Advertisement
ತಮ್ಮ ಸಿನಿಮಾದ ಬಗ್ಗೆ ಮಾತನಾಡುವ ವಿಕ್ರಂ, “ನಾನು ಮೂಲತಃ ಮಂಗಳೂರಿನವನು. ಈಗ ಪುಣೆ ವಾಸಿ. ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್’ ಚಿತ್ರಕ್ಕೆ ಕೆಲಸ ಮಾಡಿದ್ದೆ. ಆನಂತರ ಚಿತ್ರರಂಗದಿಂದ ದೂರವಾಗಿದೆ. ಈಗ ಮತ್ತೆ ಬಂದಿದ್ದೀನಿ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ನಮ್ಮ ಪ್ರಕಾರ ಡಿಸೆಂಬರ್ 31ರಂದು ಚಿತ್ರೀಕರಣ ಪೂರ್ಣವಾಗಬೇಕಿತ್ತು. ಒಂದು ದಿನ ಮೊದಲೇ 30 ರಂದೇ ಚಿತ್ರೀಕರಣ ಮುಗಿದಿದೆ.
Related Articles
Advertisement
ನಾಯಕಿ ಸೋನು ಗೌಡ ಕೂಡಾ “ವೆಡ್ಡಿಂಗ್ ಗಿಫ್ಟ್’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ಚಿತ್ರೀಕರಣ ಮುಗಿಸಿ ಬಂದ ಮೇಲೆ ರಾತ್ರಿ ಕೊರಗುತ್ತಿದ್ದೆ. ನಾನು ಮಾಡಿದ್ದು, ಸರಿನಾ? ತಪ್ಪಾ? ಅಂತ ಯೋಚಿಸುತ್ತಿದ್ದೆ. ನನ್ನ ತಂಗಿ ಇದ್ದನ್ನು ಸರಿ ಮಾಡಿದ್ದಳು. ನೀನು ಚಿತ್ರದ ಪಾತ್ರಗಳನ್ನು ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಅಲ್ಲೇ ಬಿಟ್ಟುಬಿಡಬೇಕು. ಮನೆಗೆ ಬಂದ ಮೇಲೆ ನೀನು ಸೋನು ಗೌಡ ಆಗಿಯೇ ಇರಬೇಕು ಎಂದಳು.
ಈಗ ಹಾಗೆ ಮಾಡುತ್ತಿದ್ದೇನೆ. ನಾನು ಈವರೆಗೂ ಇಂತಹ ಪಾತ್ರ ಮಾಡಿಲ್ಲ. ಆಕಾಂಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರ ನನ್ನದು’ ಎನ್ನುವುದು ಸೋನು ಗೌಡ ಮಾತು
ನಾಯಕ ನಿಶಾನ್ ನಾಣಯ್ಯ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಕೂಡಾ ಸಿನಿಮಾ ಬಗೆಗಿನ ಅನುಭವ ಹಂಚಿಕೊಂಡರು