ಹೊಸದಿಲ್ಲಿ : ವೆಬ್ ಚೆಕ್ – ಇನ್ ಸಂದರ್ಭದಲ್ಲಿ ಪ್ರಯಾಣಿಕರು ಆಯ್ಕೆ ಮಾಡುವ ಸೀಟುಗಳಿಗೆ ಹೆಚ್ಚುವರಿ ಶುಲ್ಕ ಹೇರುವ ಕ್ರಮಕ್ಕೆ ಪ್ರಯಾಣಿಕರಿಂದ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿರುವ ತೀವ್ರ ಆಕೋಶವನ್ನು ಲೆಕ್ಕಿಸಿ ಇಂಡಿಗೋ ಏರ್ ಲೈನ್ಸ್ “ನಾವು ಮುಂಗಡ ಸೀಟು ಆಯ್ಕೆಗೆ ಮಾತ್ರವೇ ಹೆಚ್ಚುವರಿ ಶುಲ್ಕ ವಿಧಿಸುತ್ತೇವೆಯೇ ಹೊರತು ವೆಬ್ ಚೆಕ್-ಇನ್ ವೇಳೆಯ ಸೀಟು ಆಯ್ಕೆಗೆ ಅಲ್ಲ’ ಎಂದು ಸ್ಪಷ್ಟಪಡಿಸಿದೆ.
“ಅಂತೆಯೇ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದಿರುವ ವೆಬ್-ಚೆಕ್-ಇನ್ ಸೀಟು ಆಯ್ಕೆಯ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಇಂಡಿಗೋ ಏರ್ ಲೈನ್ಸ್ ಹೇಳಿದೆ.
ಪ್ರಯಾಣಿಕರು ಆನ್‌ಲೈನ್ ನಲ್ಲಿ ಸೀಟುಗಳ ಆಯ್ಕೆ ಮಾಡುವಾಗ ಕಿಟಕಿ ಬದಿಯ ಸೀಟನ್ನು, ಕಾಲುಚಾಚಲು ಹೆಚ್ಚು ಸ್ಥಳಾವಕಾಶ ಇರುವ ಸೀಟನ್ನು ಮುಂಗಡವಾಗಿ ಆಯ್ಕೆ ಮಾಡುವಾಗ ಇಂಡಿಗೋ ಏರ್ ಲೈನ್ಸ್ ಹೆಚ್ಚುವರಿ ಶುಲ್ಕವನ್ನು ಹೇರುತ್ತದೆ.
ಎರಡು ವರ್ಷ ಪ್ರಾಯ ಮೀರಿದ ಪ್ರಯಾಣಿಕ ಮಗುವಿಗೆ ಸೀಟು ನೀಡುವ ಕ್ರಮವೇ ಇತರ ಪ್ರತಿಯೋರ್ವ ಪ್ರಯಾಣಿಕರಿಗೂ ಅನ್ವಯಿಸುತ್ತದೆ ಎಂದು ಇಂಡಿಗೋ ಹೇಳಿದೆ.
ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ನಿರ್ವಹಣೆ ಸಂದರ್ಭದಲ್ಲಿ ಪ್ರಯಾಣಿಕರಿಗೆ ಕ್ರೆಡಿಟ್/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ಸೌಕರ್ಯ ಶುಲಕ್ಕ ವಸೂಲಿ ಮಾಡಲಾಗುತ್ತದೆ. ಅಂತಿದ್ದರೂ ಪ್ರಯಾಣಿಕರು ತಮ್ಮ ಸಹಾಯಕ್ಕಾಗಿ ಕೌಂಟರ್‌ನಲ್ಲಿ ಉಪಲಬ್ಧವಿರುವ ಸಿಬಂದಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿದೆ.