Advertisement

ಕುಣಿಗಲ್‌: ಪೊಲೀಸರಿಂದ ಬೈಕ್ ರ‍್ಯಾಲಿ; ವೀಕೆಂಡ್ ಕರ್ಫ್ಯೂ ಯಶಸ್ವಿ

06:49 PM Jan 08, 2022 | Team Udayavani |

ಕುಣಿಗಲ್: ಕೋವಿಡ್, ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಘೋಷಿಸಿದ್ದ ಹಿನ್ನಲೆಯಲ್ಲಿ, ಪಟ್ಟಣದಲ್ಲಿ ದಿನ ಬಳಕೆ ವಸ್ತುಗಳ ಅಂಗಡಿಗಳು ತೆರೆದಿದ್ದವು, ಆಟೋ, ಟ್ಯಾಕ್ಸಿ, ಸಾರಿಗೆ ಸಂಸ್ಥೆ ಬಸ್, ಸರಕು ಸಾಗಾಣಿಕೆ ವಾಹನಗಳು ರಸ್ತೆಗಿಳಿದಿದ್ದವು, ಕೆಲ ಅಂಗಡಿಗಳು ಸ್ವಯಂ ಪ್ರೇರಿತರಾಗಿ ಬಾಗಿಲು ಮುಚ್ಚಿದವು, ಜನರ ಹೋರಾಟ ವಿರಳವಾಗಿತ್ತು,

Advertisement

ವಾರಂತ್ಯದ ಕರ್ಫ್ಯೂವನ್ನು ರಾಜ್ಯ ಸರ್ಕಾರ ಜಾರಿ ಮಾಡಿದ್ದು ತಾಲೂಕಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ, ಬೆಳಗ್ಗೆ ದಿನ ಬಳಕೆ ವಸ್ತುಗಳಾದ ದಿನಸಿ, ತರಕಾರಿ, ಮಾಂಸದ ಅಂಗಡಿಗಳು ತರೆದಿದ್ದವು, ಹೋಟೆಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆ ಕಲ್ಪಿಸಲಾಗಿತ್ತು, ಆದರೆ ಬೀದಿ ಬದಿಯ ಟೀ ಅಂಗಡಿ, ತಿಂಡಿ ಅಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್, ಬೇಕರಿ, ಚಿತ್ರಮಂದಿರ, ಗ್ಯಾರೇಜ್, ಶೋ ರೂಂಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆದಿರಲಿಲ್ಲ, ಇದರಿಂದ ನಾಗರೀಕರ ಕೆಲಸ ಕಾರ್ಯಗಳಿಗೆ, ಮನೋರಂಜನೆಗೆ ತೊಂದರೆ ಉಂಟಾಗಿತ್ತು, ನಾಗರೀಕರು ಪರದಾಡುವಂತ ಪರಿಸ್ಥತಿ ನಿರ್ಮಾಣವಾಯಿತು. ಎಂದಿನಂತೆ ಆಟೋಗಳು ರಸ್ತೆಗಿಳಿದ್ದವು ಆದರೆ ಪ್ರಯಾಣಿಕರಿಲ್ಲದೇ ಆಟೋ ಚಾಲಕರು, ಆಟೋಗಳನ್ನು ನಿಲ್ಲಿಸಿಕೊಂಡು ಬಸ್ ನಿಲ್ದಾಣದಲ್ಲಿ ಗಂಟೆ ಗಂಟೆಗಳ ಕಾಲ ಕಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು, ಬೆಳಗ್ಗೆ ಖಾಸಗಿ ಬಸ್‌ಗಳು ಸಂಚರಿಸಿದವು ಮದ್ಯಾಹ್ನನದ ಬಳಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು, ಸಾರಿಗೆ ಸಂಸ್ಥೆ ಬಸ್ ಬಸ್‌ಗಳು ಗ್ರಾಮೀಣ ಪ್ರದೇಶದ ಕಡೆ ಸಂಚಾರ ರದ್ದುಗೊಳಿಸಲಾಗಿತ್ತು ಆದರೆ ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ತುಮಕೂರು ಮತ್ತಿತರರ ಕಡೆ ಕೆಎಸ್ ಆರ್‌ಟಿಸಿ ಬಸ್ ಸಂಚರಿಸಿದರು ಪ್ರಯಾಣಿಕರು ಪ್ರಯಾಣಿಕರಿಲ್ಲದೇ ಖಾಲಿ ಬಸ್‌ಗಳು ಸಂಚರಿಸಿದವು,

ಪೊಲೀಸರಿಂದ ಬೈಕ್ ರ‍್ಯಾಲಿ : ಕುಣಿಗಲ್ ವೃತ್ತ ನಿರೀಕ್ಷಕ ಡಿ.ಎಲ್.ರಾಜು ಅವರ ನೇತೃತ್ವದಲ್ಲಿ ಪೊಲೀಸರು ಪಟ್ಟಣದಾಧ್ಯಂತ ಬೈಕ್ ರ‍್ಯಾಲಿ ನಡೆಸಿ ವಾರಂತ್ಯದ ಕರ್ಪ್ಯೂ ಯಶಸ್ವಿಗೆ ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿದರು, ಮಾಸ್ಕ್ ದರಿಸದ ಗ್ರಾಹಕರಿಗೆ ದಿನಸಿ, ತರಕಾರಿ, ಮಾಂಸ, ಹೋಟೆಲ್‌ಗಳಲ್ಲಿ ತಿಂಡಿ ಹಾಗೂ  ಊಟದ ಪಾರ್ಸಲ್ ಕೊಡಬೇಡಿ ಎಂದು ಮಾಲೀಕರಿಗೆ ದ್ವನಿವರ್ಧಕ ಮೂಲಕ ಸೂಚಿಸಿದರು, ಹಾಗೂ ಅಂಗಡಿ ಮುಂಭಾಗದಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ  ಹೇಳಿದರು. ವಾರಂತ್ಯದ ಕರ್ಪ್ಯೂ ಸಂಬಂಧ ತಾಲೂಕು ದಂಡಾಧಿಕಾರಿ ಮಹಬಲೇಶ್ವರ ತಾಲೂಕಿನಾಧ್ಯಂತ ಸಂಚರಿಸಿ ಇದರ ಉಸ್ತುವಾರಿಯನ್ನು ನೋಡಿಕೊಂಡರು,

Advertisement

Udayavani is now on Telegram. Click here to join our channel and stay updated with the latest news.

Next