Advertisement

ಇಂಗ್ಲೆಂಡ್ ನಂತೆ ನಾವು ಆಕ್ರಮಣಕಾರಿ ರೀತಿಯಲ್ಲಿ ಟೆಸ್ಟ್ ಆಡುತ್ತೇವೆ: ಕೆಎಲ್ ರಾಹುಲ್

03:30 PM Dec 13, 2022 | Team Udayavani |

ಚತ್ತೋಗ್ರಾಮ್: ಸತತ ಟಿ20, ಏಕದಿನ ಕ್ರಿಕೆಟ್ ನಲ್ಲಿ ಪಾಲ್ಗೊಂಡಿದ್ದ ಟೀಂ ಇಂಡಿಯಾವು ಬುಧವಾರದಿಂದ ಟೆಸ್ಟ್ ಅಭಿಯಾನವನ್ನು ಪುನರಾರಂಭಿಸಿದೆ. ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಆಡಲಿದೆ.

Advertisement

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಲಿದ್ದಾರೆ. ಚತ್ತೋಗ್ರಾಮ್ ನ ಜಹೂರ್ ಅಹಮದ್ ಚೌಧರಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.

ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರಾಹುಲ್, ಭಾರತವು ಬಾಂಗ್ಲಾದೇಶದ ವಿರುದ್ಧ ಆಕ್ರಮಣಕಾರಿ ಕ್ರಿಕೆಟ್ ಆಡಲಿದೆ ಎಂದಿದ್ದಾರೆ.

“ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ಮುಂದಿದೆ. ಆದ್ದರಿಂದ ನಾವು ಕೂಡ ಆಕ್ರಮಣಕಾರಿ ಆಗಿರಬೇಕಾಗುತ್ತದೆ. ಫೈನಲ್‌ ಗೆ ಅರ್ಹತೆ ಪಡೆಯಲು ನಾವು ಏನು ಮಾಡಬೇಕೆಂದು ನಮಗೆ ತಿಳಿದಿದೆ. ಪ್ರತಿ ದಿನ, ಪ್ರತಿ ಸೆಷನ್‌ನಲ್ಲಿ ನಾವು ಏನು ಮಾಡಬೇಕೆಂದು ನಿರ್ಣಯಿಸಬೇಕಾಗಿದೆ. ಆ ನಿರ್ದಿಷ್ಟ ಕ್ಷಣದಲ್ಲಿ ತಂಡಕ್ಕೆ ಅಗತ್ಯವಿದೆಯೋ ಅದನ್ನು ಮಾಡಲು ಪ್ರಯತ್ನಿಸುತ್ತೇವೆ” ಎಂದು ರಾಹುಲ್ ಹೇಳಿದರು.

“ನಾವು ಯಾವುದೇ ಸಿದ್ದ ಮನಸ್ಥಿತಿಯೊಂದಿಗೆ ಹೋಗುವುದಿಲ್ಲ. ನಾವು ಅಲ್ಲಿಗೆ ಹೋಗಿ ಆಕ್ರಮಣಕಾರಿ ಮತ್ತು ಧೈರ್ಯಶಾಲಿಯಾಗಿರಲು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

Advertisement

ಇದನ್ನೂ ಓದಿ:ಗಂಗಾವತಿ: ಗ್ರಾಮ ದೇವತೆ ದುರ್ಗಮ್ಮ ಜಾತ್ರೆ; ಕುಂಭ ಹೋರುವ ಸುಮಂಗಲಿಯರಿಗೆ ಸೀರೆಗಳ ವಿತರಣೆ

ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ತಂಡ ತನ್ನ ಆಕ್ರಮಣಕಾರಿ ನೀತಿಯಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಫಲಿತಾಂಶ ಕಾಣುತ್ತಿದೆ. ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಸರಣಿಯನ್ನೂ ಗೆದ್ದುಕೊಂಡಿದೆ. ಈ ಬಗ್ಗೆ ಮಾತನಾಡಿದ ರಾಹುಲ್, “ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಈ ಎರಡು ಪಂದ್ಯಗಳನ್ನು ವೀಕ್ಷಿಸಲು ನಿಜವಾಗಿಯೂ ತುಂಬಾ ರೋಮಾಂಚನಕಾರಿಯಾಗಿತ್ತು. ನಾನು ಟೆಸ್ಟ್ ಕ್ರಿಕೆಟನ್ನು ಆ ರೀತಿ ಆಡುವುದನ್ನು ನೋಡುವುದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ” ಎಂದರು.

ಪ್ರತಿ ತಂಡವು ಇಂಗ್ಲೆಂಡ್ ರೀತಿಯ ರಣತಂತ್ರವನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದರು. ಅದು ಅವರಿಗೆ ಫಲ ನೀಡಿರಬಹುದು. ಪ್ರತಿ ತಂಡವು ಅವರದೇ ಆದ ವಿಧಾನವನ್ನು ಹೊಂದಿದೆ. ಪ್ರತಿಯೊಬ್ಬರೂ ಇದೇ ರೀತಿ ಆಡಬೇಕೆಂದೇನು ಅಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕು ಎಂದು ರಾಹುಲ್ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next