ಶಿವಮೊಗ್ಗ: ಕಾಂಗ್ರೆಸ್ ಯಾವಾಗಲೂ, ಎಲ್ಲವನ್ನೂ ವಿರೋಧ ಮಾಡುತ್ತದೆ,ಆದರೆ ನಾವಂತೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಂದೆ ಯಾವುದೇ ರೀತಿಯ ಮತಾಂತರವಾಗದಂತೆ ಎಚ್ಚರ ವಹಿಸುತ್ತೇವೆ,ಇನ್ನೂ ಬಲವಾದ ಕಾಯ್ದೆ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಚುನಾವಣೆ ಇಂದು ನಡೆಯುತ್ತಿದೆ. ಪರಿಷತ್ ನ 20 ಕ್ಷೇತ್ರದಲ್ಲಿ ಕನಿಷ್ಟ 15 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿ ಅರುಣ್ ಸೇರಿದಂತೆ 15 ಸ್ಥಾನ ನೂರಕ್ಕೆ ನೂರು ಗೆಲ್ಲುತ್ತೇವೆ. ಇದರಿಂದ ವಿಧಾನ ಪರಿಷತ್ ನಲ್ಲಿ ನಮಗೆ ಸ್ಪಷ್ಟ ಬಹುಮತ ಬರುತ್ತದೆ ಎಂದರು.
ಬೇರೆ ಯಾರೋ ಮೇಲೆ ಡಿಪೆಂಡ್ ಅಗುವುದು ತಪ್ಪಲಿದೆ. ಹೀಗಾಗಿ ಚುನಾವಣೆಯನ್ನು ನಮ್ಮೆಲ್ಲ ಎಂಎಲ್ ಎಗಳು, ಸಂಸದರು ಗಂಭೀರವಾಗಿ ಪರಿಗಣಿಸಿದ್ದರು. 400-500 ಮತಗಳ ಅಂತರದಲ್ಲಿ ಮೊದಲ ಸುತ್ತಿನಲ್ಲೇ ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ :ಹೆಲಿಕಾಪ್ಟರ್ ದುರಂತವನ್ನು ಸಂಭ್ರಮಿಸಿದವರನ್ನು ಯಾರೂ ಕ್ಷಮಿಸಬಾರದು: ಸಿಎಂ ಬೊಮ್ಮಾಯಿ
ಟೀಕೆ ಮಾಡುವವರಿಗೆ ಚುನಾವಣಾ ಫಲಿತಾಂಶದಲ್ಲಿ ಜನರೇ ಉತ್ತರ ಕೊಡುತ್ತಾರೆ. ಅನಗತ್ಯ ಟೀಕೆ-ಟಿಪ್ಪಣಿ ಮಾಡುವ ಸಿದ್ದರಾಮಯ್ಯನಂತವರಿಗೆ ನಾವು ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ.ಇದಕ್ಕೆಲ್ಲಾ ಜನರೇ ಅವರಿಗೆ ಉತ್ತರ ಕೊಡುತ್ತಾರೆ ಎಂದರು.
ಕ್ಯಾಬಿನೆಟ್ ವಿಸ್ತರಣೆ ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ ಎಂದರು.