Advertisement

AAP: ದಿಲ್ಲಿಯಲ್ಲಿ ಬೇಕಿದ್ದರೆ ಕಾಂಗ್ರೆಸ್‌ಗೆ 1 ಸ್ಥಾನ ಕೊಡುತ್ತೇವೆ: ಆಪ್‌

12:13 AM Feb 14, 2024 | Pranav MS |

ನವದೆಹಲಿ: ಲೋಕಸಭೆ ಚುನಾವಣೆ­ಯಲ್ಲಿ ದೆಹಲಿಯ 7 ಕ್ಷೇತ್ರಗಳಲ್ಲಿ ಪೈಕಿ ಒಂದನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಬಗ್ಗೆ ಆಪ್‌ ಹೇಳಿಕೆ ನೀಡಿದೆ. ಆ ಸ್ಥಾನದಲ್ಲಿ ಬೇಕಿದ್ದರೆ ಕಾಂಗ್ರೆಸ್‌ ಸ್ಪರ್ಧಿಸಲಿ. ಇಲ್ಲದೇ ಇದ್ದರೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಆಪ್‌ನ ಹಿರಿಯ ನಾಯಕ ಸಂದೀಪ್‌ ಪಾಠಕ್‌ ಹೇಳಿದ್ದಾರೆ.

Advertisement

“ವಾಸ್ತವವಾಗಿ ದೆಹಲಿಯ 1 ಸ್ಥಾನದಲ್ಲಿ ಸ್ಪರ್ಧಿಸಲೂ ಕಾಂಗ್ರೆಸ್‌ ಒಂದೂ ಸ್ಥಾನಕ್ಕೂ ಅರ್ಹವಾಗಿಲ್ಲ.ಇಂಡಿಯಾ ಮೈತ್ರಿಕೂಟದ ಧರ್ಮಕ್ಕೆ ಅನುಸಾರವಾಗಿ 1 ಸ್ಥಾನ ನೀಡಲು ತೀರ್ಮಾನಿಸಿದ್ದೇವೆ’ ಎಂದರು. ಲೋಕಸ ಭೆ ಮತ್ತು ವಿಧಾನಸಭೆ ಚುನಾ­ವಣೆಯಲ್ಲಿ ಕಾಂಗ್ರೆಸ್‌ ಸಾಧನೆ ಶೂನ್ಯ. ಅಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್‌ ಸತತವಾಗಿ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ’ ಎಂದು ಹೇಳಿದರು. ಉ.ಪ್ರದೇಶ ದಲ್ಲಿ ಕೂಡ ಎಸ್‌ಪಿ 11 ಕ್ಷೇತ್ರಗಳನ್ನು ನೀಡಿದೆ. ಪಕ್ಷದ ಅಧ್ಯಕ್ಷ ಅಖೀ­ಲೇಶ್‌ ಕಾಂಗ್ರೆಸ್‌ ಅದನ್ನು ಒಪ್ಪದಿದ್ದರೆ ಏಕಾಂಗಿ ಯಾಗಿ ಸ್ಪರ್ಧಿಸಲಿ ಎಂಬಂತೆ ಮಾತಾಡಿದ್ದರು. ಮೂಲ­ಗಳ ಪ್ರಕಾರ ಕಾಂಗ್ರೆಸ್‌ ದೆಹಲಿಯಲ್ಲಿ 4:3 ಸೀಟು ಹಂಚಿಕೆ ಸೂತ್ರ ಪ್ರಸ್ತಾಪಿಸಿತ್ತು. ಪಂಜಾಬ್‌ನಲ್ಲಿ ಆಪ್‌ ಏಕಾಂಗಿ ಸ್ಪರ್ಧೆ ಘೋಷಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next