ಕು|ಸನ್ನಿಧಿ ಟಿ.ರೈ ಪೆರ್ಲ ಮತ್ತು ತಂಡ ಯಕ್ಷಗಾನವನ್ನು ಪರಿಚಯಿಸಿತು. ಕನ್ನಡದಲ್ಲಿ ಮತ್ತು ಮಲೆಯಾಳಂದಲ್ಲಿ ನಿರೂಪಣೆಯೊಂದಿಗೆ ಯಕ್ಷಗಾನ ಕಲೆಯ ಸ್ಥೂಲ ಪರಿಚಯದ ನಂತರ ಚಕ್ರವ್ಯೂಹದ ಅಭಿಮನ್ಯು- ಸುಭದ್ರೆಯರ ಸಂವಾದದ ಕಥಾಭಾಗವನ್ನು ಖ್ಯಾತ ಕಲಾವಿದರಾದ ಲಕ್ಷ್ಮಣ ಮರಕಡ ಮತ್ತು ಬಾಲಕೃಷ್ಣ ಸೀತಾಂಗೋಳಿ ಮನೋಜ್ಞವಾಗಿ ಅಭಿನಯಿಸಿದರು.
Advertisement
ಹಿಮ್ಮೇಳದಲ್ಲಿ ಭಾಗವತೆಯಾಗಿ ಕು| ಸನ್ನಿಧಿ ಟಿ.ರೈ , ಚೆಂಡೆಯಲ್ಲಿ ಲಕ್ಷ್ಮೀಶ ಬೆಂಗ್ರೋಡಿ, ಮದ್ದಲೆಯಲ್ಲಿ ಬಾಲಕೃಷ್ಣ ಆಚೆಗೋಳಿ ಮತ್ತು ಚಕ್ರತಾಳದಲ್ಲಿ ಮಾ| ಧ್ರುವ ಕಾರ್ತಿಕೇಯ ಸಹಕರಿಸಿದರು. ಜಿಲ್ಲಾಧಿಕಾರಿ ಸಜಿತ್ ಬಾಬು ಅವರ ಕಲ್ಪನೆಯಂತೆ ಹೊಸ ವರ್ಷದ ಸ್ವಾಗತವನ್ನು ವಿವಿಧ ಕಲಾ ಪ್ರಕಾರಗಳ ಪ್ರದರ್ಶನದೊಂದಿಗೆ ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಇದಕ್ಕಾಗಿಯೇ ಸಂಧ್ಯಾರಾಗಂ ಎಂಬ ಅದ್ದೂರಿ ವೇದಿಕೆಯನ್ನು ಸಿದ್ದಪಡಿಸಲಾಗಿತ್ತು.ಸನ್ನಿಧಿಯ ಸುಶ್ರಾವ್ಯ ಭಾಗವತಿಕೆಗೆ ಆಕೆಯ ಸೋದರ 5ರ ಹರೆಯದ ಮಾ|ಧ್ರುವ ಕಾರ್ತಿಕೇಯ ನೀಡಿದ ಚಕ್ರತಾಳದ ಸಾಥ್ ಜಿಲ್ಲಾಧಿಕಾರಿ ಮತ್ತಿತರ ಗಣ್ಯರ ಶ್ಲಾಘನೆಗೆ ಪಾತ್ರವಾಯಿತು.