Advertisement

ಸರ್ವೀಸ್ ಬಸ್ ನಲ್ಲಿ ಮದುವೆ ಟ್ರಿಪ್! ಟೂರಿಸ್ಟ್ ವಾಹನ ಚಾಲಕರಿಂದ ಬಸ್ಸಿಗೆ ತಡೆ

12:12 PM Dec 07, 2020 | keerthan |

ಉಳ್ಳಾಲ: ಮಂಗಳೂರಿನ ಸ್ಟೇಟ್ ಬ್ಯಾಂಕ್ – ಚೇಳ್ಯಾರ್ ಪದವು ನಡುವೆ ಪ್ರಯಾಣಿಕರನ್ನು ಸಾಗಿಸಬೇಕಾಗಿದ್ದ ಸರ್ವೀಸ್ ಬಸ್ ನಲ್ಲಿ ಕಾನೂನಿಗೆ ವಿರುದ್ದವಾಗಿ ಮದುವೆ ಟ್ರಿಪ್ ನಡೆಸುತ್ತಿದ್ದಾರೆ ಎಂದು ಅರೋಪಿಸಿ ದ.ಕ.ಜಿಲ್ಲಾ ಟ್ಯಾಕ್ಸಿಮೆನ್ಸ್  ಮತ್ತು ಮ್ಯಾಕ್ಸಿ ಬಸ್ ಅಸೋಸಿಯೇಷನ್ ನ ಚಾಲಕರು ಮತ್ತು ಮಾಲಕರು ತಡೆ ಒಡ್ಡಿದ್ದು ಬಸ್ ನ ವಿರುದ್ದ ಕೋರ್ಟ್ ಕೇಸು ದಾಖಲಿಸಲಾಗಿದೆ.

Advertisement

ಉಳ್ಳಾಲ ವ್ಯಾಪ್ತಿಯಿಂದ ಮಂಗಳೂರು ಕಡೆ ರೂಟ್ ಟ್ರಿಪ್ ಬದಲಿಸಿ ಮದುವೆಗೆ ಜನರನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಅರೋಪಿಸಿ, ತೊಕ್ಕೊಟು ಜಂಕ್ಷನ್ ನಲ್ಲಿ‌ ಟೂರಿಸ್ಟ್ ವಾಹನ ಚಾಲಕ ಮಾಲೀಕರಿಂದ ಬಸ್ ಗೆ ತಡೆ ಒಡ್ಡಲಾಯಿತು.

ಸ್ಧಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಪೊಲೀಸ್ ಆಗಮಿಸಿದ್ದು, ಬಸ್ಸಿನ ವಿರುದ್ದ ಪರ್ಮೀಟ್ ದುರ್ಬಳಕೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳೇ ಗಮನಿಸಿ: ನಾಳೆ ಭಾರತ್ ಬಂದ್, ಆನ್ ಲೈನ್ ತರಗತಿಯೂ ಬಂದ್!

Advertisement

Advertisement

Udayavani is now on Telegram. Click here to join our channel and stay updated with the latest news.

Next