Advertisement
ಈ ವೈಯಕ್ತಿಕ ರಕ್ಷಣಾ ಸಾಧನವು ಫ್ಯಾಶನ್ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ. ಮಾಸ್ಕ್ ಧರಿಸಿ ತಮ್ಮ ಮುಖಾರವಿಂದವನ್ನು ತೋರಿಸುವುದಾದರೂ ಹೇಗಪ್ಪಾ ಎಂದುಕೊಂಡರೆ ಫ್ಯಾಶನ್ ಪ್ರಪಂಚ ಮಾತ್ರ ಭಿನ್ನವಾಗಿ ಯೋಚಿಸುತ್ತದೆ.
Related Articles
ಹೊರಗೆ ಇಣುಕಿ ನೋಡಿದರೆ ತೀರಾ ನೆರೆ ಮನೆಯವರ ಪರಿಚಯವೂ ನಮಗೆ ಸಿಗಲಾರದು. ಯಾಕೆಂದರೆ ಮಾಸ್ಕ್ ನೊಳಗಿನ ವ್ಯಕ್ತಿಯ ಗುರುತಿಸುವುದಾದರೂ ಹೇಗೆ.
Advertisement
ಅದೇ ಮಾಸ್ಕ್ ನಲ್ಲಿ ಚಂದದ ಕಸೂತಿಯ ಮಧ್ಯೆ ಹೂ ಒಂದನ್ನು ರಚಿಸಿ ಅದರ ಮಧ್ಯೆ ತಮ್ಮ ನಿಕ್ ನೇಮ್ ಬರೆದರೆ, ಅದೂ ನಮ್ಮ ಗಮನ ಸೆಳೆಯಬಹುದು ಮತ್ತೆ ಮತ್ತೆ ನೋಡಬೇಕೆಂಬ ಕುತೂಹಲ ಮೂಡಿಸಬಹುದು.
ಸುಮ್ಮನೆ ಗಮನಿಸಿ, ಹೊರಗಡೆ ಹೊಗುವವರೆಲ್ಲ ಒಂದೇ ಬಣ್ಣದ ಮಾಸ್ಕ್ ಗಳನ್ನು ಧರಿಸಿದ್ದಾರೆಯೇ, ಅವರ ಬಟ್ಟೆಗೆ ಆ ಮಾಸ್ಕ್ ಗಳು ಎಷ್ಟು ಮ್ಯಾಚಿಂಗ್ ಇವೆ ಇದನ್ನೂ ಗಮನಿಸಿ, ಅಲ್ಲಿಗೆ ನಿಮ್ಮ ಸೌಂದರ್ಯ ಪ್ರಜ್ಞೆಯೂ ಜಾಗೃತವಾಗುತ್ತದೆ.
ಮುಖ ಮರೆ ಮಾಚೋದರಲ್ಲೂ ಇದೆ ಸೌಂದರ್ಯ
ಹೊಸ ವಿನ್ಯಾಸದ ಮಾಸ್ಕ್ ಗಳನ್ನು ಧರಿಸಿದ ಪ್ರತಿಭಟನಕಾರರರು ಫ್ರಾನ್ಸ್ ಬೀದಿಗಳಲ್ಲಿ ಈ ಹಿಂದೆ ಕಾಣ ಸಿಗುತ್ತಿದ್ದರು. ಆದರೆ ಈ ಪರಿಯಾಗಿ ಮಾಸ್ಕ್ ಧರಿಸುವ ಸಾಧ್ಯತೆಯನ್ನು ತೆರೆದಿಟ್ಟದ್ದು ಕೋವಿಡ್ ಪ್ರಭಾವ ಮಾತ್ರ. ಇವು ವೈರಸ್ ರಕ್ಷಣೆಗಾಗಿ ಧರಿಸಲ್ಪಟ್ಟರೂ ಅದರಲ್ಲೇ ಮ್ಯಾಚಿಂಗ್ ಆರಿಸುವ ಮಹಿಳಾ ಮಣಿಗಳಿಗೇನೂ ನಮ್ಮಲ್ಲಿ ಕಮ್ಮಿ ಇಲ್ಲ. ಮಾಸ್ಕ್ ಹಾಕಿದ್ದರೂ ಜನರ ಕಣ್ಮಣ ಸೆಳೆಯುವಂತಿರಬೇಕು ಎಂಬುದು ಈಗಿನ ಟ್ರೆಂಡ್ ಆಗಿದೆ. ಬ್ರಾಂಡೆಡ್ ಮಾಸ್ಕ್ ಗಳಿಗೆ ಡಿಮ್ಯಾಂಡ್
ಯಾವುದೇ ವಸ್ತುಗಳ ಬೆಲೆಯೂ ಅದರ ಬ್ರಾಂಡ್ ಮೇಲೆ ನಿರ್ಧರಿತವಾಗಿರುತ್ತದೆ. ಇದೀಗ ಮಾಸ್ಕ್ ಗಳ ಖರೀದಿಗೂ ಹೆಚ್ಚು ಜನರು ಆಸಕ್ತಿ ವಹಿಸಿದ್ದರಿಂದ ಅವುಗಳ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಮಾಸ್ಕ್ ನಲ್ಲೇ ವ್ಯಕ್ತಿತ್ವ
ಮನೆಯಲ್ಲೇ ಸೃಜನಾತ್ಮಕವಾಗಿ ಮಾಸ್ಕ್ ಗಳನ್ನು ತಯಾರಿಸಿ ಧರಿಸುವ ಅಪಾರ ಮಂದಿ ನಮಗೆ ಕಾಣಸಿಗುತ್ತಾರೆ. ಅವರಿಗಿಷ್ಟದ ವಿನ್ಯಾಸ ನೀವು ಧರಿಸೋ ಮಾಸ್ಕ್ ಗಳು ನಿಮ್ಮ ವ್ಯಕ್ತಿತ್ವ ತಿಳಿಸುತ್ತವೆ ಎಂದರೆ ಅದನ್ನೂ ನೀವು ನಂಬಲೇಬೇಕಾಗುತ್ತದೆ. ಸರಕಾರವೂ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಿರುವುದರಿಂದ ಧರಿಸುವ ಮಾಸ್ಕ್ ನಲ್ಲೇ ಫ್ಯಾಶನ್ ಮಾಡುವ ಮನಸ್ಥಿತಿ ಯುವ ಜನರದ್ದು.
ಮಾಸ್ಕ್ ನಲ್ಲೂ ಎರಡು ವಿಧ
1. ಮಾಲಿನ್ಯ ನಿಯಂತ್ರಕ
ಹೆಚ್ಚಿನ ಎಲ್ಲ ಮಾಸ್ಕ್ ಗಳು ಮಾಲಿನ್ಯ ನಿಯಂತ್ರಣದಲ್ಲಿ ಸಹಕಾರಿಯಾಗುತ್ತವೆ. ಸಾಮಾನ್ಯ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳು ಕೇವಲ ಹೊಗೆಯಿಂದ, ಧೂಳಿನಿಂದ ರಕ್ಷಣೆ ನೀಡಲಷ್ಟೇ ಶಕ್ತವಾಗಿರುತ್ತದೆ. ಇದನ್ನು ಕೋವಿಡ್ ರಕ್ಷಣೆಗಾಗಿ ಧರಿಸಿದರೆ ಯಾವ ಪ್ರಯೋಜನವೂ ಇಲ್ಲ. 2. ವೈರಸ್ ನಿಯಂತ್ರಕ
ಎನ್19ನಂತಹ ಮಾಸ್ಕ್ ಗಳು ಮಾತ್ರವೇ ಶೇ. 95 ವೈರಸ್‌ಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದೀಗ ಇಂತಹ ಮಾಸ್ಕ್ ಗಳಿಗೆ ವಿಪರೀತ ಬೇಡಿಕೆ ಇದ್ದರೂ ಅದರ ಪೂರೈಕೆಯಲ್ಲಿ ಕೊರತೆ ಅಪಾರವಿದೆ. ‘2020ರಲ್ಲಿ ಮಾಸ್ಕ್ ಕೇವಲ ರಕ್ಷಣೆಗಾಗಿ ಮಾತ್ರ ಅಲ್ಲ. ಅದನ್ನು ಧರಿಸುವುದೂ ಒಂದು ಫ್ಯಾಶನ್. ಇದು ನಾನು ಪ್ರತಿದಿನ ಧರಿಸಬೇಕಾದ ವಿಷಯವಾಗಿದೆಯೆಂದು ನಾನು ಭಾವಿಸುತ್ತೇನೆ’ ಎಂದು ಖ್ಯಾತ ರೂಪದರ್ಶಿಯಾಗಿರುವ ಕೋಲ್ಬಿ ಅಭಿಪ್ರಾಯ ಪಡುತ್ತಾರೆ.