Advertisement

ಉದ್ದೀಪನ: 9 ರಾಷ್ಟ್ರಗಳಿಗೆ ವೇಟ್‌ಲಿಫ್ಟಿಂಗ್‌ ನಿಷೇಧ

06:40 AM Oct 02, 2017 | |

ಹೊಸದಿಲ್ಲಿ: ರಶ್ಯ, ಚೀನ ಸೇರಿದಂತೆ ಒಟ್ಟು 9 ರಾಷ್ಟ್ರಗಳನ್ನು ವೇಟ್‌ಲಿಫ್ಟಿಂಗ್‌ನಿಂದ ಒಂದು ವರ್ಷ ನಿಷೇಧಿಸಲಾಗಿದೆ. ಸ್ವತ್ಛ ಕ್ರೀಡೆಗಾಗಿ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಸಮಿತಿ ಕಠಿನ ನಿರ್ಧಾರ ತೆಗೆದುಕೊಂಡಿದೆ.

Advertisement

ಕಜಕೀಸ್ಥಾನ್‌, ಅರ್ಮೇನಿಯಾ, ಅಜರ್‌ಬೈಜಾನ್‌, ಬೆಲಾರಸ್‌, ಮೊಲ್ಡೋವಾ, ಟರ್ಕಿ ಹಾಗೂ ಉಕ್ರೇನ್‌ ಕೂಡ ಅಮಾನತಿಗೆ ಒಳಗಾಗಿವೆ. ಈ ರಾಷ್ಟ್ರಗಳ 2008-2012ರವರೆಗಿನ ಉದ್ದೀಪನ ಮದ್ದು  ಪರೀಕ್ಷೆಯಿಂದ ವರದಿ ತೆಗೆದುಕೊಳ್ಳಲಾಗಿದ್ದು, ಇದರ ಪ್ರಕಾರ ಶಿಕ್ಷೆ ಪ್ರಕಟಿಸಲಾಗಿದೆ.

ಅಮಾನತುಗೊಂಡ ರಾಷ್ಟ್ರಗಳ ಪೈಕಿ ಒಲಿಂಪಿಕ್ಸ್‌ ವೇಳೆ ಕನಿಷ್ಠ ಎಂದರೂ 3 ಮಂದಿ ಉದ್ದೀಪನ ಮದ್ದು ಸೇವಿಸಿದ್ದಾರೆ ಎಂದು ವರದಿಯಲ್ಲಿ ದಾಖಲಾಗಿದೆ. ಪ್ರತಿ ರಾಷ್ಟ್ರಗಳು  ಉದ್ದೀಪನ ಕುರಿತು ಜಾಗೃತಿ ಅಭಿಯಾನ ಮಾಡಬೇಕು. ನಮ್ಮ ಸಮಿತಿಯ ಕೆಳಗಿರುವ ಯಾವುದೇ ಸಂಸ್ಥೆಗಳು, ರಾಷ್ಟ್ರಗಳು ಉದ್ದೀಪನ ಮದ್ದು ಸೇವಿಸುವುದನ್ನು ಸಹಿಸುವುದಿಲ್ಲ ಎಂದು ಐಡಬ್ಲ್ಯುಎಫ್ ಅಧ್ಯಕ್ಷ ಥಾಮಸ್‌ ಅಜಾನ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next