Advertisement

ಅಮೆರಿಕದಲ್ಲಿ ಸ್ವಾಗತಂ ಕೃಷ್ಣಾ

02:50 PM May 07, 2017 | |

ಉಡುಪಿ: ಸಾಲಿಗ್ರಾಮ ಶಿಲೆಯ ಶ್ರೀ ಕೃಷ್ಣನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀಕೃಷ್ಣ ಮಠದಲ್ಲಿ ಪೂಜೆಗೊಂಡು ಪುತ್ತಿಗೆ ಮಠದ ಅಮೆರಿಕದ ನ್ಯೂಜೆರ್ಸಿ ಶ್ರೀ ಕೃಷ್ಣ ವೃಂದಾವನ ತಲುಪಿದ್ದಾನೆ. 

Advertisement

ಈ ಪ್ರಯುಕ್ತ ಮೇ 8ರಂದು ವಿದ್ವಾಂಸ ಡಾಣ ಬನ್ನಂಜೆ ಗೋವಿಂದಾಚಾರ್ಯರ ನೇತೃತ್ವದಲ್ಲಿ ಚಂಡೆ, ವಾದ್ಯ, ವೇದ ಘೋಷ ಹಾಗೂ ಅದ್ದೂರಿ ಸಾಂಪ್ರದಾಯಿಕ (ಸ್ವಾಗತಂ ಕೃಷ್ಣ ) ಮೆರವಣಿಗೆಯೊಂದಿಗೆ ನ್ಯೂಜೆರ್ಸಿ ಭಕ್ತವೃಂದ ಬರಮಾಡಿಕೊಳ್ಳಲಿದೆ ಎಂದು ಪುತ್ತಿಗೆ ಮಠದ ಪ್ರಕಟನೆ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next