Advertisement

ವಾರ ಭವಿಷ್ಯ: ಈ ರಾಶಿಯವರಿಗಿದೆ ಈ ವಾರ ಅದೃಷ್ಟ

09:56 AM Jan 13, 2020 | keerthan |

12-1-2020 ರಿಂದ 18-1-2020ರ ವರೆಗೆ

Advertisement

ಮೇಷ: ಆತ್ಮವಿಶ್ವಾಸ, ಪ್ರಯತ್ನ ಬಲದಿಂದ ಎಲ್ಲ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಬಹುದು. ಹಾಗೆಯೇ ಶುಭಫ‌ಲದ ಪ್ರಾಪ್ತಿ ಜಾಸ್ತಿ ಎಂದೇ ಹೇಳಬಹುದು. ವೃತ್ತಿರಂಗದಲ್ಲಿ ಅಧಿಕಾರಕ್ಕೆ ಏನೂ ಕೊರತೆ ಇರದು. ಪಾರ್ಶ್ವ ಭಾಗದಲ್ಲಿ ಮತ್ತು ಉದರದಲ್ಲಿ ಕೆಲವೊಂದು ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆ ವಹಿಸಬೇಕು. ಜೀವನದಲ್ಲಿ ಧನಾದಾಯ ವಿಶೇಷವಾಗಿ ವೃದ್ಧಿಗೊಳ್ಳುತ್ತ ಹೋಗಲಿದೆ. ಹಿಡಿದ ಕೆಲಸವನ್ನು ಸಾಧಿಸಿಯೇ ಬಿಡುವಿರಿ.
ವಿದ್ಯಾರ್ಥಿಗಳು, ಗುರುವರ್ಗ ನಿಮ್ಮ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ವಾರ.
ಶುಭವಾರ: ಮಂಗಳ, ಗುರು, ಶುಕ್ರವಾರ

ವೃಷಭ: ಜೀವನದ ಎಲ್ಲ ವಿಚಾರಗಳಲ್ಲಿ ಆಶಾವಾದಿಗಳಾಗಿರುವಿರಿ. ಭರವಸೆ ಇಡಿರಿ. ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿರಿ. ಯಶಸ್ಸು ಇದೆ. ವೃತ್ತಿರಂಗದಲ್ಲಿ ಸ್ಥಾನಮಾನವೂ ವರ್ಧಿಸುವುದು. ಗೃಹದಲ್ಲಿ ದೇವತಾ ಕಾರ್ಯಗಳು ನೆರವೇರುವುವು. ಆದಾಯ ಉತ್ತಮವಿದ್ದರೂ, ವಿನಿಯೋಗ ಹೆಚ್ಚಾಗುತ್ತಲೇ ಹೋಗುವುದು. ಹಿಡಿತವಿರಲಿ. ರಾಜಕೀಯ ಪಟುಗಳಿಗೆ ಪರಿವರ್ತನೆಯ ಕಾಲವಿದು. ಸದುಪಯೋಗಿಸಿಕೊಳ್ಳಿರಿ. ಪಾಲು ಬಂಡವಾಳದಲ್ಲಿ ಲಾಭಾಂಶ ಹೆಚ್ಚಿದ್ದರೂ ವೈಯಕ್ತಿಕ ಸಂಬಂಧಗಳಲ್ಲಿ ಬಿರುಕುಗಳು ತೋರಿ ಬಂದಾವು. ಋಣಭಾರ ತಪ್ಪಿದ್ದಲ್ಲ ಎಂಬುದು ನೆನಪಿರಲಿ.
ಶುಭವಾರ: ಬುಧ, ಶುಕ್ರ, ಭಾನುವಾರ

ಮಿಥುನ: ಬಹುದಿನಗಳ ಅನಂತರ ನ್ಯಾಯಾಲಯದ ಪ್ರಕರಣಗಳು
ಇತ್ಯರ್ಥಗೊಂಡಾವು. ಸರ್ಕಾರಿ ಕೆಲಸ ಕಾರ್ಯಗಳ ಸಿದ್ಧಿಯಿದೆ.ಯಾವುದೇ ರೀತಿಯಲ್ಲಿ ಖರ್ಚುವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆ ಇರದು. ಪ್ರವಾಸೀ, ಉದ್ಯಮ, ಸಾರಿಗೆ, ಉದ್ಯೋಗ ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಈ ಸಮಯ ಅಭಿವೃದ್ಧಿದಾಯಕವೆನಿಸಲಿದೆ. ವೃತ್ತಿರಂಗದಲ್ಲಿ ಅಂತಃಕಲಹ, ಹಿತ ಶತ್ರುಬಾಧೆ ಅನುಭವಕ್ಕೆ ಬಂದೀತು. ಮುಖ್ಯವಾಗಿ ಅವಿವಾಹಿತರಿಗೆ ವಿವಾಹ ಸಿದ್ಧಿಯ ಕಾಲ. ಹೊಸ ವಾಹನ ಖರೀದಿಗೆ ಅವಕಾಶವಿದೆ.
ಶುಭವಾರ: ಸೋಮ, ಮಂಗಳ, ಗುರುವಾರ

ಕರ್ಕಾ: ಕಟ್ಟಡ ನಿರ್ಮಾಣಕ್ಕೆ ಸ್ಥಗಿತದ ಭೀತಿ ಎದುರಾಗಬಹುದು. ಮಿತ್ರರ ಸಹಕಾರಿಂದ ನೆಮ್ಮದಿ ತೋರುವುದು. ವ್ಯವಹಾರಗಳು ಉತ್ತಮವಿದ್ದರೂ ಆದಾಯ ಸ್ಥಗಿತಗೊಳ್ಳುವ ಕಾಲ. ಆಗಾಗ ಹಿತಶತ್ರು ಬಾಧೆಯಿಂದ ಮನಸ್ಸಿಗೆ ನೆಮ್ಮದಿ ಇರದು. ವೈವಾಹಿಕ ಸಂಬಂಧ ಬಲಗೊಂಡು ಕಂಕಣ ಭಾಗ್ಯವನ್ನು ಒದಗಿಸಲಿದೆ. ಅಧಿಕಾರಿ ವರ್ಗದವರ ಮುಂಭಡ್ತಿಯಂತಹ ಕನಸು ನನಸಾಗಲಿದೆ. ಶೇರು, ಫೈನಾನ್ಸ್‌ನಲ್ಲಿ ತೊಡಗಿಸಿದ ಹಣದ ಬಗ್ಗೆ ಜಾಗ್ರತೆ ಇರಲಿ. ನವದಂಪತಿಗೆ ಸಂತಾನ ಭಾಗ್ಯದ ಸೂಚನೆ ಲಭಿಸುವುದು.
ಶುಭವಾರ: ಸೋಮ, ಶುಕ್ರ, ಶನಿವಾರ

Advertisement

ಸಿಂಹ: ನೀವು ಅಂದುಕೊಂಡ ಕಾರ್ಯಗಳೆಲ್ಲವೂ ನೆರವೇರುವುವು. ಶ್ರೀದೇವರ ಆರಾಧನೆಯ ಭಾಗ್ಯ ಒದಗಿ ಬಂದೀತು. ಹಿರಿಯರಿಗೆ ಅಪಚಾರ, ಮನಃಕ್ಲೇಶಕ್ಕೆ ಎಡೆಯಿದೆ. ನೌಕರ ವರ್ಗದವರಿಗೆ ಮುಂಭಡಿಯ ಭಾಗ್ಯವಿದೆ. ಪ್ರವಾಸ ಯೋಗದಿಂದ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಅವಿವಾಹಿತರಿಗೆ ಸಂಭ್ರಮದ ದಿನಗಳು ಕಾದಿರುತ್ತವೆ. ಸದು ಪಯೋಗವಿರಲಿ. ನಿಮ್ಮ ಸಾತ್ವಿಕತೆಗೆ ಪ್ರಶಂಸೆ ಸಲ್ಲಲಿದೆ. ಆದಾಯದಲ್ಲಿ ಕುಬೇರನ ಕಣಜವೇ ನಿಮ್ಮದೆನಿಸೀತು. ಪುಣ್ಯ ಕಾರ್ಯಗಳು, ದೇವತಾ ಕಾರ್ಯಗಳು ಸಹ ನಡೆಯಲಿವೆ.
ಶುಭವಾರ: ಸೋಮ, ಗುರು, ಭಾನುವಾರ

ಕನ್ಯಾ: ಅನೇಕ ಬಗೆಯ ಖರ್ಚುವೆಚ್ಚಗಳು ಹೆಚ್ಚಿನ ಋಣಬಾಧೆಗೆ ಕಾರಣವಾಗಬಹುದು. ವೃತ್ತಿರಂಗ, ಮೇಲಧಿಕಾರಿ ವರ್ಗದಿಂದ ಪ್ರಶಂಸೆ ಸಲ್ಲಲಿದೆ. ಆತ್ಮೀಯರೊಡನೆ ತಾತ್ವಿಕ ಕಲಹ ತಂದೀತು. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಲಾಭವಿದೆ. ತಪ್ಪು ಲೆಕ್ಕಾಚಾರ ಅಥವಾ ನಿಧಾನತೆಯಿಂದ ಕಾರ್ಯಕ್ಷೇತ್ರದಲ್ಲಿ ಸದವಕಾಶ ತಪ್ಪಬಹುದು. ಉಷ್ಣವಾತಾ ಪೀಡೆಯಿಂದ, ಪ್ರಯಾಣದಿಂದ ಅನಾರೋಗ್ಯ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆಯನ್ನು ವಹಿಸುವುದು ಅಗತ್ಯ.
ಶುಭವಾರ: ಬುಧ, ಶುಕ್ರ, ಭಾನುವಾರ

ತುಲಾ: ಈ ವಾರ ನಿಮ್ಮ ಅಭಿವೃದ್ಧಿ ಆಗಾಗ ಏರುಪೇರಾಗಲಿದೆ. ಹಿರಿಯರೊಡನೆ ಅನಾವಶ್ಯಕ ವಿವಾದಗಳು ಬೇಡ. ಧರ್ಮ ಕಾರ್ಯಗಳಿಂದ ಪುಣ್ಯ ಸಂಪಾದನೆಯು ಯಥೇತ್ಛವಾಗಿ ನೆರವೇರಲಿದೆ. ನ್ಯಾಯಾಲಯದ ದರ್ಶನದ ಅವಕಾಶಗಳಿದ್ದರೂ ಅಂತಿಮ ಜಯ ನಿಮ್ಮದಾಗಲಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಘ್ನ ಬರುವ ಸಂಭವವಿರುವುದರಿಂದ ಹೆಚ್ಚಿನ ಜಾಗ್ರತೆ ಬೇಕೇ ಬೇಕಾಗುತ್ತದೆ. ಅವಿವಾಹಿತರು ಅಡೆತಡೆಗಳನ್ನು ಅನುಭವಿಸುವಂತಾದೀತು. ಹಂತ ಹಂತವಾಗಿ ಸುಖ, ನೆಮ್ಮದಿಗಳು ವೃದ್ಧಿಯಾಗುತ್ತವೆ.
ಶುಭವಾರ: ಗುರು, ಶುಕ್ರ, ಶನಿವಾರ

ವೃಶ್ಚಿಕ: ಆದಾಯ ಕಡಿಮೆ, ದುಡಿಮೆ ಹೆಚ್ಚು ಎನಿಸಲಿದೆ. ಜಿಗುಟು ವರ್ತನೆಯಿಂದ ಕೆಲಸಕಾರ್ಯಗಳು ವಿಳಂಬಗತಿಯನ್ನು ಪಡೆಯಲಿವೆ. ಹಠಸ್ವಭಾವ ಹಾಗೂ ಪ್ರಯತ್ನ ಬಲದಿಂದ ಕೆಲಸಕಾರ್ಯಗಳು ಪೂರ್ಣಗೊಂಡಾವು. ವೈದ್ಯಕೀಯ ವೃತ್ತಿಯವರಿಗೆ ಜನಾಪವಾದದ ಭೀತಿ
ಎದುರಾಗಬಹುದು. ಮಾನಸಿಕ ಅಸ್ಥಿರತೆ ಹಾಗೂ ಋಣಾತ್ಮಕ ಚಿಂತನೆ ಆಗಾಗ ಕಾಡಲಿದೆ. ವಾಯುಪೀಡೆಯಿಂದ ದೇಹಪೀಡೆ ಕಿರಿಕಿರಿ ಎನಿಸಲಿದೆ. ಧನಚಿಂತೆ ನಿರಂತರವಾಗಿರುವುದರಿಂದ ಖರ್ಚುವೆಚ್ಚಗಳಲ್ಲಿ ಹಿಡಿತ ಅಗತ್ಯ. ವೃತ್ತಿ ಬಾಂಧವರ ಬಗ್ಗೆ ತಾಳ್ಮೆ , ಸಮಾಧಾನ ಇರಲಿ.
ಶುಭವಾರ: ಸೋಮ, ಬುಧ, ಗುರುವಾರ

ಧನು: ಜನ್ಮರಾಶಿಗೆ ಸಪ್ತಮ ರಾಹುವಿದ್ದು, ಆರೋಗ್ಯ ಹದಗೆಟ್ಟಿತು. ಹಾಗೇ ಸಾಕಷ್ಟು ತೊಂದರೆ ಕೊಟ್ಟಿತು. ಹಿತಶತ್ರುಗಳಿಂದಾಗಿ ಪದೇ ಪದೇ ಕಾರ್ಯ ಹಾನಿಯಾಗಲಿದೆ. ಮಾತುಕತೆಗೆ ಬಂದ ವೈವಾಹಿಕ ಸಂಬಂಧಗಳು ಸ್ವಲ್ಪ ಕಾಲ ಸ್ಥಗಿತಗೊಳ್ಳಬಹುದು. ವಿವೇಚನೆಯಿಂದ ಹೆಜ್ಜೆಯಿಡುವುದು ಒಳ್ಳೆಯದು. ನೂತನ ವೃತ್ತಿಯ ಲಾಭದಲ್ಲಿಯೂ ವಿಳಂಬಗತಿ ಗೋಚರಕ್ಕೆ ಬರುತ್ತದೆ. ಮಡದಿಯ ಮುನಿಸು ಅಸಮಾಧಾನಕ್ಕೆ ಕಾರಣವಾಗಲಿದೆ. ಸಂಪಾದನೆಯನ್ನು ವೃದ್ಧಿಸಿದರೆ ಆರ್ಥಿಕ ಸಮತೋಲನ ಸಾಧಿಸಬಹುದು.
ಶುಭವಾರ: ಬುಧ, ಗುರು, ಶನಿವಾರ

ಮಕರ: ನಿಮ್ಮನ್ನು ಎದುರು ಹಾಕಿಕೊಳ್ಳುವವರು ಸ್ವಲ್ಪ ಚಿಂತಿಸ ಬೇಕಾದೀತು. ವಿದ್ಯಾರ್ಥಿಗಳಿಗೆ ಪರಿಪೂರ್ಣ ಜ್ಞಾನಾರ್ಜನೆಯಅವಕಾಶಗಳು ನಾನಾ ರೀತಿಯಲ್ಲಿ ಒದಗಿಬಂದಾವು. ದೇವತಾನುಗ್ರಹ ನಿಮ್ಮನ್ನು ಆಗಾಗ ಹುಡುಕಿಕೊಂಡು ಬರಲಿದೆ. ನಿಮ್ಮ ಬುದ್ಧಿಯ ಹಿಂದೆ ನೀವು ಯಾವತ್ತೂ ಕಾಣದಷ್ಟು ಆಲೋಚನೆಗಳು ಬಂದು, ಮುನ್ನಡೆಗೆ ಪೂರಕವಾಗಲಿದೆ. ನೆಂಟಸ್ತಿಕೆಗಳು ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚು .
ಶುಭವಾರ: ಗುರು, ಶುಕ್ರ, ಶನಿವಾರ

ಕುಂಭ: ದೇಹಬಾಧೆಯು ನಿಮ್ಮ ಸುಖ-ಸಂತೋಷವನ್ನು ಕಸಿದು ಕೊಂಡೀತು. ತಂದೆ ಮಕ್ಕಳೊಡನೆ ಸ್ಥಿರ ಆಸ್ತಿಗಳ ಬಗ್ಗೆ ತಕರಾರು ತಂದೀತು. ಕಾರ್ಮಿಕರ ನಿಧಾನ ಪ್ರವೃತ್ತಿಯಿಂದ ಗೃಹ ನಿರ್ಮಾಣ ಕಾರ್ಯಗಳಲ್ಲಿ ವಿಳಂಬ ತರುತ್ತದೆ. ವೃತ್ತಿರಂಗದಲ್ಲಿ ಕಾರ್ಯದೊತ್ತಡವಿದ್ದರೂ ಅಭಿವೃದ್ಧಿಯು ಕೊಂಚ ನೆಮ್ಮದಿ ತರಬಹುದು. ಗಂಡ ಹೆಂಡಿರಲ್ಲಿ ಅಕಾರಣ ಭಿನ್ನಾಭಿಪ್ರಾಯ ವಿರಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಬೇಕು. ಮಕ್ಕಳ ವೈವಾಹಿಕ ಸಂಬಂಧದ ವಿಚಾರದಲ್ಲಿ ಮಾತುಕತೆ ನಡೆಯಲಿದ್ದು, ಮನಸ್ಸಿನಲ್ಲಿ ಆಶಾಭಾವನೆ ಮೂಡಬಹುದು.
ಶುಭವಾರ: ಸೋಮ, ಬುಧ, ಗುರುವಾರ

ಮೀನ: ಆಕಸ್ಮಿಕ ಧನಹಾನಿ, ವೃಥಾ ಅಪವಾದ ಭೀತಿ ಕಂಡುಬರಲಿದೆ. ಕಾರ್ಯನಿರತರಿಗೆ ಪ್ರಚೋದನೆ ಕಡಿಮೆಯಾಗಿ ಯಶಸ್ಸು ಸಿಗದು. ಸಾಮಗ್ರಿಗಳ ಕೊರತೆ, ವ್ಯಾಪಾರ, ವ್ಯವಹಾರಗಳ ಮೈತ್ರಿ ಪರಿಣಾಮ ಬೀರಲಿದೆ. ಆಪ್ತರ ಹಿತವಚನ ಅಲಕ್ಷಿಸಿದಲಿ ಸಮಸ್ಯೆ ನಿರ್ಮಾಣವಾಗಬಹುದು. ಕೃಷಿಕಾರ್ಯ ವಿಳಂಬವಾಗದಂತೆ ರೈತರು ಜಾಗ್ರತೆ ವಹಿಸಬೇಕಾದೀತು. ಆಕಸ್ಮಿಕ ವಿವಾಹ ಭಾಗ್ಯವು ಯೋಗ್ಯವಯಸ್ಕರಿಗೆ ಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಬಾಕಿ ವಸೂಲಿಗೆ ಇದು ಸಕಾಲ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫ‌ಲ ದೊರೆಯಲಿದೆ.
ಶುಭವಾರ: ಬುಧ, ಗುರು, ಶುಕ್ರವಾರ

 

ಎನ್‌. ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next