Advertisement

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

01:50 PM Jan 08, 2025 | Team Udayavani |

ಬೆಂಗಳೂರು: ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ OnePlus ಫ್ಲಾಗ್ ಶಿಪ್ ಫೋನ್ ಒನ್ ಪ್ಲಸ್ 13 (OnePlus 13), 13R ಮಾಡೆಲ್ ಗಳನ್ನು ಜ.7ರ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ.

Advertisement

ಈ ಹೊಸ ಪವರ್ ಹೌಸ್ ಸರಣಿಯು ಫೋಟೋಗ್ರಫಿಯನ್ನು (Photography) ವೃತ್ತಿಪರ ಮಟ್ಟಕ್ಕೆ ಏರಿಸುವ ಅಪ್‌ಗ್ರೇಡ್ ಕ್ಯಾಮೆರಾ ಸಿಸ್ಟಮ್‌ಗಳು (Upgrade Camera System) ಹಾಗೂ ಹೊಸದಾಗಿ ಬಿಡುಗಡೆಯಾದ ಆಕ್ಸಿಜೆನ್‌ಓಎಸ್‌ 15 (Oxygen OS 15) ಹೊಂದಿದೆ. AI ಸಾಮರ್ಥ್ಯ ಮತ್ತು ರಿಫ್ರೆಶ್ ಬಣ್ಣಗಳ ಪರಿಷ್ಕೃತ ವಿನ್ಯಾಸ ಹೊಂದಿವೆ.

ಒನ್ ಪ್ಲಸ್ ನಲ್ಲಿ, ನಾವು ಬಳಕೆದಾರರ ದೈನಂದಿನ ಅನುಭವ ಉನ್ನತೀಕರಿಸುವ ಗ್ರಾಹಕ-ಕೇಂದ್ರಿತ ಸೌಲಭ್ಯಗಳನ್ನು ನೀಡುವುದರಲ್ಲಿ ವಿಶ್ವಾಸ ಇರಿಸಿದ್ದೇವೆ ಎಂದು ಒನ್ ಪ್ಲಸ್ ಇಂಡಿಯಾದ ಸಿಇಓ ರಾಬಿನ್ ಲಿಯು ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಒನ್ ಪ್ಲಸ್ 13 ಸರಣಿ ಅತ್ಯುತ್ತಮ ಸ್ಪೆಸಿಫಿಕೇಷನ್ ಗಳನ್ನು (Specification) ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತದೆ. ಒನ್ ಪ್ಲಸ್ 13 ಸರಣಿಯ ಸ್ಮಾರ್ಟ್ ಫೋನ್ (Smart Phone) ಗಳು ಕೇವಲ ಫೋನ್ ಗಳಲ್ಲ; ಅವು ನಿಮ್ಮ ದೈನಂದಿನ ಕೆಲಸ ಮತ್ತು ಗೇಮಿಂಗ್ ಗೆ ನಿಮ್ಮ ಸಹವರ್ತಿಗಳಾಗಿ ಕೆಲಸ ಮಾಡುತ್ತವೆ ಎಂದು ತಿಳಿಸಿದರು.

Advertisement

ಒನ್ ಪ್ಲಸ್ 13:

ಒನ್ ಪ್ಲಸ್ 13 ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ (Qualcomm Snapdragon) 8 ಎಲೈಟ್ (Snapdragon 8 Elite) ಹೊಸ ಪ್ರೊಸೆಸರ್ ಹೊಂದಿದೆ. ಮಿಂಚಿನ ವೇಗದ ಕಾರ್ಯಕ್ಷಮತೆಗಾಗಿ 24GB RAM ಒಳಗೊಂಡಿದ್ದು,1 ಟಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದಲ್ಲದೇ 12+256, 16+512 ಸಂಗ್ರಹ ಸಹ ಇದೆ.

