Advertisement

ಬುಧವಾರದ ರಾಶಿಫಲದಲ್ಲಿ ನಿಮ್ಮ ಗ್ರಹಬಲ ಹೇಗಿದೆ : ಇಲ್ಲಿದೆ ನೋಡಿ

07:24 AM May 05, 2021 | Team Udayavani |

ಮೇಷ : ವಿದ್ಯಾರ್ಥಿಗಳು ಮಿತ್ರವರ್ಗಗಳ ಸಹವಾಸ ದಿಂದ ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆಯು ಕಂಡುಬರುವುದು. ಸಾಂಸಾರಿಕವಾಗಿ ಬಂಧುಮಿತ್ರ ಬಳಗದವರ ಸಮಾಗಮದಿಂದ ಮನೆಯಲ್ಲಿ ಕಲರವ ಮೂಡೀತು.

Advertisement

ವೃಷಭ: ಪ್ರಯತ್ನಬಲ, ಆತ್ಮವಿಶ್ವಾಸ, ಪ್ರಾಮಾಣಿಕ ಯತ್ನಕ್ಕೆ ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಹಿರಿಯರ ಆರೈಕೆ, ಸೂಕ್ತ ಸಲಹೆ ಮಾರ್ಗದರ್ಶನದಿಂದ ಮುನ್ನಡೆಗೆ ಸಾಧಕವಾಗಲಿದೆ. ಕೀರ್ತಿಯು ಹಿಂಬಾಲಿಸಲಿದೆ.

ಮಿಥುನ: ಹಲವು ಮಾರ್ಗಗಳಿಂದ ಧನಾಗಮನವಿದ್ದರೂ ಖರ್ಚುವೆಚ್ಚಗಳನ್ನು ಚಿಂತಿಸಿ, ಯೋಚಿಸಿ ಮಾಡುವುದು ಒಳಿತು. ವೃತ್ತಿರಂಗದ ಜವಾಬ್ದಾರಿ ವ್ಯಕ್ತಿಗಳಿಗೆ ಸದ್ಯದಲ್ಲೇ ಮುಂಭಡ್ತಿ ತಂದುಕೊಡಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು.

 ಕರ್ಕ: ನೂತನ ವಾಹನ ಖರೀದಿ, ಶೇರು, ಲಾಟರಿ ಇತ್ಯಾದಿಗಳ ವಿನಿಯೋಗಕ್ಕೆ ಸಕಾಲವಾಗಿದೆ. ಮನೆಯ ಸ್ಥಿತಿಗತಿಗಳು ಸುಧಾರಿಸಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಸಾಂಸಾರಿಕವಾಗಿ ಸಾಮರಸ್ಯವು ಕಂಡುಬರುವುದು.

ಸಿಂಹ: ನೀವು ಇಚ್ಛಿಸಿದ ಕೆಲಸಕಾರ್ಯಗಳು ಸುಸೂತ್ರ ವಾಗಿ ನೆರವೇರಲಿದೆ. ವೃತ್ತಿರಂಗದಲ್ಲಿ ಪ್ರಮುಖರ ಭೇಟಿಯಿಂದ ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ಎಲ್ಲಾ ಕಡೆಗಳಿಂದ ಕಿರಿಕಿರಿ ಕಂಡುಬಂದು ಮನಸ್ಸು ಹಾಳು ಮಾಡಬಹುದು. ಕನ್ಯಾ: ದೈಹಿಕವಾಗಿ ಅಪಘಾತ, ಅವಘಡಗಳ ಸಂಭವವಿದೆ. ಒಮ್ಮೊಮ್ಮೆ ಕೋಪ, ಹಠ ಸಾಧನೆ, ಉದ್ವೇಗ ಹೆಚ್ಚಲಿದೆ. ಆರ್ಥಿಕವಾಗಿ ಹೆಚ್ಚಿನ ಏರಿಳಿತವಿಲ್ಲದೆ ವಿವಿಧ ಮೂಲಗಳಿಂದ ಧನಪ್ರಾಪ್ತಿಯ ಅನುಕೂಲವು ಕಂಡುಬರುವುದು.

Advertisement

 ತುಲಾ: ರಾಜಕೀಯದಲ್ಲಿ ಶತ್ರುಪೀಡೆ, ಕಾರ್ಯರಂಗದಲ್ಲಿ ದುಡುಕು ನಿರ್ಧಾರಗಳಿಂದ ಕಾರ್ಯಹಾನಿಯಾದೀತು ಪದಚ್ಯುತಿಗೆ ಶತ್ರುಗಳ ಸಹಕಾರ, ಹಣದ ದಾಹ, ಬೇಡಿಕೆಗಳ ಹೆಚ್ಚಳ ಕೆಲವು ಸಮಯದವರೆಗೆ ಮುಂದುವರಿಯಲಿದೆ.

ವೃಶ್ಚಿಕ: ದುಶ್ಚಟಗಳಿಗೆ ದಾಸರಾದ ಮಿತ್ರರ ಸಹಯೋಗ ಅಪವಾದವನ್ನು ತಂದೀತು. ಅವಿವಾಹಿತರಿಗೆ, ನಿರುದ್ಯೋಗಿಗಳಿಗೆ ಅಚ್ಚರಿಯ ವಾರ್ತೆ ತಂದೀತು. ಸುಖ ಹಾಗೂ ಸಂಪತ್ತಿನ ಸ್ಥಿರತೆ ತೋರಿಬಂದರೂ ಆರೋಗ್ಯಹಾನಿಯಾದೀತು.

ಧನು: ಕೌಟುಂಬಿಕವಾಗಿ ಆಸ್ತಿಪಾಸ್ತಿಗಳಿಗಾಗಿ ಭಿನ್ನಾಭಿಪ್ರಾಯದಿಂದ ನ್ಯಾಯಾಂಗದ ದರ್ಶನ ವಾದೀತು. ನಿರುದ್ಯೋಗಿಗಳು ಕಾರ್ಯವಾಸಿ ಕತ್ತೆ ಕಾಲು ಹಿಡಿ ಎಂಬಂತೆ ಸ್ವಾಭಿಮಾನ ಬದಿಗೊತ್ತಿ ಅವಕಾಶವನ್ನು ಪಡೆವ ಸ್ಥಿತಿ.

ಮಕರ: ವ್ಯಾಪಾರ, ವಹಿವಾಟಿನಲ್ಲಿ ಒಳ್ಳೆಯ ಆದಾಯ ನಿಮ್ಮದಾಗಲಿದೆ. ಕೆಲವೊಮ್ಮೆ ನಿಮ್ಮತನವನ್ನು ಮರೆಯಲೆಂದು ಹಲವು ಖರ್ಚು-ವೆಚ್ಚಗಳನ್ನು ಭರಿಸು ವಂತಾದೀತು. ಆದಾಯವೃದ್ಧಿಯಿಂದ ಹರುಷದ ಹೊನಲು ಹರಿದೀತು.

ಕುಂಭ: ಯಥೇಷ್ಟ ಆದಾಯದ ಆಗಮನದಿಂದ ಕೆಲಸಕಾರ್ಯಗಳಲ್ಲಿ ಮುನ್ನಡೆಗೆ ಪೂರಕವಾಗುತ್ತದೆ. ಹೊಸ ಉದ್ಯೋಗದಿಂದ ಧನಲಾಭ ಇಮ್ಮಡಿಯಾದೀತು. ಸಾಂಸಾರಿಕವಾಗಿ ನೆಮ್ಮದಿ ಇರುತ್ತದೆ. ಆಭರಣ ಖರೀದಿ ಇದ್ದೀತು.

ಮೀನ: ಗೃಹಬಳಕೆಯ ಹಾಗೂ ಅಲಂಕರಣ ಸಾಮಾಗ್ರಿ ಗಳ ಖರೀದಿಯಿಂದ ಖರ್ಚು ತೋರಿಬರುವುದು. ಹೊಸ ಯೋಜನೆಗಳ ಸಾಫ‌ಲ್ಯವಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಪ್ರಗತಿ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next