Advertisement
ಗ್ರಾಮದ ಕೈಮಗ್ಗ ನೇಕಾರ ಉತ್ಪಾದನಾ ಮತ್ತು ಮಾರಾಟ ಸಂಘದ ನೇಕಾರರ ಬದುಕು ಇಂದು ಮೂರಾಬಟ್ಟೆಯಾಗಿದೆ ಕಾರಣ ಸುಮಾರು ಹದಿನೈದು ವರ್ಷಗಳಿಂದ ಕೂಡಿಟ್ಟ ಮಿತವ್ಯಯ ನಿಧಿಯನ್ನು ಸಹ ವಾಪಸ್ಸು ಪಡೆಯಲು ನೇಕಾರಿಗೆ ಆಗುತ್ತಿಲ್ಲ. ಕಾರಣ ಸರ್ಕಾರ ನಾಲ್ಕೈದು ವರ್ಷಗಳ ಹಿಂದೆ ಮಾಡಿದ ಖಜಾನೆ ಇಲಾಖೆಯನ್ನು ಡಿಜಟಿಲಕರಣ ಮಾಡಿದ ನಂತರ ನೇಕಾರರ ಮಿತವ್ಯಯ ನಿಧಿ ಇನ್ನು ನೇಕಾರರಕೈ ಸೇರುತ್ತಿಲ್ಲ. ಮೂರ್ನಾಲ್ಕು ವರ್ಷದಿಂದ ನೇಕಾರರು ಮಿತವ್ಯಯ ನಿಧಿಗಾಗಿ ನೌಕರರು ಹಾಗೂ ಸಂಘದ ಆಡಳಿತ ಮಂಡಳಿಯವರು ಅಲೆದಾಡುವಂತಾಗಿದೆ. ಇದರ ಬಗ್ಗೆ ಸರಕಾರ ನೇಕಾರರ ನೆರವಿಗೆ ಬರಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.
Related Articles
Advertisement
ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ನೇಕಾರಿಕೆ ಮಾಡುವ ಹಲವಾರು ಕುಟುಂಬಗಳಿದ್ದವು. ಹಿಂದೆ ನೇಕಾರರ 11 ಕೈಮಗ್ಗ ನೇಕಾರರ ಸಹಕಾರ ಸಂಘಗಳಿದ್ದವು. ಈಗ ಉಳಿದಿದ್ದು ಕೇವಲ 5. ಅದರಲ್ಲಿ ಈಗ ಚಾಲ್ತಿಯಲ್ಲಿರುವವು ಕೇವಲ 3. ಇನ್ನೂ ನೇಕಾರರು ತಾವು ನೇಯ್ದ ಸೀರೆಯನ್ನು ಬೇರೆ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಾರೆ. ಅಲ್ಲಿಯೂ ಸರಿಯಾದ ದರ ಸಿಗುತ್ತಿಲ್ಲ. ಸಹಕಾರ ಸಂಘಗಳಲ್ಲಿ ಮಾರಾಟ ಮಾಡಿದರೆ ಸರಕಾರದಿಂದ ಶೇ 20 ರಿಯಾಯಿತಿ ಹಣವು ನೇಕಾರನಿಗೆ ಸಿಗುತ್ತದೆ. ರಿಯಾಯಿತಿಯನ್ನು ಹೆಚ್ಚಿಸಬೇಕು. ಕಚ್ಚಾ ಸಾಮಗ್ರಿ ಖರೀದಿಸಲು ಸರಕಾರ ಸಹಾಯ ಮಾಡಬೇಕು. ಇಲ್ಲವೇ ಇನ್ನಷ್ಟು ಉತ್ತೇಜನ ನೀಡಿದರೆ ಮಾತ್ರ ನೇಕಾರ ಉಳಿಯಲು ಸಾಧ್ಯವೆಂದು ನೇಕಾರರು ಹೇಳಿದ್ದಾರೆ.
ಈ ಮಧ್ಯೆ ನೇಕಾರರ ಭದ್ರತೆಗಾಗಿ ಮಿತವ್ಯಯ ನಿಧಿಯನ್ನು ಸಹಕಾರ ಸಂಘಗಳು ನೇಕಾರರಿಂದ ಪಡೆದು ಜವಳಿ ಇಲಾಖೆಯ ಖಜಾನೆಗೆ ಜಮಾ ಮಾಡುತ್ತಾರೆ. ಪ್ರತಿ ಸೀರೆಗೆ 28 ರೂಪಾಯಿ. 28 ರೂಪಾಯಿ ಇಲಾಖೆಯಿಂದ ನೇಕಾರರ ಖಾತೆಗೆ ಜಮಾ ಆಗುತ್ತದೆ. ಈ ಹಣವನ್ನು 15 ವರ್ಷಗಳ ನಂತರ ನೇಕಾರ ತನಗೆ ಅವಶ್ಯವಿರುವಾಗ ಮರಳಿ ಪಡೆಯಬಹುದು. ಆದರೆ ಕಳೆದ ಮೂರು ವರ್ಷಗಳಿಂದ ಮಿತವ್ಯಯ ನಿಧಿಯನ್ನು ನೇಕಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಕಾರಣ ಇಲಾಖೆಯಿಂದ ಖಜಾನೆ 1 ರಲ್ಲಿದ್ದ ಹಣವನ್ನು ಖಜಾನೆ 2 ಗೆ ವರ್ಗಾಯಿಸಬೇಕು. ಆದರೆ ಇದು ವಿಳಂಭವಾಗಿರುವುದರಿಂದ ಇಡೀ ರಾಜ್ಯದಲ್ಲಿಯೇ ನೇಕಾರರ ಪಾವತಿಸಿದ ಮಿತವ್ಯಯ ಹಣವನ್ನು ವಾಪಸ್ಸು ಪಡೆಯಲು ಆಗುವುದಿಲ್ಲ. ಕಷ್ಟ ಕಾಲದಲ್ಲಿ ಸಹಾಯವಾಗುವ ಮಿತವ್ಯಯ ಹಣ ಪಡೆಯಲು ನೇಕಾರರು ಪರದಾಡಬೇಕಾಗಿದೆ. ಕೆ1 ನಿಂದ ಕೆ2 ಗೆ ನೇಕಾರರ ಮಿತವ್ಯಯ ಹಣ ವರ್ಗಾವಣೆಗೆ ಇಲಾಖೆಯು ಇನ್ನೂ ಹಲವಾರು ಫಾರ್ಮೆಟ್ ಗಳನ್ನು ತಯಾರಿಸಿದ್ದರಿಂದ ಈಗ ಹಣ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಂದ ಸುಮಾರು 21 ಲಕ್ಷ ರೂಪಾಯಿಯು ಮಿತವ್ಯಯ ಹಣ ಖಜಾನೆಯಲ್ಲಿದೆ, ಅದು ನೇಕಾರರ ಕೈಗೆ ಸೇರುತ್ತಿಲ್ಲ. ಈ ಕುರಿತ ಸರಕಾರ ಬೇಗನೆ ಕ್ರಮ ಕೈಗೊಳ್ಳಬೇಕು ನೇಕಾರರ ನೆರವಿಗೆ ಸರಕಾರ ಬರಬೇಕೆಂದು ಆಗ್ರಹಿಸಿದ್ದಾರೆ.
– ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