Advertisement
ಕನಕಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಪರ ಪ್ರಚಾರ ನಡೆಸಿ ಮಾತನಾಡಿ,ರೈತರ ಆದಾಯ ಡಬಲ್ ಮಾಡುತ್ತೇವೆ ಎಂದವರು ತಮ್ಮ ಆದಾಯ ಡಬಲ್ ಮಾಡಿಕೊಂಡಿದ್ದು ಮನೆ ಮೇಲೆ ಮನೆ ಕಟ್ಟಿಸಿಕೊಂಡಿದ್ದಾರೆ. ದೇಶದ ರೈತ ಪ್ರತಿ ದಿನದ ಆದಾಯ 27 ರೂ. ಇದ್ದರೆ, ದೇಶದ ಪ್ರಧಾನಿ ಸ್ನೆಹಿತನ ಆದಾಯ ದಿನಕ್ಕೆ 16 ಸಾವಿರ ಕೋಟಿ ಇದೆ. ಜನಪರ ಕೆಲಸ ಮಾಡುವ ಯೋಜನೆಗಳನ್ನು ಮೋದಿ ತನ್ನ ಸ್ನೇಹಿತರಿಗೆ ಕೊಟ್ಟಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆ ಮುಚ್ಚಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಣ್ಣ, ಮಧ್ಯಮ ಕೈಗಾರಿಕೆ ಆರಂಭಿಸಿ ಅನುದಾನದ ನೆರವು ಕೊಡುವೆವು. ಬೀದರ್-ಚಾಮರಾಜನಗರ ವರೆಗೂ ಕೈಗಾರಿಕಾ ಟೌನ್ ಶಿಪ್ ಮಾಡುವೆವು. ದುಬೈ ಮಾದರಿ ಬೆಂಗಳೂರು ವಜ್ರದ ವ್ಯಾಪಾರ ಕೇಂದ್ರ ಮಾಡುವೆವು. ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗದ ಪಟ್ಟಣದ ಪರಿವರ್ತನೆ ಮಾಡುವೆವು. ಪ್ರಣಾಳಿಕೆಯ ಎಲ್ಲ ಯೋಜನೆ ಜಾರಿ ಮಾಡುವೆವು ಎಂದರು.
ಕರ್ನಾಟಕದ ಜನ ಅರ್ಜುನಂತೆ ಆಗಬೇಕು. ಮೀನಿನ ಕಣ್ಣಿಗೆ ಧ್ಯಾನದಿಂದ ಗುರಿಮಾಡಿ ಹೊಡೆಯುವ ರೀತಿ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಮತ ನೀಡಬೇಕು. ಯಾರ ಮಾತನ್ನೂ ಕೇಳಬೇಡಿ. ನಿಮ್ಮ ಧ್ಯಾನ ವಿಕಾಸ್, ಮಕ್ಕಳ ಶಿಕ್ಷಣ, ನಿಮ್ಮ ಸಮಸ್ಯೆಯ ಕಡೆ ಇರಲಿ. ನಿಮ್ಮ ನಾಯಕನು ಅಭಿವೃದ್ಧಿ ಮಾಡಲಿಲ್ಲ ಎಂದರೆ ಅವರು ನಾಯಕರಲ್ಲ. ಸರ್ಕಾರದ ಧರ್ಮ ಜನರ ಭವಿಷ್ಯ ಕಟ್ಟಬೇಕು. ಜನರ ವಿಕಾಸ, ಅಭಿವೃದ್ಧಿ ಮಾಡಬೇಕು. ನಿಮ್ಮ ಬಗ್ಗೆ ಏಳಿಗೆ ಬಗ್ಗೆ, ನಿಮ್ಮ ರಾಜ್ಯದ ಬಗ್ಗೆ ಜಾಗೃತರಾಬೇಕು. ಮತ ನೀಡುವ ಮೊದಲು ಬಿಜೆಪಿ ಏನು ಮಾಡಿದೆ ? ಕಾಂಗ್ರೆಸ್ ಏನು ಮಾಡಿದೆ ? ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಮತ ನೀಡಿ. ಪೂರ್ಣ ಬಹುಮತದ ಸರ್ಕಾರ ಕೊಡಿ. ದುರ್ಬಲ ಸರ್ಕಾರ ಕೊಡಬೇಡಿ. ಅವರು ಸರ್ಕಾರ ಉಳಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಾರೆ ಎಂದರು.