Advertisement
ಕೋವಿಡ್‌ದಿಂದಾಗಿ ಹಲವು ತಿಂಗಳ ಬಳಿಕ ಸೋಮ ವಾರದಿಂದ 9ನೇ ತರಗತಿ ಮೇಲ್ಪಟ್ಟ ಭೌತಿಕ ತರಗತಿಗಳು ಕೋವಿಡ್ ಸುರಕ್ಷತ ಕ್ಷಮ ಗಳೊಂದಿಗೆ ಆರಂಭವಾದವು. ಬೆಳಗ್ಗೆಯೇ ಎಲ್ಲಾ ಪ್ರೌಢಶಾಲೆಗಳು ಮದುವಣಗಿತ್ತಿಯಂತೆ ತಳಿರು ತೋರಣ, ವಿಶೇಷ ರಂಗೋಲಿಯಿಂದಸಿಂಗಾರಗೊಂಡು ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಅಣಿಯಾಗಿದ್ದವು. ಶಾಲೆ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು, ಜನಪ್ರತಿನಿಧಿ ಗಳು ಹಾಗೂ ಶಿಕ್ಷಕರು ಪುಸ್ತಕ, ಹೂ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.
ಬಳಿಕ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲಿಸುವುದು, ಅನಾರೋಗ್ಯ ಲಕ್ಷಣಗಳಿದ್ದರೆ ತಿಳಿಸಬೇಕು ಎಂಬಿತ್ಯಾದಿ ಸಲಹೆ ನೀಡಿದ ಬಳಿಕ ಎಲ್ಲಾ ವಿದ್ಯಾರ್ಥಿಗಳಿಂದ ಪೋಷಕರ ಅನುಮತಿ ಪತ್ರವನ್ನು ಶಿಕ್ಷಕರು ಪಡೆದುಕೊಂಡರು.
Related Articles
Advertisement
ಸಹಪಾಠಿಗಳೊಂದಿಗೆ ಪೂರಿ ಸವಿದರು: ಒಂದೂವರೆ ವರ್ಷದ ಬಳಿಕ ನಗರ ಬಸ್ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಓಡಾಟ ಕಂಡುಬಂದಿತು. ಇದರಿಂದ ರಸ್ತೆ ಬದಿಯ ತಂಡಿ, ತಿನಿಸು ಮಾರುವ ಸ್ಥಳಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗೊಳಂದಿಗೆ ಹರಟುತ್ತಾ ಗೋಲ್ಕೊಪ್ಪ, ಮಸಾಲ ಪೂರಿ, ಚುರುಮುರಿ ಸವಿದ ದೃಶ್ಯಗಳುಕಂಡು ಬಂದಿತು.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನಸಂಖ್ಯೆಯಲ್ಲಿ ಶಾಲೆಗೆ ಬಂದಿದ್ದಾರೆ. ಮೊದಲ ದಿನ ಯಾವುದೇ ತೊಂದರೆ ಇಲ್ಲದೇ ಮಧ್ಯಾಹ್ನದವರೆಗಿನ ತರಗತಿಗಳು ನಡೆದಿವೆ. ನಗರದಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಹಬ್ಬದ ವಾತಾವರಣ ಕಂಡು ಬಂದಿತು. ಕೋವಿಡ್ ಮಾರ್ಗಸೂಚಿ ಅನುಸರಿಸಿ ತರಗತಿ ನಡೆಸಲಾಗುತ್ತಿದೆ. ಜೊತೆಗೆ ಎಲ್ಲಾ ಸುರಕ್ಷಾಕ್ರಮ ಕೈಗೊಳ್ಳಲಾಗಿದೆ.-ರಾಮಚಂದ್ರರಾಜೇ ಅರಸ್, ಡಿಡಿಪಿಐ