Advertisement

ಎನ್‌ಸಿಸಿ ತಂಡಕ್ಕೆ ಅದ್ಧೂರಿ ಸ್ವಾಗತ

06:11 AM Feb 01, 2019 | |

ಬೆಂಗಳೂರು: ಗಣರಾಜೋತ್ಸವದ ಅಂಗವಾಗಿ ದೆಹಲಿಯ ರಾಜ್‌ಪಥ್‌ನಲ್ಲಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿ “ಪ್ರಧಾನ ಮಂತ್ರಿ ಬ್ಯಾನರ್‌ ‘ಪ್ರಶಸ್ತಿ ಪಡೆದ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ(ನ್ಯಾಷನಲ್‌ ಕೆಡೆಟ್‌ ಕೋರ್‌)ದಳದ 106 ಕೆಡೆಟ್‌ಗಳ ತಂಡ ಗುರುವಾರ ಮಧ್ಯಾಹ್ನ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಿತು.

Advertisement

ಸುಮಾರು 15 ವರ್ಷಗಳ ಬಳಿಕ ಪ್ರಧಾನ ಮಂತ್ರಿ ಬ್ಯಾನರ್‌ ಪ್ರಶಸ್ತಿ ಗೆದ್ದು ನಗರಕ್ಕೆ ಬಂದಿಳಿದ ತಂಡವನ್ನು ಸೇನಾ ಬ್ಯಾಂಡ್‌ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ರೈಲ್ವೆ ನಿಲ್ದಾಣದಿಂದ ತೆರೆದ ಸೇನಾ ವಾಹನದಲ್ಲಿ ಹೊರಟ ಎನ್‌ಸಿಸಿ ತಂಡದ ಮೆರವಣಿಗೆ ಆ ನಂತರ ನೃಪತುಂಗ ರಸ್ತೆ , ಎಂ.ಜಿ ರಸ್ತೆಯ ಮೂಲಕ ಸಾಗಿ ಬಳಿಕ ಹಲಸೂರಿನ ಸೇನಾ ಕೇಂದ್ರದ ತಲುಪಿತು. 

ದಳದ ಹಿರಿಯ ಅಧಿಕಾರಿಗಳು, ಕೆಡೆಟ್‌ಗಳ ಸ್ನೇಹಿತರು, ಕುಟುಂಬ ವರ್ಗ ಹೀಗೆ ನೂರಾರ ಜನ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಿದರು. ಇದೇ ವೇಳೆ ಎನ್‌ಸಿಸಿ ತಂಡದ ಸಾಧನೆ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ತಂಡದ ಯಶಸ್ಸಿನ ಕುರಿತು ಪ್ರತಿಕ್ರಿಯೆ ನೀಡಿದ ಕಂಟಿಂಜೆಂಟ್‌ ಮುಖ್ಯಸ್ಥ ಬೋಪಣ್ಣ, ದೆಹಲಿಯಲ್ಲಿ ನಡುಗುವ ಚಳಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಪ್ರಶಂಸಿಸಿದರು. 

ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜ್‌ಪಥ್‌ನಲ್ಲಿ ನಡೆದ ಪಥ ಸಂಚಲನದಲ್ಲಿ ಕರ್ನಾಟಕ- ಗೋವಾ ಎನ್‌ಸಿಸಿ ತಂಡ, ತಮಿಳುನಾಡು, ಪಂಜಾಬ್‌ ಹಾಗೂ ಮಹಾರಾಷ್ಟ್ರ ತಂಡವನ್ನು ಹಿಂದಿಕ್ಕಿ ಪ್ರಧಾನ ಮಂತ್ರಿ ಬ್ಯಾನರ್‌  ಪ್ರಶಸ್ತಿಯನ್ನು ಪಡೆಯುವಲ್ಲಿ ಸಫ‌ಲವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next