Advertisement

ಜಮಖಂಡಿಯಲ್ಲಿ ವೀಕೆಂಡ್‌ ಕರ್ಫ್ಯೂ ಯಶಸ್ವಿ

09:18 PM Jan 17, 2022 | Team Udayavani |

ಜಮಖಂಡಿ: ತಾಲೂಕಿನಲ್ಲಿ ಎರಡನೆಯ ವೀಕೆಂಡ್‌ ಕರ್ಫ್ಯೂಯಶಸ್ವಿ ಆಗಿದೆ. ತಾಲೂಕಾಡಳಿತ ಮತ್ತು ಪೊಲೀಸ್‌ ಇಲಾಖೆ ಬಂದೋಬಸ್ತ್ ವ್ಯವಸ್ಥೆಯಿಂದ ಕೈಗೊಂಡಿದ್ದ ಕೊರೊನಾ ವೀಕೆಂಡ್‌ ಕರ್ಫ್ಯೂ ಯಶಸ್ವಿಯಾಗಿದೆ ಎಂದು ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಹೇಳಿದರು.

Advertisement

ನಗರದಲ್ಲಿ ರವಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅನವಶ್ಯ ಕವಾಗಿ ಸಂಚರಿಸುವ ವಾಹನಗಳಿಗೆ, ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಅನಾವಶ್ಯಕ ಸಂಚರಿಸುವ ವಾಹನಗಳ ಸವಾರರಿಗೆ, ಜನರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.

ಸರಕಾರ ಸಾರ್ವಜನಿಕರ ಹಿತಕ್ಕಾಗಿ ಕೊರೊನಾ ವೀಕೆಂಡ್‌ ಕರ್ಫ್ಯೂ ಜಾರಿಗೆ ಮಾಡಿದ್ದು, ಸಾರ್ವಜನಿಕರು ಸಹಕಾರ ಕೂಡ ಬಹಳಷ್ಟು ಅಗತ್ಯವಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು. ಸಾರ್ವಜನಿಕರು ಸಾಮಾಜಿಕ ಅಂತರ ಪಾಲಿಸಬೇಕು.

ಕೊರೊನಾ ಮೂನ್ಸೂಚನೆಗಳು ಕಂಡುಬಂದಲ್ಲಿ ಕೂಡಲೇ ನಗರದ ಸರಕಾರಿ ಆಸ್ಪತ್ರೆಯಲ್ಲಿ ದ್ರವ ಪರೀಕ್ಷೆ ಮಾಡಿಕೊಳ್ಳಬೇಕು ಎಂದರು. ನಗರದ ಡಾ| ರಾಜಕುಮಾರ ರಸ್ತೆ, ಅರ್ಬನ್‌ ಬ್ಯಾಂಕ್‌ ರಸ್ತೆ, ಕಿರಾಣಿ ಬಜಾರ, ಸರಾಫ ಬಜಾರ, ಹನುಮಾನ ಚೌಕ, ಥೇಟರ ರಸ್ತೆ, ಎ.ಜಿ.ದೇಸಾಯಿ ವೃತ್ತ, ಶಿವಾಜಿ ವೃತ್ತ, ಬಸವೇಶ್ವರ ವೃತ್ತ ಮತ್ತು ಡಾ| ಬಿ.ಆರ್‌. ಅಂಬೇಡ್ಕರ ವೃತ್ತ ಸೇರಿದಂತೆ ಪ್ರಮುಖ ಜನಸಂದಣಿ ರಸ್ತೆಗಳಲ್ಲಿ ವಾಹನ ಮತ್ತು ಸಾರ್ವಜನಿಕರ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುವ ವಾತಾವರಣ ನಿರ್ಮಾಣಗೊಂಡಿತ್ತು. ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ಕಡಿಮೆಯಾಗಿತ್ತು.

ತಾಲೂಕಿನ ಮೈಗೂರ ಗ್ರಾಮದ ಸರಕಾರಿ ಪ್ರೌಢಶಾಲೆಯ ಮೂರು ಮಕ್ಕಳು ಸಹಿತ ತಾಲೂಕಿನಲ್ಲಿ ಒಟ್ಟು 6 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಂದಿನವರೆಗೆ ಒಟ್ಟು 31 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಜಿ.ಎಸ್‌.ಗಲಗಲಿ ಹೇಳಿದರು. ಕಳೆದ 14 ದಿನಗಳಿಂದ ತಾಲೂಕಿನಲ್ಲಿ ಪ್ರತಿನಿತ್ಯ 400-500ಕ್ಕೂ ಹೆಚ್ಚು ಜನರ ದ್ರವಪರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಕಳುಹಿಸಿಕೊಟ್ಟಿರುವ ದ್ರವ ಪರೀಕ್ಷೆ ಯಲ್ಲಿ 25 ಕೊರೊನಾ ಸೋಂಕತರು ಪತ್ತೆಯಾಗಿದ್ದು, ಶನಿವಾರ ಕಳುಹಿಸಿಕೊಟ್ಟ ದ್ರವ ಪರೀಕ್ಷೆಯಲ್ಲಿ ಮೈಗೂರ ಗ್ರಾಮದ ಮೂರು ಶಾಲಾಮಕ್ಕಳು ಸಹಿತ ಇತರೇ ಮೂವರಿಗೆ ಸೋಂಕು ದೃಢಪಟ್ಟಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next