Advertisement
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಸಚಿವ ಸ್ಥಾನ ಬಿಟ್ಟುಕೊಡಬೇಕು. ಪಕ್ಷದ ಸಂಘಟನೆಯ ಕಡೆ ಮುಖ ಮಾಡಬೇಕು. ಹಿರಿಯ ಸಚಿವರು ಹಳ್ಳಿ ಕಡೆಗೆ ನಮ್ಮ ನಡಿಗೆ ಅಂತ ಪಕ್ಷ ಸಂಘಟನೆ ಮಾಡಲು ಹೊರಡಲಿ. ಕ್ರಿಯಾಶೀಲರಾಗಿ ಕೆಲಸ.ಮಾಡುವ ಯುವಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಡಲಿ ಎಂದರು.
Related Articles
Advertisement
ರೇಣುಕಾಚಾರ್ಯ ಯಾರ ವಿರುದ್ಧ ದೂರು ಕೊಡಕು ದಿಲ್ಲಿಗೆ ಹೋಗಿದ್ದಾರೆ ಗೊತ್ತಿಲ್ಲ. ಸಂಪುಟ ವಿಸ್ತರಣೆ ಮಾಡುವ ಅಧಿಕಾರ ಸಿಎಂಗೆ ಇದೆ. ರೇಣುಕಾಚಾರ್ಯ ದೆಹಲಿಗೆ ಹೋಗಿ ಯಾರ ವಿರುದ್ಧ ದೂರು ಕೊಟ್ಟಿದ್ದಾರೆ ತಿಳಿದಿಲ್ಲ. ನಮ್ಮ ಅಸಮಾಧಾನ ತಣ್ಣಗಾಗಿಲ್ಲ. ಯಾರೂ ನಮ್ಮ ಜೊತೆ ಮಾತನಾಡಿಲ್ಲ. ಅಧ್ಯಕ್ಷರ ಜೊತೆ ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಯತ್ನಾಳ್ ಹೇಳಿದರು