Advertisement

ಹೆಣ್ಣುಮಕ್ಕಳ ಲಿವ್-ಇನ್ ಸಂಬಂಧವನ್ನು ಕುಟುಂಬ ಒಪ್ಪಿಕೊಳ್ಳಬೇಕು: ಮಹಿಳಾ ಆಯೋಗ

06:59 PM Feb 16, 2023 | Team Udayavani |

ನವದೆಹಲಿ : ಹೆಣ್ಣುಮಕ್ಕಳ ಲಿವ್-ಇನ್ ಸಂಬಂಧವನ್ನು ಕುಟುಂಬ ಒಪ್ಪಿಕೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement

ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ದಾ ವಾಕರ್ ರೀತಿಯಲ್ಲಿ ನಡೆದ ನಿಕ್ಕಿ ಯಾದವ್ ಪ್ರಕರಣದ ಕುರಿತು ಮಾತನಾಡಿದ ರೇಖಾ ಶರ್ಮ, ರಾಷ್ಟ್ರೀಯ ಮಹಿಳಾ ಆಯೋಗ ಪೊಲೀಸರ ವರದಿ ಕೇಳಿದೆ. ಲಿವ್-ಇನ್ ಸಂಬಂಧಗಳಲ್ಲಿ ಹುಡುಗಿಯರು ಸುರಕ್ಷಿತವಾಗಿಲ್ಲ ಎಂದು ನಾವು ಭಾವಿಸುತ್ತೇವೆ. ಇಂತಹ ಘಟನೆಗಳಿಗೆ ಹೆಣ್ಣುಮಕ್ಕಳು ಮಾತ್ರವಲ್ಲ ಕುಟುಂಬಗಳೂ ಕಾರಣ. ಹುಡುಗಿಯರಿಗೆ ತಮ್ಮ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿದರೆ, ಈ ರೀತಿಯ ಘಟನೆಗಳು ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.

ಇಂತಹ ಘಟನೆಗಳ ಬಗ್ಗೆ ಪೊಲೀಸರು ಮತ್ತು ಕುಟುಂಬದವರು ಕಾಳಜಿ ವಹಿಸಬೇಕು. ಕುಟುಂಬವು ಲಿವ್-ಇನ್ ಸಂಬಂಧವನ್ನು ಒಪ್ಪಿಕೊಳ್ಳಬೇಕು. ಪ್ರಕರಣದಲ್ಲಿ ನಾವು ಎಲ್ಲಾ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರೇಖಾ ಶರ್ಮ ಹೇಳಿದ್ದಾರೆ.

ದಿಲ್ಲಿಯಲ್ಲಿ ನಡೆದಿರುವ ನಿಕ್ಕಿ ಫ್ರಿಡ್ಜ್  ಪ್ರಕರಣದ ಮತ್ತಷ್ಟು ಮಾಹಿತಿ ಯನ್ನು ಪೊಲೀಸರು ಬಹಿರಂಗಪಡಿಸಿದ್ದು, ಆರೋಪಿ ಸಾಹಿಲ್‌, ನಿಕ್ಕಿ ಶವದ ಜತೆಗೆ ದಿಲ್ಲಿಯಲ್ಲಿ 40 ಕಿ. ಮೀ. ಪ್ರಯಾಣಿಸಿದ್ದ. ಸಾಹಿಲ್‌ ಜತೆಗೆ ಲಿವ್‌-ಇನ್‌ನಲ್ಲಿದ್ದ ನಿಕ್ಕಿಗೆ,ತನ್ನ ಪ್ರಿಯಕರ ಬೇರೊಂದು ಯುವತಿ ಜತೆಗೆ ಮದುವೆಯಾಗುತ್ತಿದ್ದಾನೆಂಬುದು ತಿಳಿದ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಆಕೆಯನ್ನು ಸಮಾಧಾನ ಪಡಿಸುವ ಸಲುವಾಗಿ ಕಾರಿನಲ್ಲಿ ಸುತ್ತಾಡಲೆಂದು ಕರೆದುಕೊಂಡು ಹೋಗಿ ಮೊಬೈಲ್‌ ಚಾರ್ಜರ್‌ ವೈರ್‌ ಬಳಸಿ ಆಕೆ ಕೊನೆಯುಸಿರೆಳೆದಿದ್ದು ಖಾತ್ರಿಯಾದ ಬಳಿಕ  ಫ್ರಿಡ್ಜ್ನಲ್ಲಿಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next