Advertisement
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ವತಿಯಿಂದ ದೈವಜ್ಞ ವಿದ್ವಾನ್ ಹೆರ್ಗ ರವೀಂದ್ರ ಭಟ್ ಇವರ ಸಂಯೋಜನೆಯಲ್ಲಿ ಡಿ.23ರಂದು ಸಂಜೆ ಮಾಟುಂಗಾದಲ್ಲಿನ ಮೈಸೂರು ಅಸೋ. ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ತುಳು ಸತ್ಸಂಗ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ನಮ್ಮ ನಾಡಿ ಭಾಷೆ, ಸಂಸ್ಕೃತಿ ಬೆಳೆದು ಮುಂದಿನ ಪೀಳಿಗೆಗೆ ಉಪಯೋಗಬೇಕು ಮತ್ತು ತುಳು ಭಾಷೆಗೆ ಉತ್ತಮ ಸ್ಥಾನಮಾನ ದೊರೆಯಬೇಕು ಎಂಬ ಉದ್ದೇಶದಿಂದ ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರ ಸಂಯೋಜನೆಯಲ್ಲಿ ಮೊದಲ ಬಾರಿಗೆ ಮುಂಬ ಯಿಯಲ್ಲಿ ಆಯೋಜಿಸಲಾಯಿತು. ಇಂತಹ ಕಾರ್ಯಕ್ರಮಗಳು ನಿರಂತರ ನಡೆ ಯುತ್ತಿರಲಿ ಎಂಬುದೇ ನಮ್ಮ ಆಶಯವಾಗಿದೆ ಎಂದರು.
Related Articles
Advertisement
ಇದೇ ಸಂದರ್ಭದಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಗೆ ವಿಶೇಷ ಕೊಡುಗೆಯನ್ನು ನೀಡಿದ ಹಿರಿಯ ಸಾಹಿತಿ ಎಚ್.ಬಿ.ಎಲ್ ರಾವ್ ಹಾಗೂ ಹಿರಿಯ ಹೊಟೇಲ್ ಉದ್ಯಮಿ, ದಾನಿ, ಸಮಾಜಸೇವಕ ಶಿವರಾಮ್ ಜಿ. ಶೆಟ್ಟಿ ಅಜೆಕಾರು ಅವರನ್ನು ಶ್ರೀಗಳ ಹಸ್ತದಿಂದ ತುಳು ರತ್ನ ಪ್ರಶಸ್ತಿ ನೀಡುವುದರೊಂದಿಗೆ ಸಮ್ಮಾನಿಸಲಾಯಿತು.
ಸಮ್ಮಾನಕ್ಕೆ ಉತ್ತರಿಸಿದ ಎಚ್. ಬಿ. ಎಲ್ ರಾವ್ ಅವರು, ಸುಬ್ರಹ್ಮಣ್ಯ ಮಠವು ಮಠ ಸಂಸ್ಕೃತಿಯಿಂದ ಒಂದು ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂಬ ದೃಷ್ಟಿಯಿಂದ ಕಾರ್ಯಕ್ರ ಮವನ್ನು ನೀಡುತ್ತಿರುವುದು ಅಭಿನಂದನೀಯ ಎಂದು ನುಡಿದರು.
ಇನ್ನೋರ್ವ ಸಮ್ಮಾನಿತ ಶಿವರಾಮ್ ಜಿ. ಶೆಟ್ಟಿ ಅಜೆಕಾರು ಅವರು ಮಾತನಾಡಿ, ತುಳುನಾಡಿ ನಲ್ಲಿರುವಂತಹ ಸಂಸ್ಕೃತಿ-ಸಂಸ್ಕಾರ ಬೇರೆಲ್ಲಿಯೂ ನಮಗೆ ದೊರೆಯದು. ಇಂತಹ ಉತ್ತಮ ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕ್ರಿಯಾಶೀಲರಾಗಬೇಕು ಎಂದರು. ಪ್ರಾರಂಭ ದಲ್ಲಿ ವಿದ್ವಾನ್ ಹರಿದಾಸ್ ಭಟ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಕಾರ್ಯಕ್ರಮಕ್ಕಿಂತ ಮೊದಲು ತುಳು ಸತ್ಸಂಗದ ಸಂಯೋಜಕರಾದ ದೈವಜ್ಞ ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರಿಂದ ವಿಶೇಷ ರೀತಿಯಲ್ಲಿ ತುಳು ನಾಡಿನ ಸಂಸ್ಕೃತಿ, ಭಾಷೆ, ಭೂತಾರಾಧನೆ, ನಾಗಾರಾಧನೆ ಕುರಿತು ಪ್ರವಚನ ಕಾರ್ಯಕ್ರಮವು ಜರಗಿತು. ಅದರೊಂದಿಗೆ ಉಡುಪಿಯ ವಿದೂಷಿ ಶಾಲಿನಿ ಆಚಾರ್ಯ ಅವರ ನೇತೃತ್ವದ ನರ್ತಕಿ ಕಲಾ ತಂಡದವರಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯರೂಪಕವು ಪ್ರದರ್ಶನಗೊಂಡಿತು.
ಶ್ರೀಗಳನ್ನು ಸುಬ್ರಹ್ಮಣ್ಯ ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕರಾದ ವಿಷ್ಣು ಕಾರಂತ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಹಾರಾ ರ್ಪಣೆಗೈದು ಫಲಪುಷ್ಪ ನೀಡಿ ಗೌರವಿಸಿದರು. ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಕಾರ್ಯಕ್ರಮದ ನಿರೂಪಣೆಗೈದರು.
ಚಿತ್ರ-ವರದಿ: ಸುಭಾಷ್ ಶಿರಿಯಾ