Advertisement
ಬೆಳೆಗಾರರು ಕೃಷಿ ಪ್ರಾಥಮಿಕ ಸಂಘ, ಬ್ಯಾಂಕ್‌ಗಳಿಗೆ ತೆರಳಿ ವಿಚಾರಿಸುತ್ತಿದ್ದರೂ ಸರಕಾರದ ಹಂತದಿಂದ ಯಾವುದೇ ಸುತ್ತೋಲೆ ಬಾರದ ಕಾರಣ ಕಂತು ತುಂಬಲು ಸಾಧ್ಯವಾಗಿಲ್ಲ.
ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕಂತು ತುಂಬುವ ವಿಧಾನದ ಬಗ್ಗೆ ಆದೇಶ ತೋಟಗಾರಿಕೆ ಇಲಾಖೆಯ ಮೂಲಕ ಸಹಕಾರ ಸಂಘಗಳಿಗೆ ಬರುತ್ತದೆ.ಆದರೆ ಈ ಬಾರಿ ಜೂನ್ ಕೊನೆಯಾಗುತ್ತಾ ಬಂದರೂ ಕಂತು ಪಡೆಯುವ ಬಗ್ಗೆ ಅಧಿಸೂಚನೆ, ಸುತ್ತೋಲೆ ತಲುಪಿಲ್ಲ. ಟೆಂಡರ್ ವಿಳಂಬ
ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ವಿಮಾ ಸಂಸ್ಥೆಗಳಿಗೆ ನೀಡಲಾಗಿದ್ದ ಮೂರು ವರ್ಷಗಳ ಅವಧಿ ಮುಕ್ತಾಯಗೊಂಡಿದೆ. ಹೊಸ ದಾಗಿ ಟೆಂಡರ್ ಆಹ್ವಾನಿಸಲಾಗಿದೆ. ಆ ಪ್ರಕ್ರಿಯೆ ತುಸು ವಿಳಂಬವಾದ ಕಾರಣ ಕಂತು ತುಂಬುವ ಪ್ರಕ್ರಿಯೆ ಆರಂಭಗೊಂಡಿಲ್ಲ ಅನ್ನುವ ಉತ್ತರ ಬರುತ್ತಿದೆ. ಆದರೆ ಮೂಲಗಳ ಪ್ರಕಾರ ಟೆಂಡರ್ ಪಡೆಯಲು ವಿಮಾ ಕಂಪೆನಿಗಳು ಮುಂದೆ ಬಂದಿಲ್ಲ. ಹೀಗಾಗಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ವಿಮಾ ಕಂಪೆನಿಗಳು ಟೆಂಡರ್ ಪಡೆ ಯದಿದ್ದರೆ ಯೋಜನೆ ಅನುಷ್ಠಾನ ಇನ್ನಷ್ಟು ವಿಳಂಬವಾಗಲಿದೆ.
Related Articles
ಈ ಬಾರಿ ಹವಾಮಾನ ವಿಮಾ ಯೋಜನೆಯ ವ್ಯಾಪ್ತಿಯಿಂದ ವಾಣಿಜ್ಯ ಬೆಳೆಯಾಗಿರುವ ಕಾರಣಕ್ಕೆ ಅಡಿಕೆಯನ್ನು ಹೊರಗಿಡಲಾಗಿದೆ ಅನ್ನುವ ಅನುಮಾನ ವ್ಯಾಪಕವಾಗಿ ಹಬ್ಬಿದೆ. ಆದರೆ ಇದನ್ನು ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.
Advertisement
ವಿಳಂಬಕ್ಕೆ ಕಾರಣ?ಅಡಿಕೆ ಮತ್ತು ಕಾಳು ಮೆಣಸಿನ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಮತ್ತು ಭತ್ತದ ಬೆಳೆಗಿರುವ ಫಸಲು ವಿಮಾ ಯೋಜನೆಯು ದಿನನಿತ್ಯದ ಮಳೆ ಮತ್ತು ಉಷ್ಣಾಂಶ ಮಾಹಿತಿ ಮೇಲೆ ತೀರ್ಮಾನವಾಗುತ್ತದೆ. ರೈತರಿಗೆ ವಿಮೆ ಪಡೆಯಲು ಮಳೆ ಮತ್ತು ಹವಾಮಾನ ಆಧಾರಿತ ಅಂಕಿ ಅಂಶದ ಟರ್ಮ್ ಶೀಟ್ ಪ್ರಧಾನ ಪಾತ್ರ ವಹಿಸುತ್ತದೆ. ಈ ಟರ್ಮ್ ಶೀಟ್ ಆಧಾರದಲ್ಲಿ ರಾಜ್ಯ ಸರಕಾರ ವಿಮಾ ಏಜೆನ್ಸಿ ನಿಗದಿಪಡಿಸಲು ಟೆಂಡರ್ ಕರೆಯುತ್ತದೆ. ಟೆಂಡರ್ ಪ್ರಕ್ರಿಯೆ ಮೇ ತಿಂಗಳಲ್ಲಿ ಮುಗಿದು ಜೂ. 30ರ ಒಳಗೆ ರೈತರು ವಿಮಾ ಹಣ ಪಾವತಿಸಬೇಕು. ಈ ಹಿಂದೆ ರಾಜ್ಯ ಸರಕಾರ ನಿಗದಿಪಡಿಸಿರುವ ವಿಮಾ ಶೇರಿನ ಬಗ್ಗೆಯೂ ಕಂಪೆನಿ ಗಳಿಗೆ ಒಪ್ಪಿಗೆ ಇರಲಿಲ್ಲ. ಕಂಪೆನಿ ಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆ ನೆರವಿನಿಂದ ರೈತರಿಂದ ಜೂನ್ ಅಂತ್ಯದಲ್ಲಿ ವಿಮಾ ಕಂತು ಕಟ್ಟಿಸಿ ಕೊಳ್ಳದಿದ್ದರೆ ಯೋಜ ನೆಯ ಉದ್ದೇಶವೇ ವಿಫಲವಾಗುತ್ತದೆ. ರೈತರಿಗೆ ದೊಡ್ಡ ನಷ್ಟ ಲಆಗಲಿದೆ. 36 ಬೆಳೆಗಳಿಗೆ
ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ
ಹವಾಮಾನ ಆಧಾರಿತ
ಬೆಳೆ ವಿಮಾ ಯೋಜನೆಯ ವಿಳಂಬದ ನಡುವೆ 2023-24ನೇ ಸಾಲಿನ ಮುಂಗಾರು ಹಂಗಾಮಿ ನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 36 ಕೃಷಿ ಬೆಳೆಗಳಿಗೆ ಅನ್ವಯ ಆಗುವಂತೆ ಅನುಷ್ಠಾನಗೊಳಿಸಲಾಗಿದೆ. ಮೂರು ವರ್ಷಗಳ ಬದಲು ಒಂದೇ ವರ್ಷಕ್ಕೆ ಸೀಮಿತಗೊಳಿಸಿ ಅನುಮೋದನೆ ನೀಡಿದೆ. ಅವಿ ಭಜಿತ ದ.ಕ. ಜಿಲ್ಲೆಯಲ್ಲಿ ಭತ್ತಕ್ಕೆ ಈ ವಿಮಾ ಯೋಜನೆ ಅನ್ವಯ ಆಗಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ವಿಮಾ ನವೀಕರಣ ಆಗಿಲ್ಲ.ಪ್ರೀಮಿಯಂ ಮೊತ್ತದ ವಿಚಾರದಲ್ಲಿಯೂ ಅಂತಿಮ ತೀರ್ಮಾನ ಬಾಕಿ ಇದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಬೇಕಿದ್ದು, ಅದಾದ ಬಳಿಕ ಅನುಷ್ಠಾನ ಆಗಲಿದೆ. ವಿಮಾ ಯೋಜನೆಯಿಂದ ಅಡಿಕೆ ಕೃಷಿ ಕೈ ಬಿಡುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ.
-ಶಕೀಲ್ ಅಹಮದ್, ಇ ಆಡಳಿತ ಯೋಜನಾ ನಿರ್ವಹಣೆ ಘಟಕ
ತೋಟಗಾರಿಕೆ ಜಂಟಿ ನಿರ್ದೇಶಕ, ಬೆಂಗಳೂರು -ಕಿರಣ್ ಪ್ರಸಾದ್ ಕುಂಡಡ್ಕ