ಬ್ಯಾಟರಿ:

6,000 mAh ಸಿಲಿಕಾನ್ ನ್ಯಾನೊಸ್ಟಾಕ್ ಬ್ಯಾಟರಿ ಹೊಂದಿದ ಮೊದಲ ಒನ್ ಪ್ಲಸ್ ಸ್ಮಾರ್ಟ್ ಫೋನ್ ಆಗಿದೆ. IP68 ಮತ್ತು IP69 ರೇಟಿಂಗ್ ಹೊಂದಿದ್ದು, ಅಷ್ಟು ದೊಡ್ಡ ಬ್ಯಾಟರಿ ಹೊಂದಿದ್ದರೂ ಸ್ಲಿಮ್ ಆಗಿದೆ.

ಒನ್ ಪ್ಲಸ್ 13 ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಇದನ್ನು Hasselblad ಜೊತೆಗೆ, ಇದು 50MP ಸೋನಿ LYT-808 ಮುಖ್ಯ ಕ್ಯಾಮೆರಾ (Main Camera), 50MP ಅಲ್ಟ್ರಾ-ವೈಡ್ ಕ್ಯಾಮೆರಾ (Ultra Wide Camera) ಮತ್ತು 50MP 3X ಟ್ರಿಪ್ರಿಸಂ ಟೆಲಿಫೋಟೋ ಕ್ಯಾಮೆರಾ (Telephoto Lens) ಹೊಂದಿದೆ. ಇದು 10X ಕ್ಕೂ ಹೆಚ್ಚು ಜೂಮ್ ನಲ್ಲಿ ಸೆರೆಹಿಡಿಯುತ್ತದೆ. ಒನ್ ಪ್ಲಸ್ 13 ವೇಗವಾಗಿ ಚಲಿಸುವ ಕಾರುಗಳು, ಓಟ ಇತ್ಯಾದಿ ಸೆರೆಹಿಡಿಯಲು ಡ್ಯುಯಲ್ ಎಕ್ಸ್ ಪೋಸರ್ ಅಲ್ಗಾರಿದಮ್, ಕ್ಲಿಯರ್ ಬರ್ಸ್ಟ್ ಮತ್ತು ಆಕ್ಷನ್ ಮೋಡ್ ಹೊಂದಿದೆ.

ಇತ್ತೀಚಿನ OxygenOS 15 ನೊಂದಿಗೆ ಒನ್ ಪ್ಲಸ್ (OnePlus) AI ಸಾಮರ್ಥ್ಯ ಹೊಂದಿದೆ. ಇದು ಸರ್ಕಲ್ ಟು ಸರ್ಚ್ ನಂತಹ AI ಸಾಮರ್ಥ್ಯಗಳನ್ನು ನೀಡುತ್ತದೆ. 2K 120Hz ProXDR ಪರದೆ ಹೊಂದಿದೆ. ನೈಸರ್ಗಿಕ ಬಣ್ಣಕ್ಕಾಗಿ ಡಿಸ್‌ಪ್ಲೇ ಮೇಟ್ ನಲ್ಲಿನ ತಜ್ಞರು A++ ರೇಟ್ ಮಾಡಿದ ಮೊದಲ ಫೋನ್ ಇದಾಗಿದೆ. ಡಿಸ್ ಪ್ಲೇಯ ಕಣ್ಣುಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಇತ್ತೀಚಿನ ತಂತ್ರಜ್ಞಾನ ಹೊಂದಿದೆ. TÜV ರೈನ್ ಲ್ಯಾಂಡ್ ಐ ಕೇರ್ 4.0 ಪ್ರಮಾಣೀಕರಣ ಹೊಂದಿದೆ. ಮತ್ತು ಆಕ್ವಾ ಟಚ್ 2.0 ಮೂಲಕ ಕೈಯಲ್ಲಿ ಎಣ್ಣೆ ಜಿಡ್ಡು ಇದ್ದರೂ ಅಥವಾ ಉಣ್ಣೆಯ ಕೈಗವಸುಗಳನ್ನು ಹಾಕಿದ್ದರೂ ಮೊಬೈಲ್ ಪರದೆಯ ಮೇಲೆ ಟಚ್ ಮಾಡಿದರೆ ಕಾರ್ಯನಿರ್ವಹಿಸುತ್ತದೆ.

