Advertisement

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

09:10 PM Apr 23, 2024 | Team Udayavani |

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ಖಾನ್‌ ಅವರ ನಿವಾಸದ ಮೇಲೆ ದಾಳಿಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಬಂಧಿತ ಆರೋಪಿಗಳಾದ ವಿಕ್ಕಿ ಗುಪ್ತಾ ಹಾಗೂ ಸಾಗರ್‌ ಪಾಲ್‌ ದಾಳಿ ನಂತರ ರಸ್ತೆ ಮಾರ್ಗದಲ್ಲಿ ಮುಂಬೈನಿಂದ ಸೂರತ್‌ಗೆ ತೆರಳಿದ್ದು, ಬಳಿಕ ರೈಲಿನಲ್ಲಿ ಭುಜ್‌ಗೆ ತೆರಳುವ ವೇಳೆ ಸೇತುವೆ ಮೇಲಿಂದ ಗುಜರಾತ್‌ನ ತಾಪಿ ನದಿಗೆ ಶಸ್ತ್ರಾಸ್ತ್ರಗಳನ್ನು ಎಸೆದಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು.

ಈ ಸುಳಿವು ಆಧಾರದಲ್ಲಿ ಪೊಲೀಸರು ಪತ್ತೆ ಕಾರ್ಯಾಚರಣೆ ಕೈಗೊಂಡು 2 ಪಿಸ್ತೂಲ್‌, 3 ಮ್ಯಾಗಜಿನ್ಸ್‌ ಹಾಗೂ 13 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next