗಳು ನೋಡಲು ಸಿಗುತ್ತವೆ ಎಂದರು.

12ನೇ ಶತಮಾನದಲ್ಲಿ ಅನುಭವ ಮಂಟಪ ಎಂಬ ಸಂಸತ್‌ನಲ್ಲಿ ಮಾನವೀಯ ಮೌಲ್ಯಗಳ ವಿರುದ್ಧ ಕಾನೂನು ಜಾರಿಗೆ ಮಾಡಿಲ್ಲ.
ಆದರೆ 21ನೇ ಶತಮಾನದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಮಹಿಳೆಯರ ಪ್ರವೇಶಕ್ಕೆ ಸಾಕಷ್ಟು ಗೊಂದಲು ಸೃಷಿಯಾಗಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ವಚನ ಸಾಹಿತ್ಯ ಶೇ.50 ಜನರಿಗೆ ಗೊತ್ತಿಲ್ಲ. ಆದ್ದರಿಂದ ಗೊಂದಲ ಹಾಗೂ ವಿವಾದಗಳನ್ನು ದೂರ ಮಾಡಿ ಅವುಗಳನ್ನು
ಅಳವಡಿಸಿಕೊಂಡಾಗ ಮಾತ್ರ ಧರ್ಮ ಬೆಳೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೀದರ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ವಿಶ್ವಗುರು ಬಸವಣ್ಣ ಹಾಗೂ ವಚನ ಸಾಹಿತ್ಯವೇ ಗುರುವಾಗಿದೆ. ಹೀಗಾಗಿ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ನೇತೃತ್ವ ವಹಿಸಿದ್ದ ಭರತೂರ ವಿರಕ್ತಮಠದ ಶ್ರೀ ಚಿಕ್ಕಗುರು ನಂಜೇಶ್ವರ ಸ್ವಾಮೀಜಿ ಮಾತನಾಡಿ, ಹುಲಸೂರಿನ ಡಾ| ಶಿವಾನಂದ
ಮಹಾಸ್ವಾಮಿಗಳ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಇರುತ್ತವೆ. ಬಸವ ಪರಂಪರೆಯನ್ನು ಪುನಃ ಮೂಡಿಸುವ ಕೆಲಸ
ಮಾಡಿಕೊಂಡು ಬರಲಾಗುತ್ತಿದೆ. ಜೊತೆಗೆ ಈ ಮಠವನ್ನು ಬಸವಕೇಂದ್ರ ಎಂದು ಘೋಷಣೆ ಮಾಡಿರುವುದು ವಿಶೇಷವಾಗಿದೆ
ಎಂದು ಹೇಳಿದರು. ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮೀಜಿ, ಶ್ರೀ ಸಿದ್ದರಾಮ ಮಹಾಸ್ವಾಮೀಜಿ, ಪಿಎಸ್‌ಐ ಗೌತಮ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಹುಮನಾಬಾದ ಕಸಾಪ ಅಧ್ಯಕ್ಷ ಸಚಿನ ಮಠಪತಿ, ಕಸಾಪ ಮಂಠಾಳ ವಲಯ ಅಧ್ಯಕ್ಷ ಶಂಕರ ಕುಕ್ಕಾ ಪಾಟೀಲ ಮತ್ತಿತರರು ಇದ್ದರು. ಶಾಂತಲಿಂಗ ಮಠಪತಿ ಸ್ವಾಗತಿಸಿದರು, ಶಿವಶಂಕರ ಟೋಕರೆ ನಿರೂಪಿಸಿದರು, ಬಸವರಾಜ ಕೌಟೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next