ಇದು ಮಿಡ್ ನೈಟ್ ಓಷನ್, ಆರ್ಕಟಿಕ್ ಡಾನ್ ಮತ್ತು ಬ್ಲ್ಯಾಕ್ ಎಕ್ಲಿಪ್ಸ್ ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ: 12+256 ಜಿಬಿ- 69,999 ರೂ.16+512 ಜಿಬಿ 76,999 ರೂ., 24+1TB-89,999 ರೂ. ಒನ್ ಪ್ಲಸ್.ಇನ್, ಅಮೆಜಾನ್.ಇನ್, ಒನ್ ಪ್ಲಸ್ ಸ್ಟೋರ್ಸ್, ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ ನಲ್ಲಿ ಜನವರಿ 10 ರಿಂದ ಲಭ್ಯ.

OnePlus 13R:

ಇದು ಒನ್ ಪ್ಲಸ್ 13 ಗಿಂತ ಕೊಂಚ ಕಡಿಮೆ ಸ್ಪೆಸಿಫಿಕೇಷನ್ ಹೊಂದಿದ್ದರೂ ಫ್ಲಾಗ್ ಶಿಪ್ ದರ್ಜೆಯ ಗುಣವಿಶೇಷಣಗಳನ್ನು ಹೊಂದಿದೆ. ಇದರಲ್ಲಿ ಸ್ನಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ ಇದ್ದು, ಇದು ಸಹ ಅತ್ಯುನ್ನತ ದರ್ಜೆಯ ಪ್ರೊಸೆಸರ್ ಆಗಿದೆ. 6000 ಎಂಎಎಚ್ ಬ್ಯಾಟರಿ, ಗೊರಿಲ್ಲಾ ಗ್ಲಾಸ್ 7i ಪರದೆ ಹಾಗೂ ಹಿಂಬದಿಯಲ್ಲಿ ಹೊಂದಿದೆ. ಕ್ವಾಲ್ ಕಾಂ ಎಐ ಇಂಜಿನ್ ಹೊಂದಿದ್ದು , 12+256 ಮತ್ತು 16+512 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ.

ತ್ರಿವಳಿ ಕ್ಯಾಮರಾ ಹೊಂದಿದ್ದು, ಮುಖ್ಯ ಕ್ಯಾಮರಾ 50 ಎಂಪಿಯೊಂದಿಗೆ ಹೊಸ ಸೋನಿ ಎಲ್ ವೈ ಟಿ 700 ಸೆನ್ಸರ್ ಮತ್ತು ಓಐಎಸ್ ಸೌಲಭ್ಯವಿದೆ. 50 ಎಂಪಿ ಪೋಟ್ರೈಟ್ ಮತ್ತು 8ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ.  ಇದು ನೆಬುಲಾ ನೋಯರ್ ಮತ್ತು ಅಸ್ಟ್ರಾಲ್ ಟ್ರಯಲ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯ. 12+256 ಜಿಬಿ 42,999 ರೂ., 16+512 ಜಿಬಿ- 49,999 ರೂ.

5.5ಜಿ ಸೌಲಭ್ಯ:

ಒನ್ ಪ್ಲಸ್ 13 ಸರಣಿ ಫೋನ್ ಗಳು ಸ್ಥಿರ ನೆಟ್ ವರ್ಕ್ ಗಾಗಿ ಜಿಯೋ ಸಹಯೋಗದೊಂದಿಗೆ 5.5 ಜಿ ಸೌಲಭ್ಯ ಹೊಂದಿದ ಮೊದಲ ಫೋನ್ ಗಳಾಗಿವೆ.

ಬೀಕನ್ ಲಿಂಕ್: ವಾಕಿಟಾಕಿ ಸೌಲಭ್ಯ:

13 ಸರಣಿಯಲ್ಲಿ ಬೀಕನ್ ಲಿಂಕ್ ಮೂಲಕ ನೆಟ್ ವರ್ಕ್ ಇಲ್ಲದ ಸ್ಥಳಗಳಲ್ಲಿ ಸಹ ಬ್ಲೂಟೂತ್ ಸಂಪರ್ಕದ ಮೂಲಕ 200 ಮೀಟರ್ ದೂರದವರೆಗೆ ಫೋನ್ ಗಳನ್ನು ವಾಕಿಟಾಕಿ ತರಹ ಬಳಸಹುದಾಗಿದೆ. ಬೀಕನ್ ಲಿಂಕ್ ಅಪ್ ಡೇಟ್  2025ರ ಬೇಸಿಗೆಯಲ್ಲಿ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಇದಲ್ಲದೇ 13 ಸರಣಿಯ ಫೋನ್ ಗಳಲ್ಲಿ ಬ್ಲೂಟೂತ್ ಸಂಪರ್ಕ 360 ಮೀಟರ್ ದೂರದವರೆಗೂ ದೊರಕುತ್ತದೆ. ಜಿಮ್ ಗೆ ಹೋಗುವವರು ಬ್ಲೂಟೂತ್ ಹೆಡ್ ಫೋನನ್ನು ಹಾಕಿಕೊಂಡು ತಮ್ಮ ಫೋನ್ ಗಳನ್ನು ಜಿಮ್ ನ ಲಾಕರ್ ನಲ್ಲಿಟ್ಟು 360 ಮೀಟರ್ ದೂರದಲ್ಲಿದ್ದರೂ ವರ್ಕೌಟ್ ಮಾಡುತ್ತಾ ಸಂಗೀತ  ಆಲಿಸಬಹುದಾಗಿದೆ.

ಇತ್ತೀಚಿಗೆ ಒನ್ ಪ್ಲಸ್ ನ ಕೆಲ ಫೋನ್ ಗಳಲ್ಲಿ ಗ್ರೀನ್ ಲೈನ್ ಇಶ್ಯೂ ಬಂದ ಕಾರಣ ತನ್ನ ಯಾವುದೇ ಒನ್ ಪ್ಲಸ್ ಫೋನ್ ನಲ್ಲಿ ಹಸಿರು ಗೆರೆ ಬಂದರೆ ಉಚಿತವಾಗಿ ಪರದೆ ಬದಲಿಸಿ ಕೊಡುವುದಾಗಿ ಕಂಪೆನಿ ವಾಗ್ದಾನ ನೀಡಿದೆ.

OnePlus Buds Pro 3:

13 ಸರಣಿಯ ಫೋನ್ ಗಳ ಜೊತೆ ಒನ್ ಪ್ಲಸ್ ಬಡ್ಸ್ ಪ್ರೊ 3 ಹೊಸ ಸ್ಯಾಫೈರ್ ಬ್ಲೂ ಬಣ್ಣದಲ್ಲಿ ಒನ್ ಪ್ಲಸ್ ಬಿಡುಗಡೆ ಮಾಡಿದೆ. ಈ ಬಡ್ ಗಳು ಏರ್ಪೋರ್ಟ್, ರೈಲು ನಿಲ್ದಾಣಗಳಂತಹ ಕಡೆಗಳಲ್ಲೂ ಸಹ 360 ಮೀಟರ್ ದೂರದಲ್ಲಿ ಫೋನ್ ಇದ್ದರೂ ಸಂಪರ್ಕದಲ್ಲಿರುತ್ತವೆ ಎಂದು ಕಂಪೆನಿ ತಿಳಿಸಿದೆ. ಇದರ ಬೆಲೆ: 11,999 ರೂ.

Advertisement

Udayavani is now on Telegram. Click here to join our channel and stay updated with the latest news.

Next