Advertisement

ಮೊದಲು ನಾವು ಬದಲಾಗಬೇಕು:  ನ್ಯಾ|ಸಂತೋಷ್‌ ಹೆಗ್ಡೆ]

06:25 AM Mar 08, 2018 | |

ಕೋಟ: ಪ್ರಸಕ್ತ ಕಾಲಘಟ್ಟದಲ್ಲಿ ಸಮಾಜವನ್ನು ಬದಲಾಯಿಸುತ್ತೇನೆ ಎನ್ನುವುದು ಕಷ್ಟದ ಕೆಲಸ. ಆದ್ದರಿಂದ ಮೊದಲು ನಾವು ಬದಲಾದರೆ ಸಮಾಜ ತಾನಾಗಿಯೇ ಬದಲಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಹೇಳಿದರು.

Advertisement

ಅವರು ಟಿಫ್‌ಶೆಷನ್ಸ್‌ ಕೋಸ್ಟಲ್‌ ಎಡಿಟ್‌ ಸಂಸ್ಥೆ ವತಿಯಿಂದ, ಲಕ್ಷ್ಮೀ ಸೋಮಬಂಗೇರ ಸ. ಪ್ರ. ದರ್ಜೆ ಕಾಲೇಜು ಮಣೂರು ಪಡುಕರೆ ಇವರ ಸಹಕಾರದೊಂದಿಗೆ ಮಾ. 6ರಂದು ಕೋಟ ಕಾರಂತ ಕಲಾಭವನದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜರಗಿದ ಯುವ ಪ್ರೇರಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಸಮಾಜದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಜೀವನ ಸಾಗಿಸಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ಪ್ರಕಟನೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನು ವಿವಿಧ ಸ್ತರದಲ್ಲಿ ವಿಂಗಡನೆ ಮಾಡಿದರೆ ನ್ಯಾಯದಾನ ಸ್ವಲ್ಪಮಟ್ಟಿಗೆ ವೇಗ ಪಡೆಯಬಹುದು ಎಂದರು.

ಶಾಸನ ರಚನೆಯಲ್ಲಿ
ಭಾಗವಹಿಸಬೇಕು

ಶಾಸಕ, ಸಂಸದ ಯಾವುದೇ ಜನಪ್ರತಿನಿಧಿ ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಶಾಸನ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇಲ್ಲವಾದರೆ ಆತ ಯಶಸ್ವಿ ಜನಪ್ರತಿನಿಧಿಯಾಗಲಾರ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಯುವ ಜನಾಂಗ ಮತ್ತು ಅಪರಾಧ ಪ್ರಕರಣಗಳು ಎನ್ನುವ ವಿಚಾರದ ಕುರಿತು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಕಾರ್ಯತಂತ್ರದ ಕುರಿತು ಉಪನ್ಯಾಸಕ ಪ್ರಶಾಂತ ನೀಲಾವರ ವಿಚಾರ ಮಂಡಿಸಿದರು.

Advertisement

ಪಡುಕರೆ ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್‌ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದ ಸಂಘಟಕಿ ದಿವ್ಯಾ ಜೆ.ಪಿ. ಹೆಗ್ಡೆ ಹಾಗೂ ವಿನಯ ಕುಮಾರ್‌ ಕಬ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next