Advertisement

ಭೂಮಿ ಮೇಲೆ ಪ್ರಳಯವಾದರೆ ನಾವು ಹೋಗುವುದೆಲ್ಲಿಗೆ?

11:04 AM Mar 02, 2017 | |

ಭೂಮಿ ಮೇಲೆ ಮನುಕುಲಕ್ಕೆ ಆಪತ್ತು ಎದುರಾದ ಪಕ್ಷದಲ್ಲಿ ವಲಸೆ ಹೋಗಲು ಮತ್ತೂಂದು ವಾಸಯೋಗ್ಯಗ್ರಹವನ್ನು ಹುಡುಕುವ ಪ್ರಯತ್ನ ನಡೆದೇ ಇದೆ. ಇಂತಹ ಒಂದು ಪ್ರಾಜೆಕ್ಟ್ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ “ಡಿಸ್ಕವರಿ ಪ್ರೋಗ್ರಾಂ’. ಇದರ ಒಂದು ಭಾಗ “ಕೆಪ್ಲರ್‌ ಅಬ್ಸರ್ವೇಟರಿ’.

Advertisement

ಭೂಮಿ ಮೇಲೆ ಮನುಷ್ಯ, ಶಾಪಿಂಗ್‌ ಮಾಲ್‌, ಶಾಲೆ, ಕಾಲೇಜು, ಕಛೇರಿ, ಬೀದಿ, ಟ್ರಾμಕ್ಕು ಯಾವುದನ್ನೂ ಬಿಡದಂತೆ ತಾನು ವಾಸಿಸುವ ಪ್ರದೇಶಗಳ ಮೇಲೆಲ್ಲಾ ನಿಗಾ ಇಡಲು, ಕಣ್ಗಾವಲಿಗಾಗಿ ಸೆಕ್ಯುರಿಟಿ ಗಾರ್ಡುಗಳು, ಸಿಸಿ ಟಿವಿ ಕ್ಯಾಮೆರಾಗಳು ಇವೆಲ್ಲವನ್ನೂ ಇರಿಸಿದ್ದಾನೆ. ಅವನಿಗೆ ಇನ್ನೊಬ್ಬರ ಕುರಿತು ಅಷ್ಟೊಂದು ಕುತೂಹಲ ಅಥವಾ ಭಯ. ಅವನ ಕುತೂಹಲ ಭೂಮಿಗೆ ಮಾತ್ರವೇ ಸೀಮಿತವಾಗಿಲ್ಲ, ಅಂತರಿಕ್ಷಕ್ಕೂ ವಿಸ್ತಾರಗೊಂಡಿದೆ. ಭೂಮಿ ಮೇಲೆ ಪ್ರಳಯವಾಗುತ್ತದೆ. ಅಂದು ಮನುಕುಲ ಭೂಮಿಯಿಂದ ನಶಿಸಿಹೋಗುತ್ತದೆ ಎಂಬ ವಿಚಾರ ಇಂದು ನೆನ್ನೆಯದಲ್ಲ. ಪುರಾಣಗಳಲ್ಲಿ, ಧಾರ್ಮಿಕ ಗ್ರಂಥಗಳಲ್ಲಿ ಈ ಕುರಿತು ಸುಳಿವುಗಳಿರುವುದರಿಂದ ಮನುಷ್ಯ ಈ ವಿಚಾರವನ್ನು ಗಂಭೀರವಾಗಿಯೇ ಪರಿಗಣಿಸಿದ್ದಾನೆ. ಆಸ್ತಿಕ ನಾಸ್ತಿಕರೆಂಬ ಭೇದ ಭಾವವಿಲ್ಲದೆ ಎಲ್ಲರೂ ಈ ಕುರಿತು ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೇ ಭೂಮಿ ಮೇಲೆ ಮನುಕುಲಕ್ಕೆ ಆಪತ್ತು ಎದುರಾದ ಪಕ್ಷದಲ್ಲಿ ಮತ್ತೂಂದು ವಾಸಯೋಗ್ಯ ಗ್ರಹವನ್ನು ಹುಡುಕುವ ಪ್ರಯತ್ನ ದಶಕಗಳಿಂದಲೂ ನಡೆದೇ ಇದೆ. ಇಂತಹ ಒಂದು ಪ್ರಾಜೆಕ್ಟ್ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ “ಡಿಸ್ಕವರಿ ಪ್ರೋಗ್ರಾಂ’. ಇದರ ಒಂದು ಭಾಗ “ಕೆಪ್ಲರ್‌’. 

“ಕೆಪ್ಲರ್‌’ ಅಂತರಿಕ್ಷದಲ್ಲಿ ತೇಲುತ್ತಿರುವ ಬಾಹ್ಯಾಕಾಶ ವೀಕ್ಷಣಾಲಯ(ಅಬ್ಸರ್ವೇಟರಿ). ನಮ್ಮದೇ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಇರಬಹುದಾದ ಭೂಮಿ ತರಹದ ಮತ್ತೂಂದು ಗ್ರಹದ ಸಂಶೋಧನೆಯೇ ಈ ವೀಕ್ಷಣಾಲಯದ ಗುರಿ. ಈ ವೀಕ್ಷಣಾಲಯಕ್ಕೆ ಖಗೋಳವಿಜ್ಞಾನಿ ಜೊಹಾನ್ಸ್‌ ಕೆಪ್ಲರ್‌ ಹೆಸರನ್ನು
ಇಡಲಾಗಿದೆ. 2009ರಲ್ಲಿ ಇದರ ಉಡಾವಣೆ ಪ್ರಕ್ರಿಯೆಗಳು ನಡೆದವು. ಈ ವೀಕ್ಷಣಾಲಯ ಅಂತರಿಕ್ಷದಲ್ಲಿ ತಾನು ಸಂಗ್ರಹಿಸಿದ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿತ್ತು. ಇಲ್ಲಿ ವಿಜ್ಞಾನಿಗಳು ಮಾಹಿತಿಯನ್ನು ಪರಿಷ್ಕರಿಸಿ ಅಧ್ಯಯನ ನಡೆಸುತ್ತಿದ್ದರು. ಇಲ್ಲೀವರೆಗೆ ಇದು ಸಾವಿರಕ್ಕೂ ಹೆಚ್ಚಿನ ವಾಸಯೋಗ್ಯವೆಂದು ಅನುಮಾನಿಸಿದ ಗ್ರಹಗಳ ಪಟ್ಟಿಯನ್ನು ನಮಗೆ ನೀಡಿದೆ. ಅವುಗಳಲ್ಲಿ ನೂರಾದರೂ ಭೂಮಿಯನ್ನು ಹೋಲುತ್ತವೆ. “ಕೆಪ್ಲರ್‌- 452ಬಿ’ ಹೆಸರಿನ ಗ್ರಹ ಅಂಥವುಗಳಲ್ಲೊಂದು. ಭೂಮಿಯಿಂದ 1400 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಮಿಕ್ಕ ಗ್ರಹಗಳಿಗೆ ಹೋಲಿಸಿದರೆ ಈ ದೂರ ಕಡಿಮೆಯೇ! ಕೆಪ್ಲರ್‌ ಕೆಲ ವರ್ಷಗಳ ಹಿಂದೆ ಕೆಟ್ಟು ನಿಂತಿತ್ತು. ಆದರೆ ತಾತ್ಕಾಲಿಕವಾಗಿ ಅದನ್ನು ಸಿದ್ಧಪಡಿಸಲಾಯಿತಾದರೂ ಪೂರ್ತಿ 
ಸರಿಮಾಡಲಾಗಿರಲಿಲ್ಲ. ಇದು ಅಧ್ಯಯನವನ್ನು ಸ್ವಲ್ಪಮಟ್ಟಿಗೆ ಕುಂಠಿತಗೊಳಿಸಿತು ಎನ್ನಬಹುದು. ಆದರೆ ಎಂದೂ ಪೂರ್ತಿ ಕೆಟ್ಟು  ನಿಲ್ಲಲಿಲ್ಲ. ಊನಗೊಂಡಿದ್ದರೂ ಕೆಪ್ಲರ್‌ ವಿಜ್ಞಾನಿಗಳಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಲೇ ಇದೆ. ಪ್ರತಿ ವರ್ಷ ನೂರಾರು ವಾಸಯೋಗ್ಯ ಭೂಮಿಗಳನ್ನು ಪತ್ತೆ ಮಾಡುವಲ್ಲಿ ವಿಜ್ಞಾನಿಗಳಿಗೆ ನೆರವು ನೀಡುತ್ತಲೇ ಇದೆ.

ಇಲ್ಲಿಯವರೆಗೆ ಬ್ರಹ್ಮಾಂಡದಲ್ಲಿ ಸುಮಾರು 5000 ವಾಸಯೋಗ್ಯವೆಂದು ಅನುಮಾನವಿರುವ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ 3,200 ಗ್ರಹಗಳನ್ನು ವಾಸಯೋಗ್ಯವೆಂದು ಶರಾ ಬರೆದಿದ್ದಾರೆ. ಈ 3200 ವಾಸಯೋಗ್ಯ ಗ್ರಹಗಳಲ್ಲಿ ಸುಮಾರು 2325 ಗ್ರಹಗಳನ್ನು
ಪತ್ತೆ ಹಚ್ಚಿದ್ದು ಕೆಪ್ಲರ್‌ ವೀಕ್ಷಣಾಲಯ. ಹಾಗಾಗಿ ವೃಥಾ ಭಯ ಪಡದಿರಿ; ಹಾಗೊಂದು ವೇಳೆ ಮುಂದೊಮ್ಮೆ ಪ್ರಳಯವಾಗಿದ್ದೇ ಆದಲ್ಲಿ, ಆ ಸಮಯಕ್ಕೆ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲು ಯೋಜನೆಗಳು ಸಿದ್ಧವಾಗಿರುತ್ತವೆ. ನಾವಾಗ ಗಂಟು ಮೂಟೆ ಕಟ್ಟಿಕೊಂಡು ಒಂದೂರಿನಿಂದ ಇನ್ನೊಂದೂರಿಗೆ ಗುಳೇ
ಹೋಗುವಂತೆ ಈ ಗ್ರಹದಿಂದ ಮತ್ತೂಂದು ಗ್ರಹಕ್ಕೆ ಗುಳೇ ಹೊರಡಬೇಕಾಗುತ್ತದೆ! 

ಹರ್ಷವರ್ಧನ್‌ ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next