ಕೊರಟಗೆಗೆರೆ:‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದತ್ತ ಬರುತ್ತಿರುವವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಇದ್ದು ಶೀಘ್ರದಲ್ಲಿ ಕೆಪಿಸಿಸಿ ಕಚೇರಿ ಎದುರು ಹೌಸ್‌ಫುಲ್ ಬೋರ್ಡ್ ಹಾಕುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು’ ನಾನು ಈ ಬಾರಿ ಕೊರಟಗೆರೆಯಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಜನರಿಗೂ ವಿಶ್ವಾಸವಿದೆ.ಈ ಬಾರಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಜನರಿಗೆ ನಾನು ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಆದರೆ ಅಪೇಕ್ಷೆ ಪಟ್ಟ ಮಾತ್ರ ಕ್ಕೆ ಸಿಎಂ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ಸಿಎಲ್‌ಪಿ ಸಭೆಯಲ್ಲಿ ಮುಖ್ಯಮಂತ್ರಿ ಯಾರು ಎಂದು ತೀರ್ಮಾನಿಸುವುದು’ ಎಂದರು.
‘ಕಾಂಗ್ರೆಸ್‌ನತ್ತ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಆಗಮಿಸುತ್ತಿದ್ದಾರೆ. 7 ಮಂದಿ ಜೆಡಿಎಸ್ ಶಾಸಕರು ಸೇರ್ಪಡೆಯಾಗುತ್ತಿದ್ದಾರೆ. ಇನ್ನು ನಮ್ಮಲ್ಲಿ ಜಾಗ ಇಲ್ಲ ಕೆಪಿಸಿಸಿ ಕಚೇರಿ ಎದುರು ಹೌಸ್‌ಫುಲ್ ಬೋರ್ಡ್ ಹಾಕುವುದು ಅನಿವಾರ್ಯ ವಾಗಿದೆ’ ಎಂದರು